ತುಲಾ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ತುಲಾ ರಾಶಿ)

Friday, January 27, 2023

ತುಲಾ ರಾಶಿಯವರಿಗೆ, ನಿಮ್ಮ ಪ್ರೇಮ ಮತ್ತು ಸಂಬಂಧವನ್ನು ಪರಿಗಣಿಸಿದಾಗ, ಜನವರಿ ತಿಂಗಳು ಧನಾತ್ಮಕ ರೀತಿಯಲ್ಲಿ ಪ್ರಾರಂಭಗೊಳ್ಳಲಿದೆ. ಆದರೆ ಆರಂಭದಲ್ಲಿ ಒಂದಷ್ಟು ವಿಚಿತ್ರ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಉಂಟಾಗಬಹುದು. ಆದರೆ ಈ ತಿಂಗಳಿನಲ್ಲಿ ಶುಕ್ರನ ಸ್ಥಾನ ಬದಲಾವಣೆಯ ಕಾರಣ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಳ ಉಂಟಾಗಲಿದೆ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಲಿದ್ದೀರಿ. ಅಲ್ಲದೆ ಹೊಸ ಪ್ರೇಮ ಸಂಬಂಧಕ್ಕೆ ಕಾಲಿಡುವ ಸಾಧ್ಯತೆ ಇದೆ. ಹಣ ಮತ್ತು ಹಣಕಾಸಿನ ಅಗತ್ಯತೆಯು ಈ ತಿಂಗಳಿನಲ್ಲಿ ಈಡೇರಲಿದೆ. ಆದರೆ ನೀವು ಇದಕ್ಕೆ ತಕ್ಕುದಾಗಿ ಯೋಜನೆ ರೂಪಿಸಬೇಕು. ಮನೆ ಅಥವಾ ಮಕ್ಕಳಿಂದಾಗಿ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ನಾಲ್ಕನೆಯ ವಾರವು ಚೆನ್ನಾಗಿರಲಿದೆ. ಈ ಸಂದರ್ಭದಲ್ಲಿ ನೀವು ಉತ್ತಮ ಯೋಜನೆಯನ್ನು ರೂಪಿಸಲಿದ್ದೀರಿ. ಗುರುವಿನಿಂದಾಗಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಹೀಗಾಗಿ ಕೆಲಸದ ಸ್ಥಳದಲ್ಲಿ ನೀವು ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಅಲ್ಲದೆ, ನಿಮಗೆ ತಿಳಿದಿರುವ ಸಂಪರ್ಕಗಳ ಮೂಲಕ ನೀವು ಹೊಸ ಉದ್ಯೋಗವಕಾಶಗಳನ್ನು ಪಡೆಯಬಹುದು. ಯಾವುದೇ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಿ ಹಾಗೂ ನಿಮ್ಮ ಅಧ್ಯಯನದಲ್ಲಿ ಸೋಮಾರಿತನ ತೋರಬೇಡಿ. ಗುರು ಮತ್ತು ಸೂರ್ಯನ ಕಾರಣ ಕಾಲಕ್ರಮೇಣ ನೀವು ಮುಖ್ಯವಾಗಿ ಶಿಕ್ಷಣ ಮತ್ತು ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಕಾಣಲಿದ್ದೀರಿ. ತಿಂಗಳ ನಾಲ್ಕನೇ ವಾರದಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳಬೇಡಿ. ಸಕಾಲದಲ್ಲಿ ನೀವು ವೈದ್ಯರನ್ನು ಕಾಣದೆ ಇದ್ದರೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಹೀಗಾಗಿ ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ನೀವು ಏನನ್ನು ಬಯಸುತ್ತೀರೋ, ಅದನ್ನು ನೀವು ಪಡೆಯಲಿದ್ದೀರಿ. ಈ ತಿಂಗಳಿನಲ್ಲಿ ನೀವು ಸಂತಸವನ್ನು ಗಳಿಸಲಿದ್ದೀರಿ. ಪ್ರೇಮ, ಸಂಬಂಧ, ಶಿಕ್ಷಣ, ಹಣಕಾಸು ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ತಿಂಗಳು ಹೇಗೆ ಮುಂದುವರಿಯಲಿದೆ ಎಂಬುದನ್ನು ನೋಡೋಣ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:21

ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:29 to 12:52

ಯಮಘಂಡ:15:37 to 17:00

ಗುಳಿಗ ಕಾಲ:08:44 to 10:06

//