ಮಿಥುನ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಮಿಥುನ ರಾಶಿ)

Tuesday, February 7, 2023

ಈ ತಿಂಗಳಿನಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಕಠಿಣ ಶ್ರಮ ಮತ್ತು ನಿರಂತರ ಪ್ರಯತ್ನವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಯಶಸ್ಸನ್ನು ತಂದು ಕೊಡಲಿದೆ. ನೀವು ಶಿಸ್ತನ್ನು ಪಾಲಿಸಬೇಕು, ಸಮಯ ಪಾಲನೆ ಮಾಡಬೇಕು ಹಾಗೂ ಭರವಸೆಗಳನ್ನು ಈಡೇರಿಸಬೇಕು ಎಂದು ಸೂರ್ಯ ಮತ್ತು ಶನಿ ನಿಮಗೆ ಸಲಹೆ ನೀಡುತ್ತಾರೆ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಮತ್ತು ನಿಮ್ಮ ಸಂಬಂಧದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಸಂಬಂಧದ ವಿಚಾರದಲ್ಲಿ ಹೇಳುವುದಾದರೆ ಈ ತಿಂಗಳು ನಿಮ್ಮ ಪಾಲಿಗೆ ಶುಭಕರವೆನಿಸಲಿದೆ. ನಿಮ್ಮ ಪ್ರೇಮ ಸಂಗಾತಿ ಅಥವಾ ಜೀವನ ಸಂಗಾತಿಯೊಂದಿಗೆ ವಿಹಾರ ಅಥವಾ ಪ್ರಯಾಣಕ್ಕೆ ಹೋಗಲು ಅವಕಾಶ ದೊರೆಯಲಿದೆ. ಸ್ನೇಹಿತರಿಂದ ಸಂಬಂಧದ ಪ್ರಸ್ತಾವನೆಯು ಸಿಗಬಹುದು. ನಿಮ್ಮಲ್ಲಿ ಕೆಲವರು ನಿಮ್ಮ ಅತ್ತೆ ಮಾವಂದಿರಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಿದ್ದೀರಿ. ನಿಮ್ಮ ಬೇಡಿಕೆಯ ಪ್ರವೃತ್ತಿಯನ್ನು ದೂರ ಮಾಡಬೇಕು ಎಂದು ಮಂಗಳನು ನಿಮಗೆ ಸಲಹೆ ನೀಡುತ್ತಾನೆ. ಇದು ನಿಮ್ಮನ್ನು ವೈವಾಹಿಕ ಸಮಸ್ಯೆಯಿಂದ ರಕ್ಷಿಸಲಿದೆ. ಹಣ ಮತ್ತು ಹಣಕಾಸಿನ ವಿಚಾರದಲ್ಲಿ ಈ ತಿಂಗಳಿನಲ್ಲಿ ಗುರುವು ನಿಮ್ಮನ್ನು ರಕ್ಷಿಸಲಿದ್ದಾನೆ. ಆದರೆ ಬೇರೆಯವರಿಗೆ ಹಣ ನೀಡಬೇಡಿ ಎಂದು ರಾಹು ಮತ್ತು ಗುರು ನಿಮಗೆ ಸಲಹೆ ನೀಡುತ್ತಾರೆ. ಏಕೆಂದರೆ ಈ ಹಣವನ್ನು ಸುಲಭವಾಗಿ ಹಿಂಪಡೆಯಲು ಆಗುವುದಿಲ್ಲ ಎಂದು ಗ್ರಹಗಳು ಎಚ್ಚರಿಕೆ ನೀಡುತ್ತಿವೆ. ಮಂಗಳನ ಕಾರಣ ವಾಹನದ ದುರಸ್ತಿ ಅಥವಾ ನವೀಕರಣಕ್ಕಾಗಿ ಯೋಜಿತವಲ್ಲದ ವೆಚ್ಚ ಉಂಟಾಗಬಹುದು. ಶನಿ ಮತ್ತು ಸೂರ್ಯನ ಚಲನೆಯ ಕಾರಣ ಆರೋಗ್ಯ ಸಂಬಂಧಿತ ಖರ್ಚು ಉಂಟಾಗಬಹುದು. ನಿಮಗೆ ಹಿರಿಯರ ಬೆಂಬಲ ದೊರೆಯಬಹುದು. ನಿಮ್ಮ ಕಠಿಣ ಶ್ರಮ ಮತ್ತು ನಿರಂತರ ಪ್ರಯತ್ನವನ್ನು ನಿಮ್ಮ ಹಿರಿಯರು ಶ್ಲಾಘಿಸಲಿದ್ದಾರೆ. ಶನಿಯ ಕಾರಣ ನಿಮ್ಮ ಕೆಲಸದ ಒತ್ತಡ ಹೆಚ್ಚಾಗಬಹುದು. ತಿಂಗಳ ಕೊನೆಗೆ ನಿಮ್ಮ ಪಾಲಿಗೆ ಒಂದಷ್ಟು ಅಡ್ಡಿ ಆತಂಕಗಳು ಉಂಟಾಗಬಹುದು ಅಲ್ಲದೆ ನಿಮ್ಮ ಬಾಸ್‌ ಜೊತೆಗಿನ ಸಂಬಂಧ ಹದಗೆಡಬಹುದು. ಹೀಗಾಗಿ ಅವರ ಜೊತೆ ವಾಗ್ವಾದ ನಡೆಸಬೇಡಿ. ಸಂವಹನ ಅಥವಾ ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಕೆಲಸವು ನಿಮಗೆ ಉದ್ಯೋಗವಕಾಶ ಮತ್ತು ಭಡ್ತಿಯನ್ನು ಕೊಡಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಹಳೆಯ ವಿಚಾರಗಳನ್ನು ಕೆದಕದಂತೆ ಹಾಗೂ ಹಳೆಯ ತಪ್ಪುಗಳಿಗಾಗಿ ವಾದ ಮಾಡಂದಂತೆ ನಿಮಗೆ ಸಲಹೆ ನೀಡಲಾಗಿದೆ. ಇದು ಈ ತಿಂಗಳಿನಲ್ಲಿ ನಿಮ್ಮ ಆರೋಗ್ಯವನ್ನು ಬಾಧಿಸಬಹುದಾದ ಒತ್ತಡದಿಂದ ನಿಮ್ಮನ್ನು ರಕ್ಷಿಸಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಚುರುಕು ಬುದ್ಧಿಯವರಾಗಿರುತ್ತಾರೆ. ಕುತೂಹಲಿಗಳು ಆದ ಇವರ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ಗುಂಪಿನಲ್ಲಿ ಸದಾ ತಮ್ಮ ಚುರುಕಿನ ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:16

ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ

ಇಂದಿನ ನಕ್ಷತ್ರ:ಮಾಘ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಶೋಭನ್

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:42 to 17:06

ಯಮಘಂಡ:11:29 to 12:53

ಗುಳಿಗ ಕಾಲ:12:53 to 14:18

//