ವರ್ಷದಲ್ಲಿ ರಾಶಿಭವಿಷ್ಯವೃಶ್ಚಿಕ ರಾಶಿ)
Thursday, March 23, 2023ವೃಶ್ಚಿಕ ರಾಶಿಯವರಿಗೆ 2023-ನೇ ವರ್ಷವು ಸಂಪೂರ್ಣವಾಗಿ ಸಾಮರಸ್ಯದ ವರ್ಷವೆನಿಸಲಿದೆ. ಈ ವರ್ಷದಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಅಲ್ಲದೆ ಏನಾದರೂ ಹೊಸತನ್ನು ಮಾಡುವ ಇಚ್ಛೆಯು ಮನಸ್ಸಿನಲ್ಲಿ ಮೂಡಬಹುದು. ಈ ವರ್ಷದಲ್ಲಿ ನೀವು ಎರಡು ವಿಚಾರಗಳ ಕುರಿತು ಗಮನ ನೀಡಬೇಕು. ಮೊದಲನೆಯದಾಗಿ ಕೋಪಗೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಪ್ರಮುಖ ಕೆಲಸವು ಈ ವರ್ಷದಲ್ಲಿ ಬಾಕಿ ಉಳಿಯಬಹುದು. ಎರಡನೆಯದಾಗಿ, ನಿಮ್ಮ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಅವರು ನಿಮ್ಮ ಮಾತಿನ ದುರುಪಯೋಗವನ್ನು ಮಾಡಿಕೊಳ್ಳಬಹುದು. ಈ ವರ್ಷದಲ್ಲಿ ನಿಮ್ಮ ಎದುರಾಳಿಗಳು ನಿಮಗೆ ಒಂದು ಹಂತದ ತನಕ ತೊಂದರೆ ನೀಡಬಹುದು. ಹೀಗಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದರೂ ನೀವು ಚಿಂತಿಸುವ ಅಗತ್ಯವಿಲ್ಲ. ಅವರು ಇಚ್ಛಿಸಿದರೂ ನಿಮಗೆ ಯಾವುದೇ ಹಾನಿಯನ್ನುಂಟು ಮಾಡಲು ಅವರಿಗೆ ಆಗದು. ಅಂತಿಮವಾಗಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯಲಿದ್ದೀರಿ. ನಿಮ್ಮ ಅನಗತ್ಯ ಖರ್ಚುವೆಚ್ಚಗಳಿಗೆ ನೀವು ಗಮನ ನೀಡಬೇಕು. ಏಕೆಂದರೆ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಇದು ಒತ್ತಡವನ್ನು ಬೀರಬಹುದು. ಕುಟುಂಬದ ಹಿರಿಯರ ಅಶೀರ್ವಾದದಿಂದ, ಬಾಕಿ ಉಳಿದಿರುವ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಇದರಿಂದಾಗಿ ನಿಮಗೆ ಹಣಕಾಸಿನ ಲಾಭ ಮತ್ತು ಸಮಾಜದಲ್ಲಿ ಉತ್ತಮ ಗೌರವ ದೊರೆಯಲಿದೆ. ಈ ವರ್ಷದಲ್ಲಿ ನೀವು ಕೆಲವೊಂದು ದೀರ್ಘ ಪ್ರಯಾಣವನ್ನು ಕೈಗೊಳ್ಳಬಹುದು. ಇದು ನಿಮ್ಮ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕ ಎನಿಸಲಿದೆ. ಈ ವರ್ಷ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಮನೆಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳು ನಡೆಯಬಹುದು. ಇದರಿಂದಾಗಿ ಕುಟುಂಬದ ವಾತಾವರಣವು ಧಾರ್ಮಿಕತೆ ಮತ್ತು ಶಾಂತಿಯಿಂದ ಕೂಡಿರಲಿದೆ. ಏನಾದರೂ ಹೊಸತನ್ನು ಕಲಿಯುವ ಆಸೆಯು ನಿಮ್ಮ ಮನಸ್ಸಿನಲ್ಲಿ ಚಿಗುರಲಿದೆ. ಹೀಗಾಗಿ ಏನಾದರೂ ಹೊಸತನ್ನು ಕಲಿಯಲು ನೀವು ಯೋಚನೆ ರೂಪಿಸಬಹುದು. ಅವುಗಳನ್ನು ಈಡೇರಿಸುವ ಮೂಲಕ ನೀವು ಸಂತಸ ಅನುಭವಿಸಲಿದ್ದೀರಿ ಹಾಗೂ ಬದುಕಿನಲ್ಲಿ ಮುಂದೆ ಸಾಗುವ ಅವಕಾಶವನ್ನು ಪಡೆಯಲಿದ್ದೀರಿ.
ರಾಶಿಯಾಧಾರಿತ ವ್ಯಕ್ತಿತ್ವ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Numerology: ಈ ಡೇಟ್ನಲ್ಲಿ ಹುಟ್ಟಿದವರಿಗೆ ಇಂದು ಡೇಂಜರ್, ಸ್ವಲ್ಪ ಯಾಮಾರಿದ್ರೂ ಕಷ್ಟ
-
Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ
-
Astrological Prediction: ಈ ವರ್ಷ ಬುಧ ರಾಜ, ಶುಕ್ರ ಮಂತ್ರಿ - ದೇಶದಲ್ಲಿ ಹೊಸ ಕ್ರಾಂತಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:41
ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ
ಇಂದಿನ ನಕ್ಷತ್ರ:ರೇವತಿ
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಬ್ರಾಹ್ಮ್
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:17 to 15:48
ಯಮಘಂಡ:06:41 to 08:12
ಗುಳಿಗ ಕಾಲ:09:43 to 11:15
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್