ಕಟಕ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಕಟಕ ರಾಶಿ)

Sunday, June 4, 2023

ವಿಚ್ಛೇದನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುತ್ತಿರುವ ವ್ಯಕ್ತಿಗಳು ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ಅಡಚಣೆ ಮತ್ತು ವಿಳಂಬವನ್ನು ಎದುರಿಸಬಹುದು. ರಾಹು ಮತ್ತು ಕೇತು ಚಲನೆಯಲ್ಲಿರುವಾಗ ಪ್ರೇಮ ಮತ್ತು ವೈವಾಹಿಕ ಸಂಬಂಧದಲ್ಲಿ ಅಕ್ರಮಣಶೀಲತೆ ಮತ್ತು ಪ್ರತ್ಯೇಕತೆ ಕಾಣಿಸಿಕೊಳ್ಳಬಹುದು. ಶನಿಯ ಕಾರಣ ಶೇರು ಮಾರುಕಟ್ಟೆಯಲ್ಲಿ ಹಣ ಗಳಿಸುವಲ್ಲಿ ಅಡಚಣೆ ಉಂಟಾಗಬಹುದು. ಈ ನಿಟ್ಟಿನಲ್ಲಿ ಸಾಕಷ್ಟು ಶೋಧ, ವಿಶ್ಲೇಷಣೆ ಮತ್ತು ವೃತ್ತಿಪರ ಮಾರ್ಗದರ್ಶನದ ಅಗತ್ಯ ಉಂಟಾಗಬಹುದು. ದೀರ್ಘಕಾಲೀನ ಹೂಡಿಕೆಗಳಲ್ಲಿ ಶನಿಯ ಪ್ರಯೋಜನವನ್ನು ನೋಡಬಹುದು. ಈ ತಿಂಗಳ ಎರಡನೇ ಹಂತದಲ್ಲಿ ಉಂಟಾಗುವ ಶನಿ ಮತ್ತು ಮಂಗಳನ ಚಲನೆಯ ಕಾರಣ ಸಾಲ ಮತ್ತು ಋಣಕ್ಕೆ ಸಂಬಂಧಿಸಿದ ಚಿಂತೆಯನ್ನು ನೀವು ಬಗೆಹರಿಸಬಹುದು. ಯೋಗ ಪಾಠಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಇತರ ಕೋರ್ಸುಗಳಿಗಾಗಿ ಹಣದ ವೆಚ್ಚ ಉಂಟಾಗಬಹುದು. ನಿಮ್ಮ ಆಕ್ರಮಣಶೀಲತೆಯಿಂದ ನೀವು ದೂರವಿರಬೇಕು. ಏಕೆಂದರೆ ಹೀಗೆ ಮಾಡಿದಲ್ಲಿ ಕೆಲಸದ ಸ್ಥಳದಲ್ಲಿ ಅನಿರೀಕ್ಷಿತ ಅಡ್ಡಿ ಆತಂಕಗಳು ಉಂಟಾಬಹುದು. ನಿಮ್ಮಲ್ಲಿ ಕೆಲವರು ಬೇರೆಯೇ ಅಭಿಪ್ರಾಯವನ್ನು ಹೊಂದಿರುವುದರಿಂದ ಸಹೋದ್ಯೋಗಿ ಅಥವಾ ವ್ಯವಹಾರದ ಪಾಲುದಾರರ ಜೊತೆಗೆ ಸಮಸ್ಯೆ ಉಂಟಾಗಬಹುದು. ಬುಧನ ಚಲನೆಯ ಕಾರಣ ಅನುಕೂಲಕರ ಉದ್ಯೋಗವಕಾಶಗಳು ಉಂಟಾಗಬಹುದು ಹಾಗೂ ವಿದೇಶಿ ಗ್ರಾಹಕರಿಂದ ಗಮನಾರ್ಹ ಕಾಮಗಾರಿಗಳು ದೊರೆಯಬಹುದು. ಮಂಗಳನ ಕಾರಣ ಕೌಟುಂಬಿಕ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಬಹುದು. ಗುರು ಮತ್ತು ಸೂರ್ಯನ ಪ್ರಭಾವದ ಕಾರಣ ಪ್ರಕಟಣೆ ಅಥವಾ ಮಾಧ್ಯಮ ಕ್ಷೇತ್ರದ ವೃತ್ತಿಯಲ್ಲಿ ಯಶಸ್ಸು ದೊರೆಯಬಹುದು. ಸೂರ್ಯ ಮತ್ತು ಚಂದ್ರನ ಕಾರಣ ಈ ತಿಂಗಳಿನಲ್ಲಿ ಲಿಖಿತ ಪರೀಕ್ಷೆಯಲ್ಲಿ ಯಶಸ್ಸು ದೊರೆಯಬಹುದು. ಈ ತಿಂಗಳಿನಲ್ಲಿ ಸರ್ಕಾರಿ ಮೌಖಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಬಹುದು. ಶನಿ ಮತ್ತು ಸೂರ್ಯನ ಕಾರಣ ಕಾನೂನಿಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಶುಕ್ರ ಮತ್ತು ಬುಧನು ಫ್ಯಾಶನ್‌ ಕ್ಷೇತ್ರಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಯಶಸ್ಸನ್ನು ತಂದು ಕೊಡಬಹುದು. ಈ ತಿಂಗಳಿನಲ್ಲಿ ನಿಮ್ಮಲ್ಲಿ ಕೆಲವರು ವಿವಾಹ ಮತ್ತು ಅಧ್ಯಾತ್ಮಿಕತೆಯನ್ನು ಅರಿತುಕೊಳ್ಳಲು ಆಸಕ್ತಿ ತೋರಬಹುದು. ನಿಮ್ಮ ಆರೋಗ್ಯಕ್ಕೆ ನೀವು ಈ ತಿಂಗಳಿನಲ್ಲಿ ವಿಶೇಷ ಗಮನ ನೀಡಬೇಕು. ಏಕೆಂದರೆ ಅಂತಿಮ ಹಂತದಲ್ಲಿ ನೀವು ಯಾವ ರೀತಿ ಪೂರ್ವಸಿದ್ಧತೆ ನಡೆಸುತ್ತೀರಿ ಎನ್ನುವುದರ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:05:53

ಇಂದಿನ ತಿಥಿ:ಪೂರ್ಣಿಮಾ

ಇಂದಿನ ನಕ್ಷತ್ರ:ಜ್ಯೇಷ್ಠ

ಇಂದಿನ ಕರಣ: ಭವ

ಇಂದಿನ ಪಕ್ಷ:ಪೂರ್ಣಿಮಾ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:41 to 19:22

ಯಮಘಂಡ:12:37 to 14:18

ಗುಳಿಗ ಕಾಲ:15:59 to 17:41

//