ಮಿಥುನ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಮಿಥುನ ರಾಶಿ)

Tuesday, March 28, 2023

ಈ ತಿಂಗಳಿನಲ್ಲಿ ವೈಯಕ್ತಿಕ ಮತ್ತು ವೃತ್ತಿ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಸಂಬಂಧವನ್ನು ಕಾಪಾಡಬೇಕಾದರೆ ಆಕ್ರಮಣಶೀಲತೆ ಮತ್ತು ವಾಗ್ವಾದದಿಂದ ನೀವು ದೂರವಿರಬೇಕು. ರಾಹು ಮತ್ತು ಶುಕ್ರನ ಚಲನೆಯ ಕಾರಣ ಪ್ರಮುಖ ವ್ಯಕ್ತಿಗಳೊಂದಿಗೆ ಆರೋಗ್ಯದಾಯಕ ಮತ್ತು ನೇರ ಒಡನಾಟವು ಸಾಧ್ಯವೆನಿಸಲಿದೆ. ಬುಧನ ಚಲನೆಯ ಕಾರಣ ಯಾವುದೇ ರೀತಿಯ ದಸ್ತಾವೇಜುಗಳ ದೃಢೀಕರಣ ಮತ್ತು ವಿಶ್ಲೇಷಣೆಯ ಮಾಡುವಾಗ ಸಾಕಷ್ಟು ಕಾಳಜಿಯನ್ನು ವಹಿಸಬೇಕು. ದೂರವಾಣಿ ಕರೆ ಮಾಡುವಾಗ ಅಥವಾ ಚಾಟ್‌ ಮಾಡುವಾಗ ಯಾವುದೇ ವಾಗ್ವಾದ ಅಥವಾ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡಬೇಡಿ. ಸಂಬಂಧದ ವಿಚಾರದಲ್ಲಿ ಹೇಳುವುದಾದರೆ, ಯಾವುದೇ ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಹೊಸ ಸಂಬಂಧದ ಪ್ರಸ್ತಾಪದ ಕುರಿತು ಸಾಕಷ್ಟು ಆಲೋಚನೆ ನಡೆಸಿ. ತಪ್ಪು ಸಂವಹನ ಮತ್ತು ವಾಗ್ವಾದದ ಕಾರಣ ಸಂಬಂಧದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ವೈವಾಹಿಕ ಬದುಕು ಅಥವಾ ಸಂಬಂಧದ ವಿಚಾರದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ. ಹಣ ಮತ್ತು ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ಯಾವುದೇ ಬೃಹತ್‌ ಹೂಡಿಕೆಯನ್ನು ಮಾಡಬಾರದು ಎಂದು ರಾಹು ಮತ್ತು ಗುರು ಸಲಹೆ ನೀಡುತ್ತಾರೆ. ಮಂಗಳನ ಕಾರಣ ವಾಹನದಲ್ಲಿ ಸಮಸ್ಯೆ ಮತ್ತು ದುರಸ್ತಿ ಅಥವಾ ಮನೆ ಮತ್ತು ಕಚೇರಿಯ ನವೀಕರಣದ ಕಾರಣ ಕೆಲವೊಂದು ಅನಿರೀಕ್ಷಿತ ವೆಚ್ಚಗಳು ಉಂಟಾಗಬಹುದು. ಶೇರು ಮಾರುಕಟ್ಟೆಯಲ್ಲಿ ಈ ತಿಂಗಳಿನಲ್ಲಿ ಹೂಡಿಕೆ ಮಾಡುವುದು ಅನುಕೂಲಕರವಲ್ಲ. ಶನಿಯ ಕಾರಣ ಆಸ್ತಿಗೆ ಸಂಬಂಧಿಸಿದಂತೆ ನಿಮಗೆ ಖರ್ಚುವೆಚ್ಚಗಳು ಉಂಟಾಗಬಹುದು. ವ್ಯವಹಾರದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ಕುರಿತು ಎಚ್ಚರಿಕೆ ವಹಿಸಿ. ಏಕೆಂದರೆ ಬುಧನ ಚಲನೆಯು ಅಷ್ಟೊಂದು ಅನುಕೂಲಕರವಾಗಿಲ್ಲ. ಕೆಲಸಕ್ಕೆ ಸಂಬಂಧಿಸಿದ ಪತ್ರಗಳು ಮತ್ತು ಕರೆಗಳಿಗೆ ಹೆಚ್ಚಿನ ಗಮನ ನೀಡಬೇಕು. ನಿಮ್ಮ ವೃತ್ತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡಲು ಇದು ಸೂಕ್ತ ಸಮಯವಲ್ಲ. ನಿಮ್ಮಲ್ಲಿ ಕೆಲವರಿಗೆ ಸಂದರ್ಶನದಲ್ಲಿ ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ಅಡಚಣೆ ಅಥವಾ ವಿಳಂಬ ಉಂಟಾಗಬಹುದು. ಸರ್ಕಾರಿ ಕೆಲಸ ಪಡೆಯುವಲ್ಲಿ ವಿಳಂಬ ಉಂಟಾಗಬಹುದು. ಹಿರಿಯ ವ್ಯಕ್ತಿಯ ಜೊತೆಗಿನ ಸಂವಹನ ಅಥವಾ ಒಡನಾಟವು ಒತ್ತಡ ಮತ್ತು ಸವಾಲುಗಳನ್ನು ಉಂಟು ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಮೊನಚುಗೊಳಿಸಬೇಕು. ತಪ್ಪು ಗೆಳೆಯರ ಒಡನಾಟವು ಸಮಸ್ಯೆಯನ್ನುಂಟು ಮಾಡಬಹುದು. ಪೋಷಕರು ಈ ತಿಂಗಳಿನಲ್ಲಿ ಹೆಚ್ಚು ಬೇಡಿಕೆಗಳನ್ನು ಮುಂದಿಡಬಹುದು. ಬುಧನ ಚಲನೆಯ ಕಾರಣ, ಭಾಷೆಗೆ ಸಂಬಂಧಿಸಿದ ಕೋರ್ಸುಗಳಿಗೆ ಹೆಚ್ಚು ಸಮಯ ಮತ್ತು ಪ್ರಯತ್ನವನ್ನು ಮೀಸಲಿಟ್ಟರೆ ಪ್ರಯೋಜನಕಾರಿಯಾಗುತ್ತದೆ. ಈ ತಿಂಗಳಿನಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಮಂಗಳ ಮತ್ತು ಬುಧ ಸಲಹೆ ನೀಡುತ್ತಾರೆ. ಯಾವುದೇ ಭಾರವಾದ ವಸ್ತುವನ್ನು ಎತ್ತಬೇಡಿ. ಬಿಗಿತ ಅಥವಾ ಹರಿಯುವಿಕೆಯ ಕಾರಣ ಯಾವುದಾದರೂ ಸ್ನಾಯು ಅಥವಾ ನರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಗರ್ಭಿಣಿ ತಾಯಂದಿರು ನಿರಂತರ ತಪಾಸಣೆಯನ್ನು ಮುಂದುವರಿಸಬೇಕು ಎಂದು ಕೇತು ಮತ್ತು ರಾಹು ಸೂಚನೆ ನೀಡುತ್ತಾರೆ.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:36

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭಭಾಗ್ಯ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:49 to 17:21

ಯಮಘಂಡ:11:12 to 12:44

ಗುಳಿಗ ಕಾಲ:12:44 to 14:17

//