ತೋಟದಲ್ಲಿ ಕುಳಿತು ಸಸ್ಯಾಹಾರ ಊಟದ ರುಚಿ ಸವಿದ ಸಿದ್ದರಾಮಯ್ಯ; ಮಾಜಿ ಸಿಎಂ ಸರಳತೆಯ ಫೋಟೋ ವೈರಲ್

ಸಿದ್ದರಾಮಯ್ಯ ಅವರೇ ಹೇಳಿದಂತೆ ನಾನೀಗ ಉತ್ತರ ಕರ್ನಾಟಕದವನು, ಹಳೇ ಮೈಸೂರು ಭಾಗದವನು ಎಂದು ಕರೆಯಬೇಡಿ. ಜೋಳದ ರೊಟ್ಟಿ , ಶೇಂಗಾ ಚಟ್ನಿ ತಿನ್ನೋದು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು. ಅದರಂತೆ ಅವರು ಬಾದಾಮಿ ಪ್ರವಾಸದ ಸಂದರ್ಭದಲ್ಲಿ ಸಸ್ಯಾಹಾರ ಊಟವನ್ನೇ ಬಲು ಇಷ್ಟ ಪಡುತ್ತಿದ್ದಾರೆ.