ಪ್ರಿಯ ಓದುಗರೇ ನಿಮ್ಮಿಂದ ನಾವು ಪ್ರತಿಕ್ರಿಯೆಯನ್ನು ಬಯಸುತ್ತೇವೆ
ನಿಮ್ಮ ಯಾವುದೇ ಪ್ರಶ್ನೆ, ಪ್ರತಿಕ್ರಿಯೆ ಹಾಗೂ ಸೂಚನೆಗಳನ್ನು ನಮ್ಮ ಜೊತೆ ಮುಕ್ತವಾಗಿ ಹಂಚಿಕೊಳ್ಳಿ
ನಮ್ಮನ್ನು ಸಂಪರ್ಕಿಸಲು ಇಲ್ಲಿದೆ ವಿವರ:
editor.kannada@nw18.com
ಎಸ್ ಎಂಎಸ್ ಸಂಖ್ಯೆ: 51818
ದೂರವಾಣಿ ಸಂಖ್ಯೆ: +91-120-4341818, 3987777
ವಿಳಾಸ:
Global Broadcast News, Express Trade Tower,
Plot No. 15-16, Sector-16A, Noida, Uttar Pradesh,
India - 201301
ನೇಮಕಾತಿ ವಂಚನೆ ಎಚ್ಚರಿಕೆ
ಕಾರ್ಪೊರೇಟ್ ವಂಚನೆ ಇತ್ತೀಚೆಗೆ ಬಹಳ ಹೆಚ್ಚಾಗಿದೆ. ನೆಟ್ವರ್ಕ್18 ಮೀಡಿಯಾ ಅಂಡ್ ಇನ್ವೆಸ್ಟ್ಮೆಂಟ್ಸ್ ಲಿ ಮತ್ತತರ ಗ್ರೂಪ್ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗ ಕೊಡಿಸುತ್ತೇವೆಂದು ವಂಚಕ ವ್ಯಕ್ತಿಗಳು ಮತ್ತು ಕಂಪನಿಗಳು ಅಮಾಯಕ ಜನರನ್ನ ಸಂಪರ್ಕಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ಸಂದರ್ಶನ ಮತ್ತು ನೇಮಕಾತಿ ಮೂಲಕ ಆಕಾಂಕ್ಷಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಅಥವಾ ಮೊಬೈಲ್ ಪೇಮೆಂಟ್ ಮೂಲಕ ಹಣ ವರ್ಗಾಯಿಸಲು ವಂಚಕರು ಕೇಳುತ್ತಾರೆ.
ಇದು ಕಾರ್ಯನಿರ್ವಹಿಸುವುದು ಹೀಗೆ:
ಮೊದಲು ಕೇಳಲಾಗುವ ಹಣ ಸಣ್ಣ ಮೊತ್ತದಾಗಿರುತ್ತದೆ. ಉದ್ಯೋಗಾಕಾಂಕ್ಷಿಗೆ ಹೆಚ್ಚು ಅಚ್ಚರಿ ಉಂಟಾಗದಷ್ಟು ಅಲ್ಪ ಮೊತ್ತದಾಗಿರುತ್ತದೆ.
ಆಕಾಂಕ್ಷಿ ಒಂದೊಮ್ಮೆ ಬಲೆಗೆ ಬಿದ್ದರೆ ವಂಚಕರು ಹಣದ ಮೊತ್ತವನ್ನು ನಿಧಾನವಾಗಿ ಹೆಚ್ಚಿಸುತ್ತಾರೆ. ನಿಗದಿತ ಸಂದರ್ಶನ ಅಥವಾ ನೇಮಕಾತಿ ದಿನ ಹತ್ತಿರಬರುತ್ತಿರುವಂತೆಯೇ ಹಣಕ್ಕೆ ಹೆಚ್ಚು ಬೇಡಿಕೆ ಇಡಲು ಆರಂಭಿಸುತ್ತಾರೆ.
ಕೆಲಸಕ್ಕೆ ಸೇರಲು ಸ್ಟಾರ್ಟಪ್ ಕಿಟ್ ಕೊಡುವುದಾಗಿ ಹೇಳಿ ದೊಡ್ಡ ಮೊತ್ತದ ಹಣ ವಸೂಲಿಗೆ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಸ್ಟಾರ್ಟಪ್ ಕಿಟ್ ಎಂದರೆ ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ನಿರ್ದಿಷ್ಟ ತರಬೇತಿ ಇತ್ಯಾದಿ ಆಗಿದ್ದಿರಬಹುದು.
ವಂಚಕರು ಆಕಾಂಕ್ಷಿಗಳಿಂದ ಹಣವನ್ನಷ್ಟೇ ಅಲ್ಲ ಅವರ ಖಾಸಗಿ ಮಾಹಿತಿಯನ್ನೂ ಪಡೆಯುತ್ತಿದ್ಧಾರೆ. ಈ ಮಾಹಿತಿಯನ್ನು ಅವರು ಮಾರುಕಟ್ಟೆಗೆ ಮಾರಲು ಬಳಸಿಕೊಳ್ಳಬಹುದು.
Network18 Media & Investments Limited ಮತ್ತದರ ಗ್ರೂಪ್ ಕಂಪನಿಗಳಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವ ಎಲ್ಲರಿಗೂ ಈ ಸಂದೇಶದ (Fraud Alert) ಮೂಲಕ ಎಚ್ಚರಿಸಲು ಬಯಸುತ್ತೇವೆ:
ನೇಮಕಾತಿ, ಸಂದರ್ಶನ ಅಥವಾ ಲ್ಯಾಪ್ ಟಾಪ್/ಕಂಪ್ಯೂಟರ್ ಇತ್ಯಾದಿಗಾಗಿ ನಮ್ಮ ಗ್ರೂಪ್ನ ಯಾವುದೇ ಸಂಸ್ಥೆಗಳು ಯಾವುದೇ ಉದ್ಯೋಗಾಕಾಂಕ್ಷಿಯಿಂದ ಹಣ, ಠೇವಣಿ (Deposit) ಪಡೆಯುವುದಿಲ್ಲ.
ನಮ್ಮ ಹೆಸರಿನಲ್ಲಿ ಉದ್ಯೋಗ ಇತ್ಯಾದಿ ಆಫರ್ ನೀಡಲು ಬೇರೆ ಯಾವುದೇ ಏಜೆಂಟ್, ಏಜೆನ್ಸಿ ಅಥವಾ ವ್ಯಕ್ತಿಯನ್ನ ನೇಮಕ ಮಾಡಿರುವುದಿಲ್ಲ.
ಮಾರ್ಕ್ಸ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಸಿವಿ ಇತ್ಯಾದಿ ಖಾಸಗಿ ಮಾಹಿತಿಯನ್ನು ವಾಟ್ಸಪ್ ಮೂಲಕ ಹಂಚಿಕೊಳ್ಳುವಂತೆ ನಾವು ಯಾರನ್ನೂ ಕೇಳುವುದಿಲ್ಲ.
ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸಂವಹನವನ್ನು ಜಿಮೇಲ್, ಯಾಹೂ, ಹಾಟ್ಮೇಲ್, ಔಟ್ಲುಕ್ ಇತ್ಯಾದಿ ಖಾಸಗಿ ಇಮೇಲ್ ಐಡಿಗಳಿಂದ ಮಾಡಲಾಗುವುದಿಲ್ಲ. “@nw18.com” ಎಂದು ಅಂತ್ಯಗೊಳ್ಳುವ ಕಂಪನಿಯ ಅಧಿಕೃತ ಇಮೇಲ್ ಐಡಿಗಳಿಂದಲೇ ಸಂವಹನ ನಡೆಯುತ್ತದೆ.
ನಮ್ಮ ಗ್ರೂಪ್ ಕಂಪನಿಗಳಿಗೆ ಸಂಬಂಧಿಸದ ಏಜೆನ್ಸಿ, ಎಂಪ್ಲಾಯ್ಮೆಂಟ್ ಪೋರ್ಟಲ್ ಅಥವಾ ವ್ಯಕ್ತಿಗಳೊಂದಿಗೆ ಉದ್ಯೋಗಾಕಾಂಕ್ಷಿ ವ್ಯವಹರಿಸುತ್ತಿದ್ದರೆ ಅದರಿಂದ ಆಗ ನಷ್ಟಕ್ಕೆ ಅವರೇ ಹೊಣೆಯಾಗುತ್ತಾರೆ. ಇದಕ್ಕೆ ನೆಟ್ವರ್ಕ್18 ಅಥವಾ ಅದರ ಸಮೂಹ ಕಂಪನಿಗಳು ಪ್ರತ್ಯಕ್ಷವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಜವಾಬ್ದಾರರಲ್ಲ.
ಇಂಥ ಉದ್ಯೋಗ ವಂಚನೆ ಬಗ್ಗೆ ಯಾರಿಗಾದರೂ ಶಂಕೆ ಬಂದರೆ ನಮ್ಮ Fraud & Misconduct Investigations ತಂಡವನ್ನು recruitment.fraud@nw18.com ಈ ವಿಳಾಸಕ್ಕೆ ಮೇಲ್ ಮೂಲಕ ಸಂಪರ್ಕಿಸಿ ಗಮನಕ್ಕೆ ತರಬಹುದು. ಇದರಿಂದ ನಿಮಗೂ ಮತ್ತು ನಮಗೂ ಅನುಕೂಲವಾಗುತ್ತದೆ.