Karnataka Elections 2018

ಕರ್ನಾಟಕ ರಾಜ್ಯ ವಿಧಾನಸಭೆ ಒಟ್ಟು 224 ಸದಸ್ಯರ ಬಲ ಹೊಂದಿದ್ದು, ಸಭಾಧ್ಯಕ್ಷರು ಸೇರಿ ಹಾಲಿ 217 ಶಾಸಕರಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ 122 ಸದಸ್ಯರನ್ನ ಹೊಂದಿದೆ. ಬಿಜೆಪಿ 43, ಜೆಡಿಎಸ್ 37 (ಅಮಾನತಾಗಿರುವ 7 ಶಾಸಕರೂ ಸೇರಿ) ಸದಸ್ಯರ ಬಲ ಹೊಂದಿದೆ. ಬಿಎಸ್ಆರ್ ಕಾಂಗ್ರೆಸ್ 3 ಶಾಸಕರು, ಕೆಜೆಪಿ 2, ಕರ್ನಾಟಕ ಮಕ್ಕಳ ಪಕ್ಷದಿಂದ ಒಬ್ಬ ಶಾಸಕರಿದ್ದಾರೆ. ಪಕ್ಷೇತರರು 8, ಒಬ್ಬ ನಾಮ ನಿರ್ದೇಶಿತ ಸದಸ್ಯರಿದ್ದಾರೆ. 7 ಸ್ಥಾನಗಳು ಖಾಲಿ ಉಳಿದಿವೆ. ಜೆಡಿಎಸ್ ಶಾಸಕ ಚಿಕ್ಕಮಾದು, ಕಾಂಗ್ರೆಸ್ನ ಖಮರುಲ್ ಇಸ್ಲಾಂ, ಸರ್ವೋದಯ ಪಕ್ಷ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಜೆಡಿಎಸ್ನ ಶಾಸಕರಾಗಿದ್ದ ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಆನಂದ್ ಸಿಂಗ್ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.