ಕನ್ಯಾ  ರಾಶಿ

Share: Facebook Twitter Linkedin

ವರ್ಷದಲ್ಲಿ ರಾಶಿಭವಿಷ್ಯಕನ್ಯಾ ರಾಶಿ)

Thursday, March 23, 2023

ಕನ್ಯಾ ರಾಶಿಯವರಿಗೆ 2023-ನೇ ವರ್ಷವು ಮಿಶ್ರ ಫಲಿತಾಂಶ ತರಲಿದೆ. ನಿಮ್ಮ ಕುಟುಂಬದ ಕುರಿತು ನಿಮ್ಮನ್ನು ಚಿಂತೆಯು ಕಾಡಬಹುದು. ನಿಮ್ಮ ಕುಟುಂಬದ ವಾತಾವರಣವನ್ನು ಕೆಡಿಸುವ ಅನೇಕ ಘಟನೆಗಳು ಸಂಭವಿಸಬಹುದು. ನಿಮ್ಮ ವರ್ತನೆಯು ಜನರಿಗೆ ಅರ್ಥವಾಗದೇ ಇರಬಹುದು. ನೀವು ಏನನ್ನು ಹೇಳಲು ಮತ್ತು ಮಾಡಲು ಇಚ್ಛಿಸುತ್ತೀರಿ ಎನ್ನುವುದು ಅವರಿಗೆ ಅರ್ಥವಾಗದೇ ಇರಬಹುದು. ನಿಮ್ಮ ಮಾತುಗಳು ಮತ್ತು ಕೃತಿಯ ನಡುವೆ ವ್ಯತ್ಯಾಸ ಇರಬಹುದು. ಹೀಗಾಗಿ ನಿಮ್ಮ ಕುಟುಂಬದ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಈ ಎಲ್ಲಾ ವಿಚಾರಗಳಿಗೆ ಗಮನ ನೀಡಿ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ದೊಡ್ಡ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವರ್ಷದ ನಡುವೆ, ಜೀವನ ಸಂಗಾತಿಯ ನೆರವಿನಿಂದ ದೊಡ್ಡ ವಾಹನವನ್ನು ಖರೀದಿಸುವ ಅವಕಾಶ ದೊರೆಯಬಹುದು. ಅತ್ತೆ ಮಾವಂದಿರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ವರ್ಷದ ಆರಂಭವನ್ನು ಸಾಕಷ್ಟು ಸಹನೆ ಮತ್ತು ತಾಳ್ಮೆಯಿಂದ ಕಳೆಯಿರಿ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ಏಪ್ರಿಲ್‌ ತಿಂಗಳು ಈ ವಿಚಾರದಲ್ಲಿ ಅತ್ಯುತ್ತಮ. ತದನಂತರ, ಅಕ್ಟೋಬರ್‌ ಮತ್ತು ನವಂಬರ್‌ ತಿಂಗಳುಗಳ ಪ್ರಯಾಣವು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ನೀವು ಈ ಪ್ರಯಾಣದಿಂದ ಸಾಕಷ್ಟು ಸಂತಸ ಪಡೆಯಲಿದ್ದೀರಿ. ವರ್ಷದ ಆರಂಭದಿಂದಲೇ ನೀವು ಗೆಳೆಯರ ನೆರವನ್ನು ಪಡೆಯಲಿದ್ದೀರಿ. ವರ್ಷದ ಆರಂಭದಲ್ಲಿ ಸರ್ಕಾರದಿಂದ ಒಂದಷ್ಟು ಪ್ರಯೋಜನ ಲಭಿಸಬಹುದು. ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿ. ಏಕೆಂದರೆ ಈ ವರ್ಷದಲ್ಲಿ ಅವರೊಂದಿಗಿನ ಸಂಬಂಧ ಹದಗೆಡುವ ಸಾಧ್ಯತೆ ಇದೆ. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ನೀವು ನಿರ್ಲಕ್ಷ್ಯ ತೋರಬಹುದು. ಹೀಗಾಗಿ ಎಚ್ಚರಿಕೆ ವಹಿಸಿ. ಈ ವರ್ಷದಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಹೊಸ ವಿಚಾರಗಳು ಹೊಳೆಯಬಹುದು. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವ ಜನರು ವ್ಯವಹಾರಕ್ಕೆ ಕಾಲಿಡಲು ಯತ್ನಿಸಬಹುದು. ಆದರೆ ಸದ್ಯಕ್ಕೆ ಕೆಲಸದಲ್ಲೇ ಮುಂದುವರಿಯಿರಿ. ನೀವು ವ್ಯವಹಾರವನ್ನು ನಡೆಸಲು ಆಸಕ್ತಿ ಹೊಂದಿದ್ದರೆ, ಕೆಲಸದ ಜೊತೆಗೆಯೇ ವ್ಯವಹಾರವನ್ನು ನಡೆಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರು ಇತರರಿಗೆ ಸಹಾಯ ಮಾಡಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ಇವರು ತುಂಬಾ ಆತ್ಮೀಯರಾಗಿರುತ್ತಾರೆ. ಇವರೊಂದಿಗೆ ಬೆರೆಯುವುದು ತುಂಭ ಸುಲಭವಾಗಿಯೂ ಇರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:41

ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:17 to 15:48

ಯಮಘಂಡ:06:41 to 08:12

ಗುಳಿಗ ಕಾಲ:09:43 to 11:15

//