ಮೇಷ  ರಾಶಿ

Share: Facebook Twitter Linkedin

ವರ್ಷದಲ್ಲಿ ರಾಶಿಭವಿಷ್ಯಮೇಷ ರಾಶಿ)

Tuesday, March 28, 2023

ವರ್ಷ 2023-ರ ಆರಂಭದಲ್ಲಿ ದೃಢ ಮತ್ತು ಬಲಶಾಲಿ ಮೇಷ ರಾಶಿಯವರು ಸಾಕಷ್ಟು ಕಾರ್ಯ ಪ್ರವೃತ್ತರಾಗಲಿದ್ದಾರೆ. ವರ್ಷದ ಆರಂಭದಲ್ಲಿ, ಮಾತಿನಲ್ಲಿ ಕಹಿತನ ತೋರಿಸದೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಕೆಲವೊಂದು ಒಳ್ಳೆಯ ಅವಕಾಶಗಳು ಕೈ ತಪ್ಪಿ ಹೋಗಬಹುದು. ನಿರಂಕುಶವಾದಿ ಎನ್ನುವ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುವ ಬದಲಿಗೆ, ಯಾವುದು ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ಗುರುತಿಸಿ ಮುಂದೆ ಸಾಗುವುದು ಒಳ್ಳೆಯದು. ಆಗ ಮಾತ್ರವೇ ನೀವು ಈ ವರ್ಷದಲ್ಲಿ ಮುಂದೆ ಸಾಗಿ ಲಾಭ ಗಳಿಸಲಿದ್ದೀರಿ. ಧಾರ್ಮಿಕವಾಗಿ ನೀವು ಖಂಡಿತವಾಗಿಯೂ ಮುಂದೆ ಸಾಗಲಿದ್ದೀರಿ. ಧಾರ್ಮಿಕ ವಿಚಾರಗಳು ಮತ್ತು ಅಧ್ಯಾತ್ಮಿಕ ಚಟುವಟಿಕೆಗಳನ್ನು ನೀವು ಸಾಕಷ್ಟು ಅನಂದಿಸಲಿದ್ದೀರಿ. ನೀವು ದೇವಸ್ಥಾನಕ್ಕೆ ದಾನ ನೀಡಬಹುದು ಅಥವಾ ಸರ್ಕಾರೇತರ ಸಂಸ್ಥೆಯೊಂದನ್ನು ಸೇರಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಬುಧ ನಿಮ್ಮ ಒಂಬತ್ತನೇ ಮನೆಯಲ್ಲಿ ಇರಲಿದ್ದಾರೆ. ಇದರಿಂದಾಗಿ ನಿಮ್ಮ ತಂದೆಯ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ ಹಾಗೂ ಅವರಿಂದ ನೀವು ದೊಡ್ಡ ಮಟ್ಟದ ಲಾಭವನ್ನು ಗಳಿಸಲಿದ್ದೀರಿ. ಮಾರ್ಚ್‌ ಮತ್ತು ಮೇ ತಿಂಗಳುಗಳ ನಡುವಿನ ಸಮಯವು ಚೆನ್ನಾಗಿರಲಿದೆ. ಮೇ ತಿಂಗಳಿನಿಂದ ಜುಲೈವರೆಗಿನ ಸಮಯವು ಏರುಪೇರಿನಿಂದ ಕೂಡಿರಲಿದೆ. ಈ ಸಂದರ್ಭದಲ್ಲಿ ಕೌಟುಂಬಿಕ ಬದುಕಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ತಾಯಿಯ ಆರೋಗ್ಯ ಕೆಡಬಹುದು. ಆದರೂ ಈ ಸಂದರ್ಭದಲ್ಲಿ ನೀವು ದೊಡ್ಡದಾದ ಆಸ್ತಿಯನ್ನು ಖರೀದಿಸಬಹುದು ಹಾಗೂ ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದಂತೆ ಒಳ್ಳೆಯ ಯಶಸ್ಸು ದೊರೆಯಬಹುದು. ಆಗಸ್ಟ್‌ ಮತ್ತು ಅಕ್ಟೋಬರ್‌ ನಡುವೆ ನಿಮ್ಮ ರಾಶಿಯ ಅಧಿಪತಿಯು ಆರನೇ ಮನೆಯಲ್ಲಿರಲಿದ್ದು, ಈ ಕಾರಣಕ್ಕಾಗಿ ಕಾನೂನಿನ ವಿಚಾರಗಳಲ್ಲಿ ನೀವು ಸಂಪೂರ್ಣ ಯಶಸ್ಸನ್ನು ಗಳಿಸಲಿದ್ದೀರಿ. ಅಲ್ಲದೆ ನ್ಯಾಯಾಲಯದ ವಿಚಾರದ ಫಲಿತಾಂಶವು ನಿಮ್ಮ ಪರವಾಗಿ ಇರಲಿದೆ. ಈ ಸಂದರ್ಭದಲ್ಲಿ ನಿಮ್ಮ ಎದುರಾಳಿಗಳನ್ನು ನೀವು ಸದೆಬಡಿಯಲಿದ್ದೀರಿ. ಈ ಸಮಯವು ನಿಮ್ಮನ್ನು ಬಲಪಡಿಸಲಿದೆ. ನವೆಂಬರ್‌ ಮತ್ತು ಡಿಸೆಂಬರ್‌ ನಡುವೆ ಒಂದಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮ ಕೆಲಸದಲ್ಲಿ ಏರುಪೇರು ಉಂಟಾಗಬಹುದು. ನಿಮಗೆ ಯಾವುದಾದರೂ ಪುರಸ್ಕಾರ ದೊರೆಯುವ ಸಾಧ್ಯತೆ ಇದೆ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ವರ್ಷದ ಆರಂಭಿಕ ಸಮಯವು ಅನುಕೂಲಕರ.

ರಾಶಿಯಾಧಾರಿತ ವ್ಯಕ್ತಿತ್ವ

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:36

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಭಭಾಗ್ಯ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:49 to 17:21

ಯಮಘಂಡ:11:12 to 12:44

ಗುಳಿಗ ಕಾಲ:12:44 to 14:17

//