ಧನು ರಾಶಿ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಧನು ರಾಶಿ ರಾಶಿ)

Thursday, March 23, 2023

ಈ ತಿಂಗಳಿನಲ್ಲಿ ಶುಕ್ರ ಮತ್ತು ಬುಧ ನಿಮ್ಮ ಸಾಮಾಜಿಕ ಬದುಕಿಗೆ ಮೆರುಗು ನೀಡುತ್ತಾರೆ. ಅವಿವಾಹಿತರಿಗೆ ಭಾವೋದ್ರಿಕ್ತ ಮತ್ತು ಪ್ರಣಯಭರಿತ ಪ್ರೀತಿಯು ದೊರೆಯಲಿದೆ. ಮನೆಯಲ್ಲಿ ಉದ್ಭವಿಸುವ ಕೆಲವೊಂದು ಸವಾಲಿನ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸಲಿದ್ದೀರಿ. ಆದರೂ, ಈ ತಿಂಗಳ ಮಧ್ಯದಲ್ಲಿ, ನಿಮ್ಮ ಪ್ರಣಯಭರಿತ ಬದುಕಿಗೆ ಸಂಬಂಧಿಸಿದಂತೆ ನೀವು ಸಮಸ್ಯೆಯನ್ನು ಎದುರಿಸಲಿದ್ದೀರಿ. ವಿವಾಹಿತ ಜೋಡಿಗಳಿಗೆ ಅನೇಕ ಸಮಸ್ಯೆಗಳು ಎದುರಾಗಬಹುದು. ನಿಮ್ಮನ್ನು ಕಾಡುವ ಕೆಲವೊಂದು ಆರಂಭಿಕ ಸಮಸ್ಯೆಗಳನ್ನು ಹೊರತುಪಡಿಸಿ, ತಿಂಗಳ ಕೊನೆಗೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ನಿಮ್ಮ ಹಣಕಾಸಿನ ಭವಿಷ್ಯವು ಚೆನ್ನಾಗಿರಲಿದೆ ಎಂದು ಗುರುವು ಹೇಳುತ್ತಾನೆ. ನೀವು ಈ ಹಿಂದೆ ಮಾಡಿದ ಹೂಡಿಕೆಗೆ ಲಾಭ ದೊರೆಯಲಿದೆ. ಹಣಕಾಸಿನ ಒಳ್ಳೆಯ ಯೋಜನೆಯನ್ನು ರೂಪಿಸಲು ಮತ್ತು ಹಂತ ಹಂತವಾಗಿ ಅದನ್ನು ಜಾರಿಗೊಳಿಸಲು ಇದು ಸಕಾಲ. ಇದರಿಂದ ನಿಮಗೆ ಒಂದಷ್ಟು ಧನಾತ್ಮಕ ಫಲಿತಾಂಶ ದೊರೆಯಲಿದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ನಿಮಗಿಂತ ಹಿರಿಯರಾದ ಸಹೋದ್ಯೋಗಿಗಳ ಸಹಾಯದಿಂದ ನಿಮ್ಮ ವೃತ್ತಿ ಬೆಳವಣಿಗೆ ಸಾಧ್ಯವಾಗಲಿದೆ. ಶುಕ್ರ, ಬುಧ ಮತ್ತು ಗುರು ಒಟ್ಟಿಗೆ ಕೆಲಸ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶಗಳು ದೊರೆಯಲಿವೆ. ವ್ಯಾಪಾರಿಗಳು ಪ್ರಮುಖ ಗುತ್ತಿಗೆಯೊಂದನ್ನು ಗಳಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ತಿಂಗಳ ಕೊನೆಗೆ ಸಾಕಷ್ಟು ಸುಧಾರಣೆ ಉಂಟಾಗಲಿದೆ. ಈ ಸಂದರ್ಭದಲ್ಲಿ ನೀವು ಯಾವುದೇ ಕೋರ್ಸನ್ನು ಆರಿಸಿದರೂ, ನಿಮ್ಮ ಶೈಕ್ಷಣಿಕ ಗುರಿಯನ್ನು ಸಾಧಿಸಲು ಇನ್ನಷ್ಟು ಕಠಿಣ ಶ್ರಮ ಪಡಬೇಕಾಗುತ್ತದೆ ಎಂದು ಶನಿಯು ಎಚ್ಚರಿಕೆ ನೀಡುತ್ತಾನೆ. ಆದರೂ ತಿಂಗಳು ಕಳೆದಂತೆ, ನಿಮ್ಮ ಶೈಕ್ಷಣಿಕ ಪ್ರಯತ್ನಗಳಲ್ಲಿ ಅದ್ಭುತ ಯಶಸ್ಸನ್ನು ನೀವು ಗಳಿಸುತ್ತೀರಿ ಎಂದು ಗ್ರಹಗಳು ಮುನ್ಸೂಚನೆ ನೀಡುತ್ತವೆ. ಹೆಚ್ಚಿನ ಗ್ರಹಗಳು ಒಳ್ಳೆಯ ಸ್ಥಾನದಲ್ಲಿರುವುದರಿಂದ ನಿಮ್ಮಲ್ಲಿ ಚೈತನ್ಯ ಉಕ್ಕಿ ಹರಿಯಲಿದೆ ಹಾಗೂ ದೈಹಿಕವಾಗಿಯೂ ದೃಢತೆಯನ್ನು ತೋರಲಿದ್ದೀರಿ. ಗುರು ಮತ್ತು ಬುಧನ ಕಾರಣ ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಉಂಟಾಗಲಿದೆ. ಆದರೆ ನೀವು ವಿಪರೀತ ಸಕ್ಕರೆ ಅಥವಾ ಕೊಬ್ಬನ್ನು ಸೇವಿಸಿದರೆ ತೂಕವನ್ನು ಗಳಿಸುವ ಅಪಾಯವಿದೆ. ಲಘು ಪ್ರಮಾಣದ ಆಹಾರ ಸ್ವೀಕರಿಸುವುದರ ಮೂಲಕ ಹಾಗೂ ಆಹಾರ ಸೇವನೆಯ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ನಿಮ್ಮ ತೂಕದಲ್ಲಿ ಸಂತುಲನ ಕಾಪಾಡಿ.

ರಾಶಿಯಾಧಾರಿತ ವ್ಯಕ್ತಿತ್ವ

ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್​ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:41

ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:17 to 15:48

ಯಮಘಂಡ:06:41 to 08:12

ಗುಳಿಗ ಕಾಲ:09:43 to 11:15

//