ತಿಂಗಳಿನಲ್ಲಿ ರಾಶಿಭವಿಷ್ಯ(ಸಿಂಹ ರಾಶಿ)
Tuesday, February 7, 2023ಸಿಂಹ ರಾಶಿಯವರಿಗೆ, ಫೆಬ್ರುವರಿ ತಿಂಗಳಿನಲ್ಲಿ ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ಶುಕ್ರನ ಸ್ಥಾನ ಬದಲಾವಣೆಯ ಕಾರಣ ಇದು ಉಂಟಾಗಲಿದೆ. ನಿಮ್ಮ ಜೀವನ ಸಂಗಾತಿ ಆಗಿರಲಿ ಅಥವಾ ವ್ಯವಹಾರ ಪಾಲುದಾರ ಆಗಿರಲಿ ಅಥವಾ ಬೇರೆ ಯಾರೂ ಆಗಿರಲಿ ಯಾರೊಂದಿಗೂ ವಾದ ಮಾಡಬೇಡಿ. ಇದರಿಂದ ನಿಮ್ಮ ಪರಿಶ್ರಮ ಹೆಚ್ಚಬಹುದು ಹಾಗೂ ಯಶಸ್ಸಿನಲ್ಲಿ ವಿಳಂಬ ಉಂಟಾಗಬಹುದು. ನೀವು ರಖಂ ವ್ಯವಹಾರವನ್ನು ನಡೆಸುತ್ತಿದ್ದರೆ ನಿಮಗೆ ಯಶಸ್ಸು ದೊರೆಯಲಿದೆ. ಚಂದ್ರನ ಚಲನೆಯ ಕಾರಣ ನೀವು ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ಇದರಿಂದಾಗಿ ನಿಮ್ಮ ಖಾತೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗಲಿದೆ ಹಾಗೂ ಹಣಕಾಸಿನ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು. ಗುರುವು ಈ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡಲಿದ್ದಾನೆ. ಈ ಕಾರಣದಿಂದಾಗಿ ನೀವು ವಿದೇಶ ಪ್ರಯಾಣ ಅಥವಾ ಅಧ್ಯಾತ್ಮಿಕ ಕಾರ್ಯಗಳಿಗಾಗಿ ಹಣ ಖರ್ಚು ಮಾಡಬಹುದು. ನಿಮಗೆ ಮಕ್ಕಳಿದ್ದಲ್ಲಿ, ಅವರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖರ್ಚು ಉಂಟಾಗಲಿದೆ. ನೀವು ಅವಿವಾಹಿತರಾಗಿದ್ದರೆ, ಈ ತಿಂಗಳಿನಲ್ಲಿ ನೀವು ಉತ್ತಮ ಸಂಗಾತಿಯನ್ನು ಪಡೆಯಲಿದ್ದೀರಿ. ಉತ್ತಮ ಸಂಗಾತಿಯನ್ನು ಪಡೆಯುವುದಕ್ಕಾಗಿ ಸ್ವಲ್ಪ ಸಮಯ ಕಾಯಿರಿ. ಶನಿ ಮತ್ತು ಸೂರ್ಯನ ಕಾರಣ ನಿಮ್ಮ ಸಂಬಂಧವು ಹದಗೆಡಬಹುದು. ನಿಮ್ಮಲ್ಲಿ ಕೆಲವರು ಸಂಗಾತಿಯಿಂದ ದೂರಗೊಳ್ಳುವ ಸಾಧ್ಯತೆ ಇದೆ. ಹಿಂದಿನ ವಿಚಾರಗಳ ಕುರಿತು ತಲೆ ಕೆಡಿಸಿಕೊಳ್ಳಬೇಡಿ ಹಾಗೂ ಇಂದಿನ ಬದುಕಿಗೆ ಮಹತ್ವ ನೀಡಿ. ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ ಹಾಗೂ ಕೆಟ್ಟವರ ಸಹವಾಸ ಮಾಡಬೇಡಿ. ಈ ತಿಂಗಳಿನಲ್ಲಿ ಅಚ್ಚರಿಯ ತಪಾಸಣೆ ಅಥವಾ ಪರೀಕ್ಷೆ ಉಂಟಾಗಬಹುದು. ಕಠಿಣ ಶ್ರಮ ಮತ್ತು ಸಮರ್ಪಣಾ ಭಾವದಿಂದಾಗಿ ನೀವು ನಿರೀಕ್ಷಿತ ಯಶಸ್ಸನ್ನು ಪಡೆಯಬಹುದು. ಎಲೆಕ್ಟ್ರಾನಿಕ್ ವಸ್ತುಗಳನ್ನು ವಿಪರೀತವಾಗಿ ಬಳಸಬೇಡಿ. ನಿಮ್ಮ ಕಣ್ಣಿನ ಆರೋಗ್ಯಕ್ಕೆ ಇದರಿಂದ ಸಮಸ್ಯೆಯುಂಟಾಗಬಹುದು ಹಾಗೂ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ತಿಂಗಳಿನಲ್ಲಿ ದೈನಂದಿನ ತಪಾಸಣೆ ಮಾಡಲು ಮರೆಯಬೇಡಿ ಹಾಗೂ ನಿಯಮಿತವಾಗಿ ಔಷಧಿಯನ್ನು ತೆಗೆದುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಗ್ರಹಗಳ ಸ್ಥಾನ ಬದಲಾವಣೆಯ ಕಾರಣ ಬಿಡುವಿಲ್ಲದ ವೇಳಾಪಟ್ಟಿಯು ನಿಮ್ಮದಾಗಬಹುದು ಹಾಗೂ ನಿಮ್ಮ ಕೆಲಸದ ಒತ್ತಡವು ಹೆಚ್ಚಬಹುದು. ಗರ್ಭಿಣಿಯರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಹಾಗೂ ಧನಾತ್ಮಕ ವಾತಾವರಣದಲ್ಲಿರಲು ಯತ್ನಿಸಬೇಕು.
ರಾಶಿಯಾಧಾರಿತ ವ್ಯಕ್ತಿತ್ವ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿವನ್ನು ಹೆಚ್ಚಿ ಆತ್ಮವಿಶ್ವಾಸ, ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. ದೃಢ ವ್ಯಕ್ತಿತ್ವ ಹೊಂದಿರುವ ಇವರು ಇತರರ ಮೇಲೆ ತಮ್ಮ ಪ್ರಭಾವನ್ನು ಉಳಿಸುವವರಾಗಿರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ ರಾಶಿಯ ಹೆಣ್ಮಕ್ಕಳು ಮಾತ್ರ ಸ್ನೇಹಿತನನ್ನು ನಂಬಬೇಡಿ, ಮೋಸ ಮಾಡಿ ಮಾಯವಾಗ್ತಾರೆ!
-
Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ
-
Daily Horoscope: ಬೇರೆಯವರಿಗೆ ಸಹಾಯ ಮಾಡಿದ್ರೆ ನಿಮಗೆ ಖುಷಿ, ಈ ರಾಶಿಯವರಿಗೆ ಸಂತಸದ ದಿನ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:16
ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ
ಇಂದಿನ ನಕ್ಷತ್ರ:ಮಾಘ
ಇಂದಿನ ಕರಣ: ತೈತಿಲ್
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಶೋಭನ್
ಇಂದಿನ ವಾರ:ಮಂಗಳವಾರ
ಅಶುಭ ಸಮಯ
ರಾಹು ಕಾಲ:15:42 to 17:06
ಯಮಘಂಡ:11:29 to 12:53
ಗುಳಿಗ ಕಾಲ:12:53 to 14:18
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್