ಕಟಕ  ರಾಶಿ

Share: Facebook Twitter Linkedin

ವರ್ಷದಲ್ಲಿ ರಾಶಿಭವಿಷ್ಯಕಟಕ ರಾಶಿ)

Tuesday, March 28, 2023

ಕರ್ಕಾಟಕ ರಾಶಿಯವರಿಗೆ 2023-ನೇ ವರ್ಷವು ಅನುಕೂಲಕರ ಎನಿಸಲಿದೆ. ವರ್ಷದ ಆರಂಭದಿಂದಲೇ ಅದೃಷ್ಟವು ನಿಮ್ಮ ಜೊತೆಗಿರಲಿದೆ. ಹೀಗಾಗಿ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ದೀರ್ಘ ಕಾಲದಿಂದ ನೀವು ಹೊಂದಿದ್ದ ಇಚ್ಛೆಯು ಈ ವರ್ಷದಲ್ಲಿ ಈಡೇರಲಿದೆ. ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಅವಕಾಶಗಳು ದೊರೆಯಬಹುದು. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯಲಿದೆ. ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ನಂಬಿಕೆ ಮತ್ತು ಭಕ್ತಿಯು ಹೆಚ್ಚಲಿದೆ. ಅಲ್ಲದೆ ಇದರಲ್ಲಿ ನೀವು ಸಕ್ರಿಯರಾಗಿ ಪಾಲ್ಗೊಳ್ಳಲಿದ್ದೀರಿ. ಇದರ ಜೊತೆಗೆ ನಿಮಗೆ ಗೌರವವೂ ದೊರೆಯಲಿದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಯಾವುದಾದರೂ ಸಂಸ್ಥೆಯನ್ನು ನೀವು ಸೇರಬಹುದು. ಇದರಿಂದಾಗಿ ಏನಾದರೂ ಹೊಸ ಕೆಲಸವನ್ನು ಮಾಡಲು ನಿಮಗೆ ಅವಕಾಶ ದೊರೆಯಬಹುದು ಹಾಗೂ ನಿಮ್ಮ ಸಾಮಾಜಿಕ ಸ್ಥಾನಮಾನದಲ್ಲಿ ವೃದ್ಧಿ ಉಂಟಾಗಲಿದೆ. ಈ ವರ್ಷ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಈಗಾಗಲೇ ಅರ್ಜಿ ಸಲ್ಲಿಸದೆ ಇದ್ದಲ್ಲಿ ಈ ಕೆಲಸವನ್ನು ಬೇಗನೇ ಮಾಡಿ. ಇದರಿಂದ ನಿಮಗೆ ಯಶಸ್ಸು ದೊರೆಯಲಿದೆ. ಸದ್ಯಕ್ಕೆ ನಿಮ್ಮ ಆದಾಯವು ಚೆನ್ನಾಗಿರಲಿದೆ ಹಾಗೂ ನಿಮ್ಮ ಆತ್ಮವಿಶ್ವಾಸವು ಸದೃಢವಾಗಿರಲಿದೆ. ಇದರಿಂದಾಗಿ ನೀವು ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬಹುದು ಹಾಗೂ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಕೌಟುಂಬಿಕ ಬದುಕಿನಲ್ಲಿ ಅತೃಪ್ತಿ ನೆಲೆಸಲಿದೆ. ಕುಟುಂಬದ ನಡುವೆಯೇ ಇದ್ದರೂ ನೀವು ಪ್ರತ್ಯೇಕಗೊಂಡಂತೆ ಅಥವಾ ಸಂಬಂಧ ಕಡಿದುಕೊಂಡಂತೆ ನಿಮಗೆ ಭಾಸವಾಗಬಹುದು. ಕುಟುಂಬದ ವಿಚಾರದಲ್ಲಿ ನಿಮ್ಮ ಮನಸ್ಸು ಹೆಚ್ಚು ಓಡದೇ ಇರಬಹುದು. ಅಲ್ಲದೆ ಕೇವಲ ಔಪಚಾರಿಕತೆಯನ್ನು ಮುಗಿಸುವುದಕ್ಕಾಗಿ ನೀವು ಮನೆಗೆ ಭೇಟಿ ನೀಡಬಹುದು. ನಿಮ್ಮ ಈ ವರ್ತನೆಯು ಮನೆಯಲ್ಲಿರುವ ಜನರಿಗೆ ಕೊಂಚ ವಕ್ರವಾಗಿ ಕಾಣಿಸಿಕೊಳ್ಳಬಹುದು ಹಾಗೂ ಈ ಕುರಿತು ನಿಮಗೆ ಅವರು ದೂರು ನೀಡಬಹುದು. ಸರ್ಕಾರಿ ಕ್ಷೇತ್ರದೊಂದಿಗೆ ನೀವು ಉತ್ತಮ ಸಂಪರ್ಕವನ್ನು ಸಾಧಿಸಬಹುದು. ಕೆಲ ಗೆಳೆಯರ ನೆರವು ನಿಮಗೆ ದೊರೆಯಲಿದೆ. ಇದು ನಿಮ್ಮ ಕೆಲಸದಲ್ಲಿ ಮುಂದೆ ಸಾಗಲು ನಿಮಗೆ ನೆರವಾಗಲಿದೆ. ಕುಟುಂಬದ ವಿಚಾರದಲ್ಲಿಯೂ ಅವರಿಗೆ ನಿಮಗೆ ನೆರವು ನೀಡಲಿದ್ದಾರೆ.

ರಾಶಿಯಾಧಾರಿತ ವ್ಯಕ್ತಿತ್ವ

ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯಲ್ಲಿ ಜನಿಸಿದವರನ್ನು ಅವರ ಕುಟುಂಬಸ್ಥರು ತುಂಬಾನೇ ಇಷ್ಟಪಡುತ್ತಾರೆ. ಇವರು ತುಂಬಾ ಭಾವುಕರು, ಸೂಕ್ಷ್ಮ ಮನಸ್ಸುವುಳ್ಳವರು ಆಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಪರಿಸ್ಥಿರಿ ಕಠೋರವಾಗಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:36

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭಭಾಗ್ಯ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:49 to 17:21

ಯಮಘಂಡ:11:12 to 12:44

ಗುಳಿಗ ಕಾಲ:12:44 to 14:17

//