ಮಿಥುನ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಮಿಥುನ ರಾಶಿ)

Sunday, June 4, 2023

ಹೆಚ್ಚಿನ ಗ್ರಹಗಳು ಈ ತಿಂಗಳಿನಲ್ಲಿ ಅನುಕೂಲಕರ ಸ್ಥಾನದಲ್ಲಿದ್ದು, ವೈಯಕ್ತಿಕ ಹಾಗೂ ವೃತ್ತಿಪರ ಕ್ಷೇತ್ರಗಳೆರಡರಲ್ಲೂ ನಿರೀಕ್ಷಿತ ಯಶಸ್ಸನ್ನು ತಂದು ಕೊಡಲಿವೆ. ಪಕ್ಕದ ಸ್ಥಳಗಳಿಗೆ ಪ್ರಯಾಣಿಸುವಾಗ ನಿರೀಕ್ಷಿಸುವ ಯಶಸ್ಸನ್ನು ತಂದು ಕೊಡುವಲ್ಲಿ ಬುಧನು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾನೆ. ಸೂರ್ಯ ಮತ್ತು ಗುರುವು ವಿದೇಶಿ ವಸ್ತುಗಳು, ಪ್ರವಾಸ ಅಥವಾ ಪ್ರವಾಸದ ಇಚ್ಛೆಯನ್ನು ಸೂಚಿಸುತ್ತಿವೆ. ಈ ತಿಂಗಳಿನಲ್ಲಿ ಏನಾದರೂ ಬದಲಾವಣೆ ಉಂಟಾಗಬಹುದು. ಸಂಬಂಧದ ವಿಚಾರಕ್ಕೆ ಬಂದಾಗ ನಿಮ್ಮಲ್ಲಿ ಕೆಲವು ವೈವಾಹಿಕ ಜೀವನಕ್ಕೆ ಕಾಲಿಡಬಹುದು. ನೀವು ಯಾರನ್ನಾದರೂ ಇಷ್ಟ ಪಡುತ್ತಿದ್ದರೆ ಪ್ರೇಮ ಪ್ರಸ್ತಾಪವನ್ನು ಮುಂದಿಡಲು ಇದು ಸಕಾಲ. ಶುಕ್ರ ಮತ್ತು ಬುಧನು, ಪ್ರೇಮ ಮತ್ತು ವೈವಾಹಿಕ ಸಂಬಂಧಗಳೆರಡರಲ್ಲೂ ಸ್ಪಷ್ಟತೆ ಮತ್ತು ಯಶಸ್ಸನ್ನು ತಂದು ಕೊಡುವ ಮೂಲಕ ವೈವಾಹಿಕ ಬದುಕಿನಲ್ಲಿ ಯಶಸ್ಸನ್ನು ತಂದು ಕೊಡಲಿದ್ದಾರೆ. ಈ ತಿಂಗಳಿನಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಣ್ಣ ಪ್ರವಾಸ ಅಥವಾ ಪ್ರಯಾಣಕ್ಕೆ ಹೋಗಬಹುದು. ವಿವಾಹದ ನಂತರ, ವಿದೇಶದಲ್ಲಿ ನೆಲೆಸಲು ಕೆಲವರು ಯೋಚಿಸಬಹುದು. ಜೀವನ ಸಂಗಾತಿಯಿಂದ ಉಡುಗೊರೆ ಮತ್ತು ಹಣಕಾಸಿನ ನೆರವು ದೊರೆಯಬಹುದು. ಮಂಗಳ ಮತ್ತು ಬುಧನ ಸಹಾಯದಿಂದ ನಿಮಗೆ ಭಡ್ತಿ ಅಥವಾ ವೇತನದಲ್ಲಿ ಹೆಚ್ಚಳ ಉಂಟಾಗಬಹುದು. ನಿರೀಕ್ಷಿತ ಲಾಭ ಉಂಟಾದರೂ ಅನಿರೀಕ್ಷಿತ ವೆಚ್ಚಗಳಿಗಾಗಿ ನೀವು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಜೀವನ ಸಂಗಾತಿ ಅಥವಾ ವ್ಯವಹಾರ ಪಾಲುದಾರರು ಹಣ ತರಬಹುದು. ನೀವು ಈ ಹಿಂದೆ ಮಾಡಿದ ಹೂಡಿಕೆಯ ಮೇಲೆ ಲಾಭ ಗಳಿಸಲು ಬುಧನು ಸಹಾಯ ಮಾಡಬಹುದು. ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಈ ತಿಂಗಳು ಲಾಭದಾಯಕ ಎನಿಸಲಿದೆ. ಸೂರ್ಯ ಮತ್ತು ಗುರುವಿನ ಕಾರಣ ವಿದೇಶಕ್ಕೆ ಸಂಬಂಧಿಸಿದ ಉದ್ಯೋಗವು ದೊರೆಯಬಹುದು. ವಿದೇಶಿ ಗ್ರಾಹಕರ ಜೊತೆಗಿನ ಒಪ್ಪಂದಗಳು ಯಶಸ್ವಿಯಾಗಬಹುದು. ಶುಕ್ರ ಮತ್ತು ಬುಧನ ಆಶೀರ್ವಾದದ ಕಾರಣ ಫ್ಯಾಶನ್‌ ಮತ್ತು ಕಲಾತ್ಮಕ ಕೈಗಾರಿಕೆಗಳಿಗೆ ಸಂಬಂಧಿಸಿದ ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಈ ತಿಂಗಳು ಅನುಕೂಲಕರ ಎನಿಸಲಿದೆ. ಈ ತಿಂಗಳಿನಲ್ಲಿ ಬುಧನ ಚಲನೆಯಿಂದಾಗಿ ನಿರೀಕ್ಷಿತ ಒಪ್ಪಂದ ಸಿಗಬಹುದು ಅಥವಾ ಭಡ್ತಿ ಉಂಟಾಗಬಹುದು. ಇತರ ವ್ಯಕ್ತಿಗಳ ಜೊತೆಗೆ ಉತ್ತಮ ವೃತ್ತಿ ಸಂಬಂಧ ಉಂಟಾಗಬಹುದು ಹಾಗೂ ಉನ್ನತ ಮಟ್ಟದ ನೆರವು ಸಿಗಬಹುದು. ಶನಿಯು ತನ್ನ ಪ್ರಸ್ತುತ ಸ್ಥಾನದಲ್ಲಿಯೇ ಉಳಿದುಕೊಳ್ಳಲಿದ್ದಾನೆ. ಹೀಗಾಗಿ ಈ ತಿಂಗಳಿನಲ್ಲಿ ನಿಮ್ಮ ಕಠಿಣ ಶ್ರಮವನ್ನು ನೀವು ಮುಂದುವರಿಸಬೇಕು ಮತ್ತು ಯಶಸ್ಸಿಗಾಗಿ ಪಣ ತೊಡಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಯಶಸ್ಸನ್ನು ನಿರೀಕ್ಷಿಸಬಹುದು ಎಂದು ನಿಮ್ಮ ರಾಶಿಯಲ್ಲಿರುವ ಮಂಗಳನು ಸೂಚಿಸುತ್ತಾನೆ. ಸಣ್ಣ ಮಟ್ಟದ ಸಭೆ ಸಮಾರಂಭ ಏರ್ಪಡಿಸಬಹುದು ಅಥವಾ ಕೆಲ ಕಾಲೇಜು ಅಥವಾ ಶಾಲಾ ವಿದ್ಯಾರ್ಥಿಗಳು ಕ್ಯಾಂಪಿಂಗ್‌ ಗೆ ಹೋಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಬಹುದು. ನಿಮಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಈ ತಿಂಗಳಿನಲ್ಲಿ ನಿಮಗೆ ಚೇತರಿಕೆ ಉಂಟಾಗಲಿದೆ. ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದಾದ ಅನಗತ್ಯ ಒತ್ತಡವನ್ನು ದೂರ ಮಾಡಬೇಕು ಎಂದು ರಾಹು ಮತ್ತು ಕೇತುವಿನ ಚಲನೆಗಳು ಸಲಹೆ ನೀಡುತ್ತವೆ.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:05:53

ಇಂದಿನ ತಿಥಿ:ಪೂರ್ಣಿಮಾ

ಇಂದಿನ ನಕ್ಷತ್ರ:ಜ್ಯೇಷ್ಠ

ಇಂದಿನ ಕರಣ: ಭವ

ಇಂದಿನ ಪಕ್ಷ:ಪೂರ್ಣಿಮಾ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:41 to 19:22

ಯಮಘಂಡ:12:37 to 14:18

ಗುಳಿಗ ಕಾಲ:15:59 to 17:41

//