ಧನು ರಾಶಿ  ರಾಶಿ

Share: Facebook Twitter Linkedin

ವರ್ಷದಲ್ಲಿ ರಾಶಿಭವಿಷ್ಯಧನು ರಾಶಿ ರಾಶಿ)

Thursday, March 23, 2023

ಧನು ರಾಶಿಯವರಿಗೆ 2023-ನೇ ವರ್ಷವು ಸಾಮರಸ್ಯವನ್ನು ತರಲಿದೆ. ಬದುಕಿನ ಅನೇಕ ಕ್ಷೇತ್ರಗಳಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸವು ಉತ್ತುಂಗಕ್ಕೆ ಏರಲಿದೆ. ಆದರೆ ಇದು ನಿಮ್ಮ ಅಹಂಗೆ ಕಾರಣವಾಗದಂತೆ ನೋಡಿಕೊಳ್ಳಿ ಹಾಗೂ ನಿಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಿ. ಹೀಗೆ ಮಾಡುವುದರ ಮೂಲಕ ನೀವು ಈ ವರ್ಷದಲ್ಲಿ ಇತರ ಕ್ಷೇತ್ರಗಳಲ್ಲಿ ಹೆಸರು ಮತ್ತು ಸಂಪತ್ತನ್ನು ಗಳಿಸಲಿದ್ದೀರಿ. ಕೆಲ ಕಾರಣಗಳಿಗಾಗಿ ನಿಮಗೆ ಪುರಸ್ಕಾರ ದೊರೆಯಲಿದೆ. ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕೆಲಸದಲ್ಲಿ ನೀವು ಆಸಕ್ತಿ ತೋರಲಿದ್ದೀರಿ. ಸೇವೆ ಮಾಡುವುದರಿಂದ ಹಾಗೂ ಜನರಿಗೆ ಸಹಾಯ ಮಾಡುವುದರಿಂದ ಈ ವರ್ಷದಲ್ಲಿ ನಿಮಗೆ ಸಂತಸ ದೊರೆಯಲಿದೆ. ಇದು ನಿಮ್ಮಲ್ಲಿ ನಿಸ್ವಾರ್ಥ ಸೇವೆಯ ಚೈತನ್ಯವನ್ನು ಇನ್ನಷ್ಟು ವೃದ್ಧಿಸಲಿದೆ. ಇದರಿಂದಾಗಿ ನಿಮಗೆ ಸಂತಸ ದೊರೆಯಲಿದೆ. ಈ ವರ್ಷದಲ್ಲಿ ನೀವು ಎಂದಿನಂತೆ ಪ್ರಯಾಣಿಸಲಿದ್ದೀರಿ. ವಿಪರೀತವಾಗಿ ಪ್ರಯಾಣಿಸಬೇಕಾದ ಸಾಧ್ಯತೆಗಳು ಕಡಿಮೆ. ಇದು ನಿಮ್ಮ ಆರ್ಥಿಕ ವೆಚ್ಚವನ್ನು ತಗ್ಗಿಸಲಿದೆ. ಹೀಗಾಗಿ ವರ್ಷಾಂತ್ಯದೊಳಗೆ ಹಣವನ್ನು ಚೆನ್ನಾಗಿ ಕ್ರೋಢೀಕರಿಸುವ ಅವಕಾಶ ನಿಮಗೆ ಲಭಿಸಲಿದೆ. ಈ ವರ್ಷದಲ್ಲಿ ನೀವು ಸಹೋದರರು ಮತ್ತು ಸಹೋದರಿಯರ ವಿಶೇಷ ಬೆಂಬಲವನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಅಗತ್ಯವಿದ್ದಲ್ಲಿ ಅವರು ನಿಮಗೆ ಹಣಕಾಸಿನ ನೆರವನ್ನು ಒದಗಿಸಬಹುದು. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ ಹಾಗೂ ಹಣಕಾಸಿನ ಸವಾಲುಗಳು ಉದ್ಭವಿಸುವುದಿಲ್ಲ. ವರ್ಷದಲ್ಲಿ ನೀವು ಸಾಕಷ್ಟು ಆತ್ಮಸ್ಥೈರ್ಯದಿಂದ ಕೆಲಸ ಮಾಡಲಿದ್ದೀರಿ. ಅಲ್ಲದೆ ವ್ಯವಹಾರದಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುವುದಿಲ್ಲ. ನಿಮ್ಮ ಮಕ್ಕಳಿಗೆ, ಈ ವರ್ಷವು ಸಾಕಷ್ಟು ಏರುಪೇರಿನಿಂದ ಕೂಡಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ವರ್ಷದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ನೀವು ನೇರವಾಗಿ ಮಾತನಾಡಬಹುದು. ಅದರೆ ನೇರವಾಗಿ ಮಾತನಾಡುವುದು ಕಹಿ ಎನಿಸಬಹುದು. ಅವರನ್ನು ಮನವೊಲಿಸುವ ಜವಾಬ್ದಾರಿಯು ನಿಮ್ಮ ಹೆಗಲ ಮೇಲಿರಲಿದೆ. ಏಕೆಂದರೆ ಸಂಬಂಧವನ್ನು ಕಾಪಾಡುವುದು ತುಂಬಾ ಪ್ರಮುಖವಾದುದು.

ರಾಶಿಯಾಧಾರಿತ ವ್ಯಕ್ತಿತ್ವ

ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್​ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:41

ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:17 to 15:48

ಯಮಘಂಡ:06:41 to 08:12

ಗುಳಿಗ ಕಾಲ:09:43 to 11:15

//