ಸ್ಟಾರ್ ಮದುವೆಗೆ ಸಜ್ಜಾಯ್ತು ಸ್ಯಾಂಡಲ್ವುಡ್. 'ಬಹದ್ದೂರ್' ಗಂಡಿನ 'ಅದ್ಧೂರಿ' ಮದುವೆಗೆ ಸರ್ಜಾ ಕುಟುಂಬ 'ಭರ್ಜರಿ' ಪ್ಲ್ಯಾನ್ ರೂಪಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. (ALL PC- PreranaShankar twitter)
ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದು, ಇದೀಗ ಎರಡು ಕುಟುಂಬದವರು ಸೇರಿ ಮದುವೆ ದಿನಾಂಕ ಫಿಕ್ಸ್ ಮಾಡಿದ್ದಾರೆ.
ಅಂದರೆ ನವೆಂಬರ್ 23 - 24 ರಂದು ಧ್ರುವ ಸರ್ಜಾ ಅವರು ಪ್ರೇರಣಾ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೀಗ 'ಭರ್ಜರಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
ಒಂದು ಮೂಲದ ಪ್ರಕಾರ ಈ ಧ್ರುವ ಸರ್ಜಾ ಅವರ ವಿವಾಹವು ಮೈಸೂರು ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.
ಬಾಲ್ಯದ ಸ್ನೇಹಿತರ ವಿವಾಹವನ್ನು ವಿಭಿನ್ನವಾಗಿ ನೆರವೇರಿಸಲು ಸರ್ಜಾ ಕುಟುಂಬ ಹಲವು ರೀತಿಯಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅದರಲ್ಲೂ ಧ್ರುವ - ಪ್ರೇರಣಾ ಅವರನ್ನು ಹಸುಗಳ ಮಧ್ಯೆ ಕೂರಿಸಿ ಗಟ್ಟಿಮೇಳಕ್ಕೆ ಬಿಗ್ ಪ್ಲ್ಯಾನ್ ನಡೆಯುತ್ತಿದೆ ಎಂಬ ಸುದ್ದಿ ಕೂಡ ಕೇಳಿ ಬಂದಿದೆ.
ಧ್ರುವ ಹಾಗೂ ಪ್ರೇರಣಾ ಅವರದ್ದು 16 ವರ್ಷ ಹಿಂದಿನ ಪ್ರೇಮ್ ಕಹಾನಿ. ಭರ್ಜರಿ ನಟನಿಗೆ 16 ವರ್ಷವಿದ್ದಾಗ ಪ್ರೇರಣಾ ಜತೆ ಪ್ರೀತಿಯಲ್ಲಿ ಬಿದ್ದಿದ್ದರು.
ಈ ಹಿಂದೆ ಪ್ರೇರಣಾ ಬಸವನಗುಡಿಯ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿಯು ಕೂಡ ಕೆಲಸ ಮಾಡಿದ್ದರು. ಸದ್ಯ ಮನೆಯಲ್ಲಿರುವ ಧ್ರುವನ ಧ್ರುವತಾರೆ ಭರ್ಜರಿಯಾಗಿ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ.
ಅರ್ಜುನ್ ಸರ್ಜಾ ಅವರ ಕುಟುಂಬ ಆಂಜನೇಯನ ಭಕ್ತರಾಗಿದ್ದು, ಮದುವೆ ಮಂಟಪದಲ್ಲಿ ಹನುಮನ ಮೂರ್ತಿ ಸ್ಥಾಪಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಹಾಗೆಯೇ ಈ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಚಿತ್ರರಂಗದ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷವಷ್ಟೇ ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮತ್ತೊಂದು ಮದುವೆಯ ಸಂಭ್ರಮದಲ್ಲಿದ್ದಾರೆ ಸರ್ಜಾ ಕುಟುಂಬ.
ಪ್ರೇರಣಾ ಶಂಕರ್
ಧ್ರುವ ಸರ್ಜಾ-ಪ್ರೇರಣಾ ಶಂಕರ್
ಧ್ರುವ ಸರ್ಜಾ-ಪ್ರೇರಣಾ ಶಂಕರ್ ನಿಶ್ಚಿತಾರ್ಥ ಸಂದರ್ಭದಲ್ಲಿ ನಟಿ ಹರಿಪ್ರಿಯಾ
ಪ್ರೇರಣಾ ಕುಟುಂಬ
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಗೆಳೆತಿಯೊಂದಿಗೆ ಪ್ರೇರಣಾ
ಪ್ರೇರಣಾ ಶಂಕರ್
ಅಜ್ಜಿಯೊಂದಿಗೆ ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಅತ್ತಿಗೆ ನಟಿ ಮೇಘನಾ ರಾಜ್ ಜತೆ ಪ್ರೇರಣಾ
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್
ಪ್ರೇರಣಾ ಶಂಕರ್ ಕುಟುಂಬ
ಪ್ರೇರಣಾ ಶಂಕರ್
ಗೆಳೆತಿಯೊಂದಿಗೆ ಪ್ರೇರಣಾ