ಮೀನ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಮೀನ ರಾಶಿ)

Monday, December 5, 2022

ಈ ತಿಂಗಳಿನಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುವುದಕ್ಕಾಗಿ ಹಗೆತನದಿಂದ ದೂರವಿರಿ ಹಾಗೂ ತಾಳ್ಮೆಯಿಂದ ಇರಿ. ಗುರುವು ನಿಮ್ಮ ಮೇಲೆ ಅದೃಷ್ಟದ ಮಳೆಯನ್ನು ಸುರಿಯಲಿದ್ದಾನೆ. ಆದರೆ ನಿಮ್ಮ ಸಂವಹನದ ಕುರಿತು ಎಚ್ಚರಿಕೆ ವಹಿಸಿ ಹಾಗೂ ವೈಯಕ್ತಿಕ ಹಾಗೂ ವೃತ್ತಿಪರ ಮಟ್ಟದಲ್ಲಿ ಒರಟಾಗಿ ವರ್ತಿಸಬೇಡಿ. ತಿಂಗಳ ಉಳಿದ ಭಾಗದಲ್ಲಿ ನಿಮ್ಮ ಬಾಸ್‌ ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳ ಜೊತೆ ವಾದ ಮಾಡಬೇಡಿ. ಈ ತಿಂಗಳಿನಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತವಾಗಿ ಪ್ರಯಾಣಿಸಬೇಕಾದೀತು. ಇದರಿಂದ ನಿಮಗೆ ಲಾಭ ಉಂಟಾಗಲಿದೆ. ಈ ತಿಂಗಳ ಸಂದರ್ಶನದಿಂದ ನೀವು ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯಬಹುದು. ಗುರುವು ನಿಮಗೆ ವಿವಾಹದ ವರವನ್ನು ನೀಡಬಹುದು. ಶುಕ್ರ ಮತ್ತು ಬುಧನ ಸ್ಥಾನ ಬದಲಾವಣೆಯು ಮಕ್ಕಳು ಮತ್ತು ಪ್ರೇಮ ಸಂಬಂಧದ ಕುರಿತು ಶುಭ ಸುದ್ದಿಯನ್ನು ತರಬಹುದು. ನಿಮಗಾಗಿ ಮತ್ತು ನಿಮ್ಮ ಕುಟುಂಬದ ಸದಸ್ಯರಿಗಾಗಿ ಸಮಯ ಮೀಸಲಿಡಿ. ಇದು ನಿಮ್ಮ ಬದುಕಿನಲ್ಲಿ ನವ ಚೈತನ್ಯ ತರಲಿದೆ. ಮಂಗಳನ ಸ್ಥಾನ ಬದಲಾವಣೆಯ ಕಾರಣ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹೀಗಾಗಿ ತಾಳ್ಮೆಯಿಂದ ವರ್ತಿಸಿ ಹಾಗೂ ವಿವಾದ ಉಂಟಾಗದಂತೆ ನೋಡಿಕೊಳ್ಳಿ. ಪ್ರಣಯದ ಸಂಬಂಧದಲ್ಲಿ ಮೆಲ್ಲನೆ ಸುಧಾರಣೆ ಉಂಟಾಗಲಿದೆ. ಹೀಗಾಗಿ ಸಂಯಮದಿಂದ ವರ್ತಿಸಿ ಹಾಗೂ ನಿಮ್ಮ ಪ್ರೇಮಿಯ ಭಾವನೆಗಳಿಗೂ ಗೌರವ ನೀಡಿ. ಶನಿಯ ಕಾರಣ ವಿದೇಶಿ ಹೂಡಿಕೆ ಮತ್ತು ಭೂಮಿಗೆ ಸಂಬಂಧಿಸಿದ ದೇಶೀಯ ವ್ಯವಹಾರ ಕೈಗೂಡಿ ಬರಬಹುದು. ನಿರೀಕ್ಷಿತ ಉಳಿತಾಯ ಪಡೆಯುವಲ್ಲಿ ಯಶಸ್ಸು ದೊರೆಯಬಹುದು. ಮೋಜು ಮತ್ತು ಮಿತ್ರರಿಗಾಗಿ ಖರ್ಚುವೆಚ್ಚ ಉಂಟಾಗಬಹುದು. ಸಂಭ್ರಮಾಚರಣೆ ಅಥವಾ ಮೋಜಿಗಾಗಿ ಉಡುಗೊರೆ ಮತ್ತು ಬಟ್ಟೆಬರೆ ಖರೀದಿಸಿದರೆ ನಿಮಗೆ ಖರ್ಚುವೆಚ್ಚ ಉಂಟಾಗಬಹುದು. ಪ್ರಯಾಣಿಸುವಾಗ ಮುನ್ನೆಚರಿಕೆ ವಹಿಸಿ. ನಿಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳ ಜೊತೆಗಿನ ಅನಗತ್ಯ ಸಂಘರ್ಷ ಮತ್ತು ವಾದವಿವಾದಗಳಿಂದ ದೂರವಿದ್ದರೆ ನಿಮಗೆ ಮಾನಸಿಕ ಶಾಂತಿ ಲಭಿಸಲಿದೆ. ಶನಿಯ ಸ್ಥಾನ ಬದಲಾವಣೆಯಿಂದಾಗಿ ಕಾಲಿನಲ್ಲಿ ಸಮಸ್ಯೆ ಅಥವಾ ಅಜೀರ್ಣತೆ ಉಂಟಾಗಬಹುದು. ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅನಾರೋಗ್ಯದಿಂದ ಬಚಾವ್‌ ಆಗಲು ವಾಡಿಕೆಯ ತಪಾಸಣೆಗೆ ಒಳಗಾಗಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:06

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪರಿಧ್

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:27 to 09:47

ಯಮಘಂಡ:11:08 to 12:29

ಗುಳಿಗ ಕಾಲ:13:50 to 15:11

//