ತುಲಾ  ರಾಶಿ

Share: Facebook Twitter Linkedin

ವಾರದಲ್ಲಿ ರಾಶಿಭವಿಷ್ಯ(ತುಲಾ ರಾಶಿ)

Friday, January 27, 2023

ಈ ವಾರವು ನಿಮಗೆ ಅನುಕೂಲಕರವಾಗಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನ ಚಿಂತೆಯನ್ನು ದೂರ ಮಾಡಿ ಮುಂದೆ ಸಾಗಲಿದ್ದು, ತಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧವನ್ನು ಸುಧಾರಿಸಲು ಯತ್ನಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಹೊರಗೆ ಕರೆದುಕೊಂಡು ಹೋಗಲಿದ್ದೀರಿ. ಅವರನ್ನು ನಿಮ್ಮ ಕುಟುಂಬದೊಂದಿಗೆ ಬೆರೆಸಲು ಯತ್ನಿಸಲಿದ್ದೀರಿ. ಇದರಲ್ಲಿ ಒಂದಷ್ಟು ವೈರುಧ್ಯಗಳು ಕಾಣಿಸಿಕೊಳ್ಳಬಹುದು. ಆದರೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಕೆಲಸದಲ್ಲಿ ಯಶಸ್ಸು ದೊರೆಯುವ ಕಾರಣ ಮನಸ್ಸಿನಲ್ಲಿ ಸಂತಸದ ಭಾವನೆ ನೆಲೆಸಲಿದೆ. ಆದರೆ ಏಕಾಂಗಿತನ ನಿಮ್ಮನ್ನು ಕಾಡಬಹುದು. ಈ ಭಾವನೆಯಿಂದ ಹೊರಬರಲು ಯತ್ನಿಸಿ. ಇಲ್ಲದಿದ್ದರೆ ಕೆಲವೊಂದು ಪ್ರಮುಖ ಅವಕಾಶಗಳು ನಿಮ್ಮ ಕೈ ಜಾರಿ ಹೋಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ಇದು ನಿಮ್ಮ ಕೆಲಸವನ್ನು ಬಲಪಡಿಸಲಿದೆ. ವ್ಯವಹಾರದಲ್ಲಿರುವವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಹೀಗಾಗಿ ವ್ಯವಹಾರದಲ್ಲಿ ಅವರ ಸ್ಥಾನದಲ್ಲಿ ಸುಧಾರಣೆ ಉಂಟಾಗಲಿದೆ. ಈ ಸಮಯವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಒಂದಷ್ಟು ಅಡಚಣೆಗಳು ಉಂಟಾಗಬಹುದು. ಆದರೆ ನೀವು ಕಠಿಣ ಶ್ರಮ ಪಡಬಹುದು. ಇದಕ್ಕೆ ತಕ್ಕುದಾದ ಫಲಿತಾಂಶವನ್ನು ನೀವು ಪಡೆಯಲಿದ್ದೀರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಕಾಣಿಸಿಕೊಳ್ಳದು. ಆದರೆ ನಿಮ್ಮ ಆಹಾರದ ಕುರಿತು ಕಾಳಜಿ ವಹಿಸಬೇಕು. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:21

ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:29 to 12:52

ಯಮಘಂಡ:15:37 to 17:00

ಗುಳಿಗ ಕಾಲ:08:44 to 10:06

//