ಮೀನ  ರಾಶಿ

Share: Facebook Twitter Linkedin

ವಾರದಲ್ಲಿ ರಾಶಿಭವಿಷ್ಯ(ಮೀನ ರಾಶಿ)

Monday, December 5, 2022

ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಹೊರಬರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಕೆಲವೊಂದು ವಿಶೇಷ ವಿಚಾರಗಳನ್ನು ನೀವು ಚರ್ಚಿಸಬಹುದು. ಪ್ರೇಮ ಸಂಬಂಧದಲ್ಲಿರುವ ಜನರಿಗೆ ತಮ್ಮ ಸಂಗಾತಿಯನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ. ಈ ಅವಕಾಶ ಹಾಳಾಗದಂತೆ ನೀವು ನೋಡಿಕೊಳ್ಳಲಿದ್ದೀರಿ ಹಾಗೂ ನಿಮ್ಮ ಪ್ರೇಮಿಯನ್ನು ಸಂತಸಪಡಿಸಲಿದ್ದೀರಿ. ವಾರದ ಆರಂಭಿಕ ದಿನಗಳಲ್ಲಿ ನೀವು ಮಾನಸಿಕ ಚಿಂತೆಗೆ ಈಡಾಗಬಹುದು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಪಾಲಿಗೆ ಕಷ್ಟವೆನಿಸಬಹುದು. ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಈ ವಾರದಲ್ಲಿ ಯಾವುದೇ ದೊಡ್ಡ ಕೆಲಸವನ್ನು ಕೈಗೆತ್ತಿಕೊಳ್ಳದಿದ್ದರೆ ಒಳ್ಳೆಯದು. ಏಕೆಂದರೆ ಇದರಿಂದ ಯಶಸ್ಸನ್ನು ಗಳಿಸುವ ಸಾಧ್ಯತೆ ಕಡಿಮೆ. ನೀವು ನಿಮ್ಮ ಕೆಲಸದ ಕುರಿತು ಸಾಕಷ್ಟು ಆತ್ಮವಿಶ್ವಾಸ ತೋರಲಿದ್ದೀರಿ. ಪರಿಸ್ಥಿತಿಯನ್ನು ಉತ್ತಮಪಡಿಸಲು ಮತ್ತು ಕಠಿಣ ಸವಾಲುಗಳನ್ನು ಬಗೆಹರಿಸಲು ನಿಮ್ಮ ಬುದ್ಧಿಮತ್ತೆಯನ್ನು ನೀವು ಬಳಸಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ಹಿಂದಿನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಅದು ನಿಮ್ಮನ್ನು ಸಂತೋಷಗೊಳಿಸಲಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬದುಕು ಸಾಕಷ್ಟು ಏರುಪೇರನ್ನು ಅನುಭವಿಸಲಿದೆ. ನಿಮ್ಮ ಸುತ್ತಮುತ್ತಲಿನ ಪರಿಸರವು ನಿಮ್ಮ ಅಧ್ಯಯನಕ್ಕೆ ತೊಡಕನ್ನುಂಟು ಮಾಡಬಹುದು. ಆದರೆ ಚೆನ್ನಾಗಿ ಅಧ್ಯಯನ ಮಾಡುವ ಮನಸ್ಸನ್ನು ನೀವು ಹೊಂದಿರಬಹುದು. ಆದರೆ ಅಧ್ಯಯನವನ್ನು ಮಾಡುವುದು ಕಷ್ಟಕರ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಸುಧಾರಣೆ ಕಾಣಿಸಿಕೊಳ್ಳಬಹುದು. ಆದರೆ ಒತ್ತಡವು ಮುಂದುವರಿಯಲಿದೆ. ನೀವು ಇದನ್ನು ದೂರ ಮಾಡಬೇಕು. ವಾರದ ಮಧ್ಯದ ಮೂರು ದಿನಗಳು ಪ್ರಯಾಣಿಸುವುದಕ್ಕೆ ಅನುಕೂಲಕರ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:06

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪರಿಧ್

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:27 to 09:47

ಯಮಘಂಡ:11:08 to 12:29

ಗುಳಿಗ ಕಾಲ:13:50 to 15:11

//