ಕುಂಭ  ರಾಶಿ

Share: Facebook Twitter Linkedin

ವರ್ಷದಲ್ಲಿ ರಾಶಿಭವಿಷ್ಯಕುಂಭ ರಾಶಿ)

Tuesday, March 28, 2023

ಕುಂಭ ರಾಶಿಯವರಿಗೆ 2023- ನೇ ವರ್ಷದ ಕೆಲವೊಂದು ಶುಭ ಸುದ್ದಿಗಳನ್ನು ತರಲಿದೆ. ಆದರೆ ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ಗರಿಷ್ಠ ಕಾಳಜಿ ವಹಿಸಿ. ನಿಮ್ಮ ಆರೋಗ್ಯಕ್ಕೆ ನೀವು ಗಮನ ನೀಡದೆ ಇದ್ದರೆ ನೀವು ಕಾಯಿಲೆಗೆ ತುತ್ತಾಗಬಹುದು ಹಾಗೂ ಆರೋಗ್ಯವು ಹದಗೆಡಬಹುದು. ಇದರಿಂದಾಗಿ ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾದೀತು. ಸದ್ಯಕ್ಕೆ ನಿಮ್ಮ ಆದಾಯದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ನೀವು ಉದ್ಯೋಗದಲ್ಲಿದ್ದರೂ, ನಿಮಗೆ ಭಡ್ತಿ ದೊರೆಯಬಹುದು ಹಾಗೂ ನಿಮ್ಮ ಸಂಬಳದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ, ನಿಮ್ಮ ಲಾಭದಲ್ಲಿ ಹೆಚ್ಚಳ ಉಂಟಾಗಲಿದೆ. ಸರ್ಕಾರಿ ಕ್ಷೇತ್ರದ ಒಳ್ಳೆಯ ಲಾಭದಾಯಕ ಯೋಜನೆಯ ಅನುಕೂಲತೆಯನ್ನು ಪಡೆಯುವ ಮೂಲಕ ನೀವು ಸಾಕಷ್ಟು ಹಣವನ್ನು ಗಳಿಸಬಹುದು. ವರ್ಷದ ಅರಂಭದಲ್ಲಿ, ಕುಟುಂಬದಲ್ಲಿ ವೈಮನಸ್ಸು ಕಾಣಿಸಿಕೊಳ್ಳಲಿದೆ. ಆದರೆ ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ನಡುವಿನ ಅವಧಿಯು ಚೆನ್ನಾಗಿರಲಿದೆ. ಕುಟುಂಬದ ಹಿರಿಯರ ಬೆಂಬಲ ದೊರೆಯಲಿದೆ. ಇದರಿಂದಾಗಿ ಕೆಲಸದಲ್ಲಿ ನಿಮಗೆ ಉತ್ತಮ ಯಶಸ್ಸು ಲಭಿಸಲಿದೆ. ವರ್ಷದ ಆರಂಭದಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ಒಂದಷ್ಟು ವಾಗ್ವಾದಗಳು ಉಂಟಾಗಬಹುದು. ಆದರೆ ಅವರು ಎಲ್ಲಾ ರೀತಿಯಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ಹೀಗಾಗಿ ಅವರ ಕುರಿತು ನೀವು ಇನ್ನಷ್ಟು ಪ್ರೀತಿಯನ್ನು ತೋರಲಿದ್ದೀರಿ ಹಾಗೂ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದೀರಿ. ಗೆಳೆಯರ ಜೊತೆ ಎಚ್ಚರಿಕೆಯಿಂದ ವ್ಯವಹರಿಸಿ. ಏಕೆಂದರೆ ಈ ವರ್ಷದಲ್ಲಿ ನಿಮ್ಮ ಗೆಳೆಯರು ನಿಮಗೆ ಮೋಸ ಮಾಡಬಹುದು. ನೀವು ವಿದೇಶಕ್ಕೆ ಹೋಗಲು ಇಚ್ಛಿಸುವುದಾದರೆ, ನಿಮ್ಮ ಆಸೆಯು ಈ ವರ್ಷದಲ್ಲಿ ಈಡೇರಲಿದ್ದು ನೀವು ವಿದೇಶಕ್ಕೆ ಪ್ರಯಾಣಿಸಲಿದ್ದೀರಿ. ಜುಲೈ ಮತ್ತು ಸೆಪ್ಟೆಂಬರ್‌ ನಡುವೆ, ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಷಯಗಳು ನಿಮ್ಮ ಗಮನವನ್ನು ಸೆಳೆಯಬಹುದು ಹಾಗೂ ಯಾವುದಾದರೂ ದೊಡ್ಡ ಆಸ್ತಿ ನಿಮ್ಮ ಕೈ ಸೇರಬಹುದು. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಆದರೆ ಇತರರ ವಿಚಾರದಲ್ಲಿ ಕೈ ಹಾಕದೆ ಇದ್ದರೆ ಒಳ್ಳೆಯದು. ಈ ವರ್ಷದಲ್ಲಿ ನೀವು ಸಾಕಷ್ಟು ಜನಪ್ರಿಯತೆ ಗಳಿಸಲಿದ್ದೀರಿ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:36

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭಭಾಗ್ಯ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:49 to 17:21

ಯಮಘಂಡ:11:12 to 12:44

ಗುಳಿಗ ಕಾಲ:12:44 to 14:17

//