ಮೇಷ  ರಾಶಿ

Share: Facebook Twitter Linkedin

ವಾರದಲ್ಲಿ ರಾಶಿಭವಿಷ್ಯ(ಮೇಷ ರಾಶಿ)

Thursday, December 8, 2022

ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಾರದ ಕೊನೆಗೆ ನೀವು ನಿಮ್ಮ ಕುಟುಂಬದ ಸದಸ್ಯರ ಜೊತೆ ವಾಕ್‌ ಗೆ ಹೋಗಲಿದ್ದೀರಿ. ವೈವಾಹಿಕ ಬದುಕು ಅನುಕೂಲಕರವಾಗಿರುತ್ತದೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಬದುಕನ್ನು ಆನಂದಿಸಲು ಅವಕಾಶ ಪಡೆಯಲಿದ್ದಾರೆ. ಆದರೂ, ವಾರದ ಆರಂಭಿಕ ದಿನಗಳಲ್ಲಿ ಏನಾದರೂ ವಿಷಯದ ಕುರಿತು ನಿಮಗೆ ಗೊಂದಲ ಉಂಟಾಗಬಹುದು. ಗೊಂದಲವನ್ನು ದೂರ ಮಾಡುವುದಕ್ಕಾಗಿ ಹಿರಿಯ ವ್ಯಕ್ತಿಯ ಸಲಹೆಯನ್ನು ತೆಗೆದುಕೊಳ್ಳುವುದು ನಿಮಗೆ ಉಪಯುಕ್ತ. ಯಾವುದೇ ಅಧಿಕೃತ ದಾಖಲೆಗೆ ಸಹಿ ಹಾಕುವ ಮೊದಲು ಅದನ್ನು ಚೆನ್ನಾಗಿ ಓದಿಕೊಳ್ಳಿ. ಇಲ್ಲದಿದ್ದರೆ ನೀವು ಸಮಸ್ಯೆಗೆ ಈಡಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ನೀವು ಒಪ್ಪಂದ ಆಧರಿತ ಕೆಲಸದಲ್ಲಿದ್ದರೆ ಅವರ ಒಪ್ಪಂದವು ನವೀಕರಣಗೊಳ್ಳಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಾರದ ಮಧ್ಯದಲ್ಲಿ ನೀವು ಆಸ್ತಿ ವ್ಯವಹಾರವನ್ನು ಮಾಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಪಾಲಿಗೆ, ಅಧ್ಯಯನದಲ್ಲಿ ಯಶಸ್ಸು ಗಳಿಸಲು ಇದು ಸಕಾಲ. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆ ಎದುರಾಗದು. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:08

ಇಂದಿನ ತಿಥಿ:ಪೂರ್ಣಿಮಾ

ಇಂದಿನ ನಕ್ಷತ್ರ:ರೋಹಿಣಿ

ಇಂದಿನ ಕರಣ: ಭವ

ಇಂದಿನ ಪಕ್ಷ:ಪೂರ್ಣಿಮಾ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:13:51 to 15:12

ಯಮಘಂಡ:07:08 to 08:28

ಗುಳಿಗ ಕಾಲ:09:49 to 11:10

//