ಕೊರೋನಾ ವೈರಸ್ ಹರಡುವಿಕೆಯನ್ನು ಗಮನಿಸಿದಾಗ ಮಾಸ್ಕ್ ಧರಿಸುವುದು ಬಹುಮುಖ್ಯ ಅಂಶ ಎಂಬುದು ದಿನದಿಂದ ಸಿನಕ್ಕೆ ಸಾಬೀತಾಗುತ್ತಿದೆ. ಯಾವೆಲ್ಲಾ ದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆಯೂ ಆ ದೇಶಗಳಲ್ಲಿ COVID-19 ಹರಡುವಿಕೆಯ ತೀವ್ತತೆ ಮಿಕ್ಮ ದೇಶಗಳಿಗಿಂತ ಕಡಿಮೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಮನೆಯಿಂದ ಆಚೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬುದನ್ನು ಉಚ್ಚರಿಸಿದ್ದು, ಮೆಡಿಕಲ್ ಗ್ರೇಡ್ ಮಾಸ್ಕ್ ಧರಿಸುವ ಆಗತ್ಯವಿಲ್ಲ. ಮನೆಯಲ್ಲೇ ತಯಾರಿಸಿದ ಮಾಸ್ಕ್ ಆದರೂ ತೊಂದರೆಯಿಲ್ಲ ಎಂದಿದ್ದಾರೆ. ಯಾಕೆಂದರೆ ಮೆಡಿಕಲ್ ಗ್ರೇಡ್ ಮಾಸ್ಕ್ಗಳು ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದು, ವೈದ್ಯಾಧಿಕಾರಿಗಳಿಗೆ ಅದರ ಅಗತ್ಯತೆ ಹೆಚ್ಚಿದೆ.
ನೆಟ್ವರ್ಕ್18 ಸಮೂಹ ಮಾಧ್ಯಮ ಸಂಸ್ಥೆ ಮೊದಲಿನಿಂದಲೂ ಮನೆಯಲ್ಲಿಯೇ ಮಾಸ್ಕ್ ತಯಾರಿಸುವ ಕುರಿತಾಗಿ ವಿಡಿಯೋ ಸಮೇತ ಗೈಡ್ ಮಾಡುತ್ತಾ ಬಂದಿದೆ. ಜತೆಗೆ ಮಾಸ್ಕ್ ತಯಾರಿಕೆ ಎಷ್ಟು ಸುಲಭದ ಕೆಲಸ ಎಂಬುದನ್ನೂ ವಿವರಿಸಿದೆ.
#MakeYourOwnMask(ನಿಮ್ಮ ಮಾಸ್ಕ್ ನೀವೇ ತಯಾರಿಸಿ) ಅದರ ಚಿತ್ರವನ್ನು ಅಥವಾ ವಿಡಿಯೋವನ್ನು ನಮ್ಮ ಜತೆ ಹಂಚಿಕೊಳ್ಳಿ. ನಮ್ಮೆಲ್ಲಾ ಟಿವಿ ವಾಹಿನಿಗಳಲ್ಲಿ, ವೆಬ್ಸೈಟ್ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮನ್ನು ಮತ್ತು ನಿಮ್ಮ ಮಾಸ್ಕ್ನ್ನು ಪ್ರದರ್ಶಿಸಲಾಗುವುದು.