ಧನು ರಾಶಿ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಧನು ರಾಶಿ ರಾಶಿ)

Friday, January 27, 2023

ತಿಂಗಳ ಆರಂಭದಲ್ಲಿ ನಿಮ್ಮ ಪ್ರೇಮ ಬದುಕು ಸಾಂಗವಾಗಿ ಮುಂದುವರಿಯಲಿದೆ. ಶುಕ್ರ ಮತ್ತು ಮಂಗಳನ ಸಂಯೋಜಿತ ಪ್ರಭಾವವು ಸ್ಥಿರತೆ ಮತ್ತು ಉತ್ಸಾಹವನ್ನು ನೀಡಲಿದೆ. ಪ್ರೇಮದ ಅಧಿದೇವತೆ ಎನಿಸಿರುವ ಶುಕ್ರನಿಂದಾಗಿ ಈ ತಿಂಗಳಿನಲ್ಲಿ ನಿಮಗೆ ಹೊಸ ಪ್ರೇಮ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಗುರುವಿನ ಪ್ರಭಾವವು ನಿಮ್ಮ ಸಾಮಾಜಿಕ ಬದುಕಿನಲ್ಲಿ ಅದೃಷ್ಟವನ್ನು ಒದಗಿಸಲಿದೆ. ಹಣಕಾಸಿನ ಹರಿವು ಚೆನ್ನಾಗಿರಲಿದೆ. ತಿಂಗಳು ಕಳೆದಂತೆ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೂ ಹಣಕಾಸಿನ ಸಮಸ್ಯೆ ಉಂಟಾಗದು. ಏಕೆಂದರೆ ಈ ತಿಂಗಳು ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಮಯ ಎನಿಸಲಿದೆ. ಗುರುವಿನ ಆಶೀರ್ವಾದದ ಕಾರಣ ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಎಂದಿಗಿಂತ ಹೆಚ್ಚಿನ ಹಣ ಇರಲಿದೆ. ಆದರೆ ಸಟ್ಟಾ ವ್ಯವಹಾರ ಮತ್ತು ಸುಲಭದ ಹಣದ ವಿಚಾರದಲ್ಲಿ ಪ್ರಲೋಭನೆಗೆ ಒಳಗಾಗಬೇಡಿ. ಏಕೆಂದರೆ ಸಂಪಾತಗಳ ಪರಿಣಾಮವು ತಪ್ಪು ದಾರಿಗೆ ಎಳೆಯಬಹುದು. ಈ ತಿಂಗಳಿನಲ್ಲಿ ನಿಮ್ಮ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಲು ಗ್ರಹಗಳ ಬೆಂಬಲವೂ ಸಾಕಷ್ಟು ಪ್ರಮಾಣದಲ್ಲಿ ದೊರೆಯಲಿದೆ. ಆದರೆ ತಿಂಗಳು ಕಳೆದಂತೆ ಉತ್ತರ ಸಂಪಾತದ ಪ್ರಭಾವು ನಿಮ್ಮ ಕೆಲಸದಲ್ಲಿ ಸವಾಲುಗಳನ್ನುಂಟು ಮಾಡಬಹುದು. ನಿಮ್ಮೆಲ್ಲ ಪ್ರಯತ್ನದೊಂದಿಗೆ ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದರೂ, ಈ ತಿಂಗಳ ಉತ್ತರಾರ್ಧದಲ್ಲಿ ಆಡ್ಡಿ ಆತಂಕಗಳು ಹಠಾತ್‌ ಆಗಿ ಕಾಣಿಸಿಕೊಳ್ಳಲಿವೆ. ಆದರೆ ತಿಂಗಳ ಕೊನೆಯ ದಿನಗಳು ಚೆನ್ನಾಗಿರಲಿವೆ. ಹೊಸ ವ್ಯವಹಾರ ಪಾಲುದಾರಿಗೆ/ ಮೈತ್ರಿಗೆ ಈ ಕಾಲ ಒಳ್ಳೆಯದು. ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಗುರುವಿನ ಸಾಕಷ್ಟು ಬೆಂಬಲ ದೊರೆಯಲಿದೆ. ಆದರೆ ತಿಂಗಳು ಕಳೆದಂತೆ ಸಂಪಾತಗಳ ಪ್ರಭಾವವು ಸಾಕಷ್ಟು ತೊಂದರೆಗಳನ್ನುಂಟು ಮಾಡಬಹುದು. ತಿಂಗಳ ಉತ್ತರಾರ್ಧದಲ್ಲಿ ಸಾಕಷ್ಟು ಕಷ್ಟಪಡಲು ಗ್ರಹಗಳು ನಿಮಗೆ ಉತ್ತೇಜಿಸಲಿವೆ. ನಿಮ್ಮ ಕಠಿಣ ಶ್ರಮವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ ಹಾಗೂ ನಿಮ್ಮ ಕಾರ್ಯಕ್ಷಮತೆಯಲ್ಲಿ ಗಣನೀಯ ಪ್ರಮಾಣದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ಈ ತಿಂಗಳಿನಲ್ಲಿ ಗ್ರಹಗಳು ಧನಾತ್ಮಕ ಪ್ರಭಾವವನ್ನು ಬೀರಲಿವೆ. ನೀವು ಕಠಿಣ ಶ್ರಮ ಪಡುವ ಕಾರಣ, ಒತ್ತಡ ಮತ್ತು ಆಯಾಸದಿಂದಾಗಿ ನಿಮ್ಮ ಆರೋಗ್ಯದ ಮೇಲೆ ಸ್ವಲ್ಪ ಪ್ರಭಾವ ಉಂಟಾಗಬಹುದು ಎಂದು ಶನಿಯು ಹೇಳುತ್ತಾನೆ. ಈ ತಿಂಗಳ ಕೊನೆಗೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್​ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:21

ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:29 to 12:52

ಯಮಘಂಡ:15:37 to 17:00

ಗುಳಿಗ ಕಾಲ:08:44 to 10:06

//