ಕಟಕ  ರಾಶಿ

Share: Facebook Twitter Linkedin

ವಾರದಲ್ಲಿ ರಾಶಿಭವಿಷ್ಯ(ಕಟಕ ರಾಶಿ)

Tuesday, March 28, 2023

ಈ ವಾರವು ನಿಮಗೆ ಶುಭ ಸುದ್ದಿಯನ್ನು ತರಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ತೃಪ್ತಿ ಅನುಭವಿಸಲಿದ್ದಾರೆ. ಅಲ್ಲದೆ ಹಳೆಯ ಸಮಸ್ಯೆಗಳು ದೂರಗೊಳ್ಳಲಿವೆ. ವಾರದ ಆರಂಭಿಕ ದಿನಗಳು ನಿಮ್ಮ ಪ್ರೇಮ ಬದುಕಿಗೆ ಉತ್ತಮ. ನಿಮ್ಮ ನಡುವಿನ ಅನ್ಯೋನ್ಯತೆ ಮತ್ತು ಪರಿಚಿತತೆಯ ಕಾರಣ ಪ್ರಣಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಆದಾಯದಲ್ಲಿ ವಿಶೇಷ ಹೆಚ್ಚಳ ಉಂಟಾಗಲಿದೆ. ನೀವು ಉದ್ಯೋಗದಲ್ಲಿದ್ದರೆ, ನಿಮಗೆ ಒಳ್ಳೆಯ ಭಡ್ತಿ ದೊರೆಯಬಹುದು. ಇದರಿಂದಾಗಿ ನಿಮ್ಮ ಮುಖವು ಅರಳಲಿದೆ. ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ನೆಲೆಸಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಓಡಾಟ ನಡೆಸಬೇಕಾದೀತು. ವಿದೇಶಕ್ಕೆ ಹೋಗಲು ನಿಮಗೆ ಅವಕಾಶ ದೊರೆಯಬಹುದು. ಪಟ್ಟಣದಿಂದ ಹೊರಕ್ಕೆ ಪ್ರಯಾಣಿಸಬೇಕಾದೀತು. ಇದರಿಂದಾಗಿ ನಿಮಗೆ ದಣಿವು ಉಂಟಾಗಬಹುದು ಹಾಗೂ ಖರ್ಚುವೆಚ್ಚವೂ ಉಂಟಾಗಬಹುದು. ಆದರೂ ಇದು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ. ಇದು ನಿಮ್ಮ ಪಾಲಿಗೆ ತುಂಬಾ ಪ್ರಮುಖವೆನಿಸಲಿದೆ. ಈಗ ನೀವು ಹೊಸ ವಿಧಾನಗಳತ್ತ ಗಮನ ಹರಿಸಬೇಕು. ಏಕೆಂದರೆ ಹಳೆಯ ವಿಧಾನಗಳು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸದೆ ಇರಬಹುದು. ಕಠಿಣ ಶ್ರಮದ ಜೊತೆಗೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಹಾಗೂ ಕೆಲಸವನ್ನು ಮುಂದುವರಿಸುವುದಕ್ಕಾಗಿ ಗಮನ ನೀಡಿ. ಸಮಯವು ನಿಮ್ಮ ಪರವಾಗಿದೆ. ವಿದ್ಯಾರ್ಥಿಗಳ ಕುರಿತು ನಾವು ಮಾತನಾಡುವುದಾದರೆ, ಅವರು ಅಧ್ಯಯನಕ್ಕಾಗಿ ಸಿದ್ಧರಾಗಿದ್ದಾರೆ. ಇದರಿಂದಾಗಿ ಅವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸದ್ಯಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬರದು. ಆದರೆ ನಿಮ್ಮ ಆಹಾರಕ್ಕೆ ನೀವು ಗಮನ ನೀಡಬೇಕು. ವಾರದ ಕೊನೆಗಳು ದಿನವು ಪ್ರಯಾಣಕ್ಕೆ ಅತ್ಯುತ್ತಮ.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:36

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭಭಾಗ್ಯ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:49 to 17:21

ಯಮಘಂಡ:11:12 to 12:44

ಗುಳಿಗ ಕಾಲ:12:44 to 14:17

//