• Home
  • »
  • News
  • »
  • astrology
  • »
  • January Prediction 2023: ಜನವರಿಯಲ್ಲಿ ಈ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದಿರಿ

January Prediction 2023: ಜನವರಿಯಲ್ಲಿ ಈ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Monthly Zodiac Sign: ಹೊಸವರ್ಷ ಹೊಸ್ತಿಲಲ್ಲಿ ಇರುವ ನಮಗೆ ಭವಿಷ್ಯದ ಬಗ್ಗೆ ಬಹಳ ಯೋಚನೆ ಇರುತ್ತದೆ. ನಮ್ಮ ಮುಂದಿನ ದಿನಗಳು ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಲು ಬಯಸುತ್ತೇವೆ. ಹಾಗೆಯೇ 2023ರ ಜನವರಿಯಲ್ಲಿ 12 ರಾಶಿಗಳ ಫಲಾಫಲ ಹೇಗಿರಲಿದೆ ಎಂಬುದು ಇಲ್ಲಿದೆ. 

  • Share this:

ಹೊಸವರ್ಷ (New Year)  ಹೊಸ್ತಿಲಲ್ಲಿ ಇರುವ ನಮಗೆ ಭವಿಷ್ಯದ ಬಗ್ಗೆ ಬಹಳ ಯೋಚನೆ ಇರುತ್ತದೆ. ನಮ್ಮ ಮುಂದಿನ ದಿನಗಳು ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಲು ಬಯಸುತ್ತೇವೆ. ನಮ್ಮ ಜೀವನದಲ್ಲಿ (Life) ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಭವಿಷ್ಯದಲ್ಲಿ (future) ಯಾವುದೇ ತೊಂದರೆ ಬರದಂತೆ ಏನು ಮಾಡಬೇಕು, ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಜಾತಕ (Horoscope) ತೋರಿಸುವುದು ಸೇರಿದಂತೆ ಅನೇಕ ವಿಧಗಳನ್ನು ಅನುಸರಿಸಲಾಗುತ್ತದೆ.  ಹಾಗೆಯೇ 2023ರ ಜನವರಿಯಲ್ಲಿ 12 ರಾಶಿಗಳ ಫಲಾಫಲ ಹೇಗಿರಲಿದೆ ಎಂಬುದು ಇಲ್ಲಿದೆ. 


ಮೇಷ


ಹೊಸ ತಿಂಗಳು ಈ ರಾಶಿಯವರಿಗೆ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಬರುತ್ತದೆ. ಆದರೂ ಸಣ್ಣ ಆರೋಗ್ಯ ಸಮಸ್ಯೆಗಳಿರಬಹುದು, ತಕ್ಷಣದ ಗಮನ ಬೇಕಾಗಬಹುದು.


ವೈಯಕ್ತಿಕ ಜೀವನ: ನಿಮ್ಮ ಹತ್ತಿರದ ವ್ಯಕ್ತಿಯೊಬ್ಬರು ನಿಮ್ಮಿಂದ ದೂರಾಗುವ ಸಾಧ್ಯತೆ ಇದೆ. ಕೆಲವೊಂದು ವಿಚಾರಗಳಿಗೆ ಹೆಚ್ಚಿನ ಗಮನ ಬೇಕಾಗಬಹುದು.  ವೃತ್ತಿ ಜೀವನ: ಕೆಲಸದಲ್ಲಿ  ಹೊಸ ಜವಾಬ್ದಾರಿ ನಿಮ್ಮನ್ನ ಹುಡುಕಿ ಬರಲಿದೆ. ಆಫೀಸ್​ನಲ್ಲಿ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗಬಹುದು. ನಿಮ್ಮ ಕೌಶಲ್ಯಗಳನ್ನು ನೀವು ಈಗ ಸುಧಾರಿಸಿಕೊಳ್ಳ ಬೇಕಿರುವ ಸಮಯ ಇದು. ನಿಮಗಾಗಿ ಕೆಲವು ಉತ್ತಮ ಅವಕಾಶಗಳು ಹುಡುಕಿ ಬರುತ್ತಿದೆ. ಅದರಿಂದ ಮುಂದಿನ ದಿನಗಳಲ್ಲಿ ಲಾಭ ಜಾಸ್ತಿ ಎನ್ನಬಹುದು.


ಅದೃಷ್ಟದ ಬಣ್ಣ: ಡಾರ್ಕ್  ಕೆಂಪು 


ವೃಷಭ


ಈ ಬಾರಿ ಒಂದು ಸವಾಲು ಪದೇ ಪದೇ ನಿಮ್ಮ ಬೆನ್ನು ಬೀಳಬಹುದು. ಹಾಗಾಗಿ ಎಲ್ಲಾ ರೀತಿಯಲ್ಲಿ ಸಿದ್ದವಾಗಿರುವುದು ಉತ್ತಮ. ಕೆಲಸದ ಸ್ಥಳದಲ್ಲಿ ಹೊಸ ಅವಕಾಶವು ನಿಮ್ಮ ಇಮೇಜ್ ಹೆಚ್ಚಿಸಲು ಸಹಾಯ ಮಾಡಬಹುದು. ಬಹಳ ದಿನಗಳಿಂದ ಕಾಯುತ್ತಿದ್ದ ಹಣಕಾಸಿನ ಸಹಾಯ ಸಿಗುತ್ತದೆ. ನಿಮ್ಮ ಹೆತ್ತವರ ಬಯಕೆ ಈಡೇರಿಸಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ.  ವೈಯಕ್ತಿಕ ಜೀವನ: ನಿಮಗೆ ಈ ಸಮಯದಲ್ಲಿ ಕಠಿಣ ಪರಿಸ್ಥಿತಿ ಎನ್ನಬಹುದು. ನಿಮ್ಮ ಮೇಲೆ ಭಾವನಾತ್ಮಕವಾಗಿ ಅವಲಂಬಿತರಾಗಿರುವ ಜನರು ಸ್ವಲ್ಪ ಮುನಿಸಿಕೊಳ್ಳಬಹುದು.   ವೃತ್ತಿ: ಹಳೆಯ ಅವಕಾಶವು ಮರಳಿ ಬರಬಹುದು. ಪ್ರಸ್ತುತ ಸಮಯವು ಆಶಾದಾಯಕವಾಗಿದೆ ಎಂದರೆ ತಪ್ಪಲ್ಲ. ತ್ವರಿತ ನಿರ್ಧಾರಗಳು ನಿಮಗೆ ಸಹಾಯಕವಾಗಬಹುದು.


ಅದೃಷ್ಟದ ಬಣ್ಣ: ಡೀಪ್ ಮೆರೂನ್ 


ಮಿಥುನ  


ನಿಮ್ಮ ಕೆಲಸದ ಗಮನವನ್ನು ಇಟ್ಟುಕೊಳ್ಳುವುದರಿಂದ ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ಈಗ ನಿಮ್ಮ ದಾರಿಯಲ್ಲಿ ಅನೇಕ ಗೊಂದಲಗಳು ಉಂಟಾಗಬಹುದು. ಅಕ್ಕ-ಪಕ್ಕದ ಜನರ ಮಾತು ನಿಮಗೆ ಸ್ವಲ್ಪ ತೊಂದರೆ ಉಂಟುಮಾಡಬಹುದು. ಒಂದು ಸಣ್ಣ ಪ್ರವಾಸ ಈ ತಿಂಗಳು ನಿಮಗೆ ರಿಲ್ಯಾಕ್ಸ್ ನೀಡುತ್ತದೆ.  ವೈಯಕ್ತಿಕ ಜೀವನ: ನಿಮ್ಮ ಹಳೆಯ ಸಂಬಂಧದಲ್ಲಿ ಹೊಸ ಸವಾಲುಗಳು ಉಂಟಾಗುತ್ತದೆ. ಹಾಗೆಯೇ, ನೀವು ಅವರಿಂದ ದೂರವಾದಂತೆಯೂ ಅನಿಸಬಹುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವುದು ಏಕೈಕ ಪರಿಹಾರ ಎನ್ನಬಹುದು. ವೃತ್ತಿ: ಹೊಸ ಉದ್ಯೋಗದ ವಿಚಾರವಾಗಿ ಕುಟುಂಬದ ಸ್ನೇಹಿತರಿಂದ ಸಲಹೆ ಬರಬಹುದು. ನೀವು ಈಗಾಗಲೇ ಸಂದರ್ಶನವನ್ನು ನೀಡಿದ್ದರೆ, ಕೆಲಸ ಸಿಗುವ ಅವಕಾಶಗಳು ಹೆಚ್ಚಿದೆ.
ಅದೃಷ್ಟದ ಬಣ್ಣ: ಫ್ಯೂಷಿಯಾ 


ಕಟಕ


ಈ ತಿಂಗಳು ಸ್ವಲ್ಪ ಕೆಲಸ ಹೆಚ್ಚಾಗಬಹುದು, ಮಕ್ಕಳಿಗಾಗಿ ಸಮಯ ಮೀಸಲಿಡುವುದು ಉತ್ತಮ. ವೈಯಕ್ತಿಕ ಜೀವನದ ವಿಚಾರದಲ್ಲಿ ಭಾವನಾತ್ಮಕವಾಗಿ ಕೆಲ ಸಮಸ್ಯೆ ಎದುರಿಸುತ್ತೀರಿ. ಸ್ವಲ್ಪ ಸಮಸ್ಯೆಗಳು ಎದುರಾಗಬಹುದು. ವೃತ್ತಿ: ಹಣದ ಹರಿವು ಈ ತಿಂಗಳು ಉತ್ತಮವಾಗಿರುತ್ತದೆ. ಕೆಲಸದ ವಿಚಾರಕ್ಕೆ ಪ್ರಯಾಣ ಮಾಡುವುದು ಬೇಡ. ಸಮಸ್ಯೆಯ ಬಗ್ಗೆ ನಿಮ್ಮ ಹಿರಿಯರೊಂದಿಗೆ ನೀವು ಮಾತನಾಡುವುದು ಮುಖ್ಯ.


ಅದೃಷ್ಟ ಬಣ್ಣ: ಸಾಸಿವೆ ಬಣ್ಣ 


ಸಿಂಹ


ಇತರ ವ್ಯಕ್ತಿಗಳ ಉದ್ದೇಶವನ್ನು ಅರ್ಥಮಾಡಿಕೊಂಡ ನಂತರವೂ, ನೀವು ಇನ್ನೂ ಅಪಾಯವನ್ನು ಅರ್ಥ ಮಾಡಿಕೊಳ್ಳದಿದ್ದರೆ ನಿಮಗೆ ಸಮಸ್ಯೆ ಜಾಸ್ತಿ. ನಿಮ್ಮ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸುವುದು ಈ ಸಮಯದಲ್ಲಿ ಮುಖ್ಯವಾಗುತ್ತದೆ. ವೈಯಕ್ತಿಕ ವಿಚಾರಕ್ಕೆ ಬಂದರೆ ಸಂಗಾತಿಯ ಮಾತಿಗೆ ನೀವು ಬೆಲೆ ಕೊಡಬೇಕು. ಹಾಗೆಯೇ ಸ್ವಲ್ಪ ತಾಳ್ಮೆ ಸಹ ಅಗತ್ಯ ಎನ್ನಬಹುದು.  ವೃತ್ತಿ: ಕೆಲಸದಲ್ಲಿ ಪ್ರಸ್ತುತ ಯೋಜನೆಗೆ ನೀವು ಬ್ಯಾಕಪ್ ಇಟ್ಟುಕೊಳ್ಳುವುದು ಬಹಳ ಉತ್ತಮ. ಸಹೋದ್ಯೋಗಿ ನಿಮ್ಮ ಹೆಸರನ್ನು ಕದಿಯಲು ಪ್ರಯತ್ನಿಸಬಹುದು.


ಅದೃಷ್ಟದ ಬಣ್ಣ: ರೂಬಿ ಪಿಂಕ್ 


ಕನ್ಯಾ


ಮೊದಲ ತಿಂಗಳೇ ಇಡೀ ವರ್ಷದ ಯೋಜನೆ ಮಾಡುವುದು ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ಪ್ರಸ್ತುತ ಕೆಲಸವನ್ನು ಮುಗಿಸುವುದು ಬಹಳ ಮುಖ್ಯ. ಸಂಬಂಧದ ವಿಚಾರಕ್ಕೆ ಬಂದರೆ ನಿಮ್ಮ ಸ್ಥಾನ ಚೆನ್ನಾಘಿರುತ್ತದೆ. ನಿಮ್ಮ ಸಂಸಾರದಲ್ಲಿ ಯಾರೂ ಮೂಗು ತೋರಿಸದಂತೆ ನೋಡಿಕೊಳ್ಳಿ. ವೃತ್ತಿ: ನಿಮಗೆ ಹೊಸ ಆಫರ್ ಬಂದರೆ ಅದನ್ನು ತಿರಸ್ಕರಿಸುವುದು ಉತ್ತಮ. ನಿಮ್ಮ ಮುಂದಿನ ಹೆಜ್ಜೆಯನ್ನು ಜನರು ಗಮನಿಸುತ್ತಿರುತ್ತಾರೆ. ಅದೃಷ್ಟದ ಬಣ್ಣ: ಮಜೆಂಟಾ 


ತುಲಾ


ಅರ್ಧದಲ್ಲಿ ಬಿಟ್ಟ ಕೆಲಸವನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ ಎನ್ನಬಹುದು.ಮುಂದೆ ಏನು ಮಾಡಬೇಕೆಂದು ಬಹಳಷ್ಟು ಜನರು ನಿಮಗೆ ಸಲಹೆ ನೀಡಲು ಬರುತ್ತಾರೆ ಆದರೆ, ನೀವು ನಿಮ್ಮ ಮನಸ್ಸಿನ ಮಾತು ಕೇಳಿ. ಅನಾರೋಗ್ಯದ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ. ಸಂಬಂಧದ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ನಿಮ್ಮ ಪರವಾಗಿ ನಿಲ್ಲಲು ನೀವು ಸ್ವಲ್ಪ ಧೈರ್ಯವನ್ನು ತೋರಿಸಬೇಕಾಗಬಹುದು. ವೃತ್ತಿ: ಕೆಲಸದ ಸ್ಥಳದಲ್ಲಿ ತ್ವರಿತ ಬೆಳವಣಿಗೆಗಳು ಉಂಟಾಗಬಹುದು. ನೀವು ಯಾರನ್ನಾದರೂ ನಿರ್ದಿಷ್ಟವಾಗಿ ನಿರ್ಲಕ್ಷಿಸುತ್ತಿದ್ದರೆ, ಶೀಘ್ರದಲ್ಲೇ ಅದು ತಪ್ಪು ಎಂದು ಅರ್ಥ ಆಗುತ್ತದೆ. ನಿಮ್ಮ ಸುತ್ತಲಿನ ಹೊಸ ಬೆಳವಣಿಗೆಗಳ ಬಗ್ಗೆ ಎಚ್ಚರದಿಂದಿರಿ.


ಅದೃಷ್ಟದ ಬಣ್ಣ: ಆರ್ಕಿಡ್ 


ವೃಶ್ಚಿಕ


ನೀವು ಕೆಲವು ದಿನಗಳ ಹಿಂದೆ ತೆಗೆದುಕೊಂಡಿರುವ ಕೆಲವು ನಿರ್ಧಾರಗಳು ಸರಿಯಾದ ಲಾಭ ನೀಡದಿರಬಹುದು. ಕೆಲ ಕಾರಣಗಳಿಂದ ಇತರರು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ಮದುವೆಯ ಆಫರ್ ಬರಬಹುದು. ಇನ್ನು ಸಂಬಂಧದ ವಿಚಾರಕ್ಕೆ ಬಂದರೆ ಬಾಲ್ಯದ ಗೆಳೆಯ ನಿಮ್ಮ ಬಗ್ಗೆ ಆಸಕ್ತಿ ಹೊಂದಿರಬಹುದು. ಅಲ್ಲದೇ ಇದರ ಜೊತೆಗೆ ಅನೇಕ ಆಫರ್​ಗಳು ಬರಬಹುದು.  ವೃತ್ತಿ: ಕೆಲಸದ ವಿಚಾರದಲ್ಲಿ ಸಹ ಸ್ವಲ್ಪ ಗೊಂದಲಗಳು ಉಂಟಾಗುತ್ತದೆ. ಈ ತಿಂಗಳು ಪೆಂಡಿಂಗ್ ಇದ್ದ ಹಲವಾರು ಕೆಲಸಗಳು ಪೂರ್ಣವಾಗುತ್ತದೆ. ನಿಮ್ಮ ಗಮನ ಮತ್ತು ಏಕಾಗ್ರತೆಯು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.


ಅದೃಷ್ಟ ಬಣ್ಣ: ಸಯಾನ್ 


ಇದನ್ನೂ ಓದಿ: 2023ರಲ್ಲಿ ಸಂತೋಷದ ಸಾಗರದಲ್ಲಿ ತೇಲಾಡಲಿದ್ದಾರೆ ಈ ರಾಶಿಯವರು


ಧನಸ್ಸು


ನಿಮಗೆ ಯಾವುದೇ ಕೆಲಸ ಸರಿಯಾಗಿ ಮಾಡಲು ಬರದಿದ್ದರೆ, ಅದನ್ನು ಮಾಡಲು ಹೋಗಬೇಡಿ. ನಿಮ್ಮ ಮಕ್ಕಳು ಕೆಲ ಸಮಸ್ಯೆಗಳನ್ನು ಅನುಭವಿಸಬಹುದು. ನೀವು ಕಳೆದುಕೊಂಡಿರಬಹುದಾದ ಯಾವುದೋ ಪ್ರಮುಖ ವಸ್ತು ನಿಮಗೆ ಮರಳಿ ಸಿಗುತ್ತದೆ. ಸಂಬಂಧಿಕರು ನಿಮ್ಮ ನಿರ್ಧಾರವನ್ನು ಬೆಂಬಲಿಸಬಹುದು. ಸಂಬಂಧದ ವಿಚಾರಕ್ಕೆ ಬಂದರೆ ನೀವು ಕೆಲವು ಸಮಸ್ಯೆಯನ್ನು ಅನುಭವಿಸಬಹುದು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಮುಂಚಿತವಾಗಿ ಚರ್ಚೆ ನಡೆಸುವುದು ಮುಖ್ಯ. ವೃತ್ತಿ: ಕಳೆದ ಕೆಲವು ತಿಂಗಳುಗಳಲ್ಲಿ ಹಣಕಾಸು ಸಮಸ್ಯೆಯಾಗಿರಬಹುದು ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತದೆ. ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಯೋಚನೆ ಮಾಡಬೇಕು.


ಅದೃಷ್ಟದ ಬಣ್ಣ: ಡಾರ್ಕ್ ರೆಡ್​ 


ಮಕರ


ಆರ್ಥಿಕ ಬಿಕ್ಕಟ್ಟು ಕೊನೆಗೂ ಮುಗಿಯುವ ಸಾಧ್ಯತೆ ಇದೆ. ಆಫೀಸ್​ನಲ್ಲಿ ಬಂದಿರುವ ಹೊಸ ವ್ಯಕ್ತಿಯು ಒಳ್ಳೆಯ ಕಾರಣಗಳಿಗಾಗಿ ನಿಮ್ಮ ಗಮನವನ್ನು ಸೆಳೆಯಬಹುದು. ಕಠಿಣ ಕಾರ್ಯಗಳನ್ನು ನಿರ್ವಹಿಸಲು ನೀವು ಸರಳವಾದ ವಿಧಾನವನ್ನು ಪ್ರಯತ್ನಿಸುವುದು ಬಹಳ ಮುಖ್ಯ. ಹಾಗೆಯೇ, ಸಂಬಂಧದ ವಿಚಾರದಲ್ಲಿ ಹೊಸ ಅಧ್ಯಾಯ ಆರಂಬವಾಗಲಿದೆ. ಬಿಟ್ಟು ಹೋದ ವ್ಯಕ್ತಿ ಮರಳಿ ಬರುವ ಸಾಧ್ಯತೆ ಇದೆ.  ವೃತ್ತಿಜೀವನ: ಕಳೆದ ಬಾರಿ ನೀವು ಕಳೆದುಕೊಂಡಿರಬಹುದಾದ ಸುವರ್ಣ ಅವಕಾಶ ಮತ್ತೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಹತ್ತಿರದ ಕೆಲಸದ ರಹಸ್ಯಗಳನ್ನು ಬೇರೆಯವರಿಗೆ ಹೇಳಬಹುದು. ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳುವುದು ಉತ್ತಮ ಮಾರ್ಗ.


ಅದೃಷ್ಟ ಬಣ್ಣ: ಕೆಂಪು 


ಕುಂಭ


ನಿಮ್ಮ ಸುತ್ತಲಿನ ಪರಿಸರ ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು, ಆದ್ದರಿಂದ ನಿಮ್ಮ ಕೆಲಸಗಳು ಬೇಗ ಆಗುವುದಿಲ್ಲ, ಯಾರದ್ದಾದರೂ ಗಮನವನ್ನು ಸೆಳೆಯಲು ನೀವು ಹೊಸ ಮಾರ್ಗಗಳನ್ನು ಹುಡುಕಬೇಕಾಗಬಹುದು. ಹಣಕಾಸಿನ ವ್ಯವಹಾರದ ಕ್ಷೇತ್ರದಲ್ಲಿ ಜನರು ತಪ್ಪಾಗಿ ನಿಮ್ಮನ್ನ ಅರ್ಥ ಮಾಡಿಕೊಳ್ಳುವುದನ್ನ ತಪ್ಪಿಸಿ. ಈ ತಿಂಗಳು ನಿಮ್ಮ ಸಂಬಂಧದ ವಿಚಾರದಲ್ಲಿ ಹೊಸ ಅವಕಾಶ ಸಿಗಲಿದೆ.  ನಿಮ್ಮನ್ನು ಸಾಬೀತುಪಡಿಸಲು ಜೀವನವು ನಿಮಗೆ ಇನ್ನೊಂದು ಅವಕಾಶವನ್ನು ನೀಡಲು ಸಿದ್ಧವಾಗಿದೆ ಎನ್ನಬಹುದು. ವಿಶೇಷ ವ್ಯಕ್ತಿಯನ್ನು ಪತ್ತೆಹಚ್ಚಲು ಸ್ನೇಹಿತರ ನೆಟ್‌ವರ್ಕ್ ಸಹಾಯಕವಾಗಬಹುದು. ವೃತ್ತಿ: ಈ ಹಿಂದೆ ಬೇರೊಬ್ಬರು ಸೃಷ್ಟಿಸಿದ ಬಹಳಷ್ಟು ಅವ್ಯವಸ್ಥೆಗಳನ್ನು ನೀವು ಸರಿ ಮಾಡಬೇಕಿದೆ. ನಿಮ್ಮ ನಾಯಕತ್ವವನ್ನು ಜನರು ಶ್ಲಾಘಿಸಬಹುದು.


ಅದೃಷ್ಟದ ಬಣ್ಣ: ಕೆಂಪು


ಇದನ್ನೂ ಓದಿ: ನಿಮ್ಮ ಸಂಖ್ಯೆಯಲ್ಲಿ 9 ಇದ್ದರೆ ಗಮ್ಮತ್ತು, ಹೊಸವರ್ಷದಲ್ಲಿ ಬದಲಾಗುತ್ತೆ ನಿಮ್ಮ ಗತ್ತು!


ಮೀನ


ನಿಮ್ಮ ಒಟ್ಟಾರೆ ಜೀವನದಲ್ಲಿ ಸುಧಾರಣೆ ಕಂಡುಬರುತ್ತಿದೆ. ನಿಮ್ಮಿಂದ ಕೆಲವು ಅದ್ಭುತ ಕೆಲಸಗಳು ಆಗುತ್ತದೆ. ಇತರರ ಅಭಿಪ್ರಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರ ಅಗತ್ಯ.  ಸ್ನೇಹವು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬಹುದು.  ವೃತ್ತಿ: ಆಫೀಸ್​ನಲ್ಲಿ ಮಿಶ್ರ ಪ್ರಯಿಕ್ರಿಯೆ ಸಿಗುತ್ತದೆ. ಸರಿಯಾದ ಫಲಿತಾಂಶಕ್ಕೆ ಇನ್ನೂ ಹೆಚ್ಚಿನ ಸಮಯ ಕಾಯ ಬೇಕಾಗುತ್ತದೆ. ಮಹತ್ವಾಕಾಂಕ್ಷೆಯ ಯೋಜನೆಯು  ಸಾಕಾರಗೊಳ್ಳುತ್ತದೆ.


ಅದೃಷ್ಟದ ಬಣ್ಣ: ಪೀಚ್

Published by:Sandhya M
First published: