ಕುಂಭ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಕುಂಭ ರಾಶಿ)

Sunday, March 26, 2023

ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವೆ ಸಂತುಲನ ಕಾಪಾಡಲು ನೀವು ಯತ್ನಿಸುವ ಕಾರಣ ಆರಂಭದಲ್ಲೇ ನಿಮ್ಮ ಸಂಬಂಧದ ಕುರಿತು ನೀವು ಹೆಚ್ಚು ತಲೆ ಕೆಡಿಸಿಕೊಳ್ಳಲಿದ್ದೀರಿ. ರಾತ್ರಿಯ ಊಟ ಅಥವಾ ಒಂದಷ್ಟು ಸಂಗೀತದೊಂದಿಗೆ ಗೆಳೆಯರೊಂದಿಗೆ ಬೆರೆಯಲು ಇದು ಸಕಾಲ ಎಂದು ಶುಕ್ರನು ಹೇಳುತ್ತಾನೆ. ನೀವು ಅವಿವಾಹಿತರಾಗಿದ್ದರೆ, ಶುಕ್ರ ಮತ್ತು ಮಂಗಳನ ಒಟ್ಟು ಪ್ರಭಾವದ ಕಾರಣ ನೀವು ಏನಾದರೂ ಹೊಸತನ್ನು ಪ್ರಾರಂಭಿಸಲಿದ್ದೀರಿ ಹಾಗೂ ಈ ತಿಂಗಳ ದ್ವಿತೀಯಾರ್ಧದಲ್ಲಿ ಸಾಕಷ್ಟು ಮನರಂಜನೆಯನ್ನು ಪಡೆಯಲಿದ್ದೀರಿ. ಈ ತಿಂಗಳಿನಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಮತ್ತು ದೀರ್ಘಕಾಲೀನ ಉದ್ದೇಶಗಳಿಗೆ ಪೂರಕವಾಗಿ ವಾಸ್ತವಿಕವಾಗಿ ಕೆಲಸ ಮಾಡಿದರೆ ಪ್ರಯೋಜನಕಾರಿಯಾದೀತು. ದಾರಿಯು ಒಂದಷ್ಟು ಸವಾಲಿನಿಂದ ಕೂಡಿದ್ದರೂ, ಗುರುವು ನಿಮ್ಮ ಭವಿಷ್ಯದ ಪ್ರಗತಿ ಮತ್ತು ಯಶಸ್ಸಿಗೆ ಅಡಿಪಾಯ ಒದಗಿಸಲಿದ್ದಾನೆ. ಶನಿಯ ಪ್ರಭಾವದ ಕಾರಣ ನಿಮ್ಮ ಹಣಕಾಸಿನ ಯೋಜನೆಯ ಕುರಿತು ಒಂದಷ್ಟು ಕಳವಳ ನಿಮ್ಮನ್ನು ಕಾಡಬಹುದು. ಏಕೆಂದರೆ ಒಂದಷ್ಟು ಅನಿರೀಕ್ಷಿತ ಶಕ್ತಿಗಳು ನಿಮ್ಮನ್ನು ಕಾಡಬಹುದು. ಈ ತಿಂಗಳ ಆರಂಭದಲ್ಲಿ ನೀವು ಒಂದಷ್ಟು ಕಠಿಣ ಸನ್ನಿವೇಶಗಳಲ್ಲಿ ಸಿಲುಕಿ ಬೀಳಬಹುದು ಅಥವಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಶನಿಯು ಹೇಳುತ್ತಾನೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ನಿಮ್ಮ ಹಿಂದಿನ ಗಿರಾಕಿಗಳು ಮತ್ತು ದೀರ್ಘಕಾಲೀನ ಸಂಪರ್ಕಗಳೊಂದಿಗೆ ಸಮಯ ಕಳೆಯಿರಿ. ಸಂವಹನಕ್ಕೆ ಒತ್ತು ನೀಡಿರಿ. ಕೆಲವೊಂದು ಪ್ರಮುಖ ಚರ್ಚೆಗಳು ಮತ್ತು ಪ್ರಸ್ತುತಿಗಳಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ ಎಂದು ಬುಧನು ಹೇಳುತ್ತಾನೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ತಿಂಗಳಿನಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಶನಿಯ ಪ್ರಕಾರ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಆರಂಭದಲ್ಲಿ ನಿರೀಕ್ಷಿತ ಪ್ರಯೋಜನವನ್ನು ಪಡೆಯದೆ ಇರಬಹುದು. ನೀವು ಎಷ್ಟು ಬೇಗ ಅಧ್ಯಯನಕ್ಕೆ ಮರಳುತ್ತೀರೋ, ಅಷ್ಟೇ ಉತ್ತಮ ಫಲಿತಾಂಶವನ್ನು ನೀವು ಪಡೆಯಲಿದ್ದೀರಿ. ಒಂದಷ್ಟು ಸವಾಲಿನ ಸನ್ನಿವೇಶದ ನಡುವೆಯೂ ನಿಮ್ಮ ಶಿಕ್ಷಣವನ್ನು ನಿಭಾಯಿಸಲು ನಿಮ್ಮ ಪ್ರತಿಭೆಯು ಸಹಾಯ ಮಾಡಲಿದೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ತಿಂಗಳ ಮೊದಲ ವಾರವು ಸಾಕಷ್ಟು ಪ್ರಯೋಜನಕಾರಿ ಎನಿಸಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವು ಶಮನಗೊಳ್ಳಲಿದ್ದು ನವ ಚೇತನವನ್ನು ಗಳಿಸಲಿದ್ದೀರಿ ಎಂದು ಗುರುವು ಹೇಳುತ್ತಾನೆ. ಈ ತಿಂಗಳ ಉತ್ತರಾರ್ಧದಲ್ಲಿ ನಿಮ್ಮ ಫಿಟ್ನೆಸ್‌ ಗೆ ಸಂಬಂಧಿಸಿದಂತೆ ಪ್ರಗತಿಯನ್ನು ಸಾಧಿಸಲಿದ್ದೀರಿ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:38

ಇಂದಿನ ತಿಥಿ:ಶುಕ್ಲ ಪಕ್ಷ ಪಂಚಮಿ

ಇಂದಿನ ನಕ್ಷತ್ರ:ಕೃತಿಕಾ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಪ್ರಿತಿ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:20 to 18:52

ಯಮಘಂಡ:12:45 to 14:17

ಗುಳಿಗ ಕಾಲ:15:49 to 17:20

//