ತುಲಾ  ರಾಶಿ

Share: Facebook Twitter Linkedin

ವಾರದಲ್ಲಿ ರಾಶಿಭವಿಷ್ಯ(ತುಲಾ ರಾಶಿ)

Thursday, March 23, 2023

ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ಪ್ರಣಯದಲ್ಲಿ ನೀವು ಹೊಸ ಪ್ರಯೋಗಗಳನ್ನು ಮಾಡಲಿದ್ದೀರಿ. ಅಲ್ಲದೆ ನಿಮ್ಮ ಹೃದಯಂತರಾಳದಿಂದ ನಿಮ್ಮ ಪ್ರೇಮ ಸಂಗಾತಿಯನ್ನು ಪ್ರೀತಿಸಲಿದ್ದೀರಿ. ಇದು ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆಯನ್ನು ಗಟ್ಟಿಗೊಳಿಸಲಿದೆ. ವೈವಾಹಿಕ ಜೀವನವು ಸಂತಸದಿಂದ ಮುಂದೆ ಸಾಗಲದಿಎ. ಆದರೆ ಪ್ರೇಮ ಜೀವನದ ವಿಚಾರದಲ್ಲಿ ಸಮಯವು ಸ್ವಲ್ಪ ದುರ್ಬಲವಾಗಿದೆ. ನಿಮ್ಮ ಪ್ರೇಮಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಬೇಕು ಇದು ವಿಳಂಬವಾಗಬಾರದು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ದೀರ್ಘ ಸಮಯದಿಂದ ಕೆಲಸವನ್ನು ಬದಲಾಯಿಸುವ ಕುರಿತು ಯೋಚಿಸುತ್ತಿದ್ದರೆ ಈ ನಿಟ್ಟಿನಲ್ಲಿ ಪ್ರಯತ್ನಿಸಲು ಇದು ಸಕಾಲ. ನೀವು ಕೆಲಸವನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದೆ. ಇದರಿಂದಾಗಿ ಹಣದ ಲಾಭವೂ ದೊರೆಯಲಿದೆ. ನೀವು ಹೊಸ ಹೂಡಿಕೆಯನ್ನು ಮಾಡಲು ಇಚ್ಛಿಸಿದರೆ ಸದ್ಯಕ್ಕೆ ಇದನ್ನು ತಡೆ ಹಿಡಿಯುವುದು ಒಳ್ಳೆಯದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಪಾಲಿಗೆ ತಲೆನೋವು ಎನಿಸಲಿದೆ. ಸದ್ಯಕ್ಕೆ ನಿಮ್ಮ ಖರ್ಚುವೆಚ್ಚಗಳ ಕುರಿತು ಕಾಳಜಿ ವಹಿಸಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಮಸ್ಯೆ ಎದುರಿಸಬಹುದು. ಏಕೆಂದರೆ ನಿಮ್ಮ ಅಧ್ಯಯನದ ಪಥದಲ್ಲಿ ಅಡಚಣೆಗಳು ಎದುರಾಗಬಹುದು. ಇದು ಹಸ್ತಕ್ಷೇಪಕ್ಕೆ ಕಾರಣವೆನಿಸಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಆಹಾರದಲ್ಲಿ ನಿರಂತರತೆ ಕಾಪಾಡುವ ಜೊತೆಗೆ ಯೋಗ ಮತ್ತು ನಡಿಗೆಗೆ ಗಮನ ನೀಡಿರಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಉತ್ತಮ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:41

ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:17 to 15:48

ಯಮಘಂಡ:06:41 to 08:12

ಗುಳಿಗ ಕಾಲ:09:43 to 11:15

//