ಮೇಷ  ರಾಶಿ

Share: Facebook Twitter Linkedin

ತಿಂಗಳಿನಲ್ಲಿ ರಾಶಿಭವಿಷ್ಯ(ಮೇಷ ರಾಶಿ)

Thursday, December 8, 2022

ಶುಕ್ರ ಮತ್ತು ಬುಧನ ಸ್ಥಾನ ಬದಲಾವಣೆಯು ನಿಮ್ಮ ಪಾಲಿಗೆ ಅನುಕೂಲಕರ ಎನಿಸಲಿದೆ. ಏಕಾಂಗಿಗಳಿಗೆ ಸಾಂಗತ್ಯದ ಯಶಸ್ವಿ ಪ್ರಸ್ತಾಪವು ದೊರೆಯುವ ಸಾಧ್ಯತೆ ಇದೆ. ಈ ತಿಂಗಳಿನಲ್ಲಿ ನಿಮ್ಮ ಪ್ರೇಮ ಮತ್ತು ವಿವಾಹದ ಸಂಬಂಧದಲ್ಲಿ ಹಠಾತ್‌ ಆಗಿ ಸ್ಥಾನಪಲ್ಲಟ ಉಂಟಾಗಲಿದ್ದು ಇದು ನಿಮ್ಮ ಪಾಲಿಗೆ ಸಂತಸವನ್ನುಂಟು ಮಾಡಲಿದೆ. ವಿವಾಹ ಮತ್ತು ಪ್ರೇಮ ಸಂಬಂಧವು ಈ ತಿಂಗಳಿನಲ್ಲಿ ಉತ್ತಮ ಅದೃಷ್ಟವನ್ನು ತರಲಿದೆ. ವೃತ್ತಿ ಜೀವನವು ಚೆನ್ನಾಗಿರಲಿದೆ. ಕಾಮಗಾರಿಯು ನಿಮ್ಮ ಕೈಯಲ್ಲೇ ಇರಲಿದೆ. ಈ ತಿಂಗಳಿನಲ್ಲಿ ದೊರೆಯುವ ಭಡ್ತಿಯಿಂದ ಯೋಜಿತ ಹಣಕಾಸು ಲಾಭ ನಿಮಗೆ ದೊರೆಯಲಿದೆ. ಅಲ್ಲದೆ ಗೆಳೆಯರು ನೀಡುವ ಸಲಹೆಗಳ ಕಾರಣ ಹಣಕಾಸಿನ ಹೂಡಿಕೆಯಲ್ಲಿ ಯಶಸ್ಸು ದೊರೆಯಲಿದೆ. ಇದು ನಿಮಗೆ ನಿರೀಕ್ಷಿತ ಲಾಭ ತಂದು ಕೊಡಲಿದೆ. ವೃತ್ತಿಯ ವಿಚಾರದಲ್ಲಿ ಹೇಳುವುದಾದರೆ, ಕೆಲಸದ ಭಾರ ಮತ್ತು ಒತ್ತಡದಿಂದ ನಿಮಗೆ ಒಂದಷ್ಟು ಮುಕ್ತಿ ದೊರೆಯಲಿದೆ. ಕುಟುಂಬದೊಳಗೆ ನಡೆಯುವ ಸಣ್ಣ ಸಮಾರಂಭವು ಕುಟುಂಬದ ಸದಸ್ಯರ ಜೊತೆಗೆ ಮೋಜು ಮತ್ತು ಅವರ ಸಾಂಗತ್ಯ ಅನುಭವಿಸಲು ಅವಕಾಶ ಒದಗಿಸಲಿದೆ. ಈ ತಿಂಗಳ ಖರ್ಚುವೆಚ್ಚಗಳಿಗಾಗಿ ನೀವು ಬಜೆಟ್‌ ರೂಪಿಸಬೇಕು. ಏಕೆಂದರೆ ಗ್ರಹಗಳ ಗತಿಯ ಪ್ರಕಾರ ನೀವು ಪ್ರಯಾಣ, ಶಾಪಿಂಗ್‌ ಮತ್ತು ಕಾರಿನ ನಿರ್ವಹಣೆಗಾಗಿ ಹಣ ಖರ್ಚು ಮಾಡಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ನಿರೀಕ್ಷಿಸಿದಷ್ಟು ಉಳಿತಾಯ ಉಂಟಾಗದು. ಈ ತಿಂಗಳು ನಿಮಗೆ ಕೆಲಸದ ಒತ್ತಡದಿಂದ ಮುಕ್ತಿಯನ್ನು ನೀಡಬಹುದು. ಅಲ್ಲದೆ ನಿಮ್ಮ ಕೆಲಸದಿಂದ ಹಣಕಾಸಿನ ನಿರೀಕ್ಷಿತ ಲಾಭ ಉಂಟಾಗಬಹುದು. ನೀವು ವಿವೇಚನೆಯಿಂದ ತೆಗೆದುಕೊಳ್ಳುವ ನಿರ್ಧಾರವು ಈ ತಿಂಗಳಿನಲ್ಲಿ ಯಶಸ್ವಿಯಾಗಿ ಲಾಭವನ್ನು ಗಳಿಸಲು ನಿಮಗೆ ಗಣನೀಯವಾಗಿ ಸಹಾಯ ಮಾಡಲಿದೆ. ಒಡಹುಟ್ಟಿದವರೊಂದಿಗೆ ಪ್ರಯಾಣಿಸುವುದರಿಂದ ಹಾಗೂ ಅವರೊಂದಿಗೆ ಸಣ್ಣ ಮಟ್ಟಿಗೆ ಸಂಭ್ರಮಾಚರಣೆ ಮಾಡುವುದರಿಂದ ಅನಿರೀಕ್ಷಿತ ಖರ್ಚುವೆಚ್ಚಗಳು ಉಂಟಾಗಬಹುದು. ಒಟ್ಟಾರೆಯಾಗಿ ಈ ತಿಂಗಳಿನಲ್ಲಿ ಸಾಮಾನ್ಯ ಮಟ್ಟದ ಯೋಗಕ್ಷೇಮ ದೊರೆಯಲಿದೆ. ಆದರೂ, ದುರ್ಬಲ ರೋಗನಿರೋಧಕ ಶಕ್ತಿಯ ಕಾರಣ ಅನಿರೀಕ್ಷಿತವಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜ್ವರ ಮತ್ತು ಶೀತ ಕಾರಣ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಉತ್ತಮ ಅರೋಗ್ಯ ಕಾಪಾಡಬೇಕಾದರೆ ತಂಪು ಪಾನೀಯಗಳನ್ನು ಕುಡಿಯಬೇಡಿ ಹಾಗೂ ನಿರಂತರವಾಗಿ ಸಂತುಲಿತ ಆಹಾರ ಕ್ರಮವನ್ನು ಪಾಲಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:08

ಇಂದಿನ ತಿಥಿ:ಪೂರ್ಣಿಮಾ

ಇಂದಿನ ನಕ್ಷತ್ರ:ರೋಹಿಣಿ

ಇಂದಿನ ಕರಣ: ಭವ

ಇಂದಿನ ಪಕ್ಷ:ಪೂರ್ಣಿಮಾ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:13:51 to 15:12

ಯಮಘಂಡ:07:08 to 08:28

ಗುಳಿಗ ಕಾಲ:09:49 to 11:10

//