ಮಗಳು ಒಪ್ಪಿದರೆ ರಾಜಕೀಯ ರಣರಂಗಕ್ಕೆ ಕಾಲಿಡಲು ಸೈ ಎಂದ ರಾಧಿಕಾ ಕುಮಾರಸ್ವಾಮಿ..!

ಬರೋಬ್ಬರಿ ಮೂರು ವರ್ಷಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟಿ ರಾಧಿಕಾ ಕುಮಾರಸ್ವಾಮಿ ರಾಜಕೀಯ ಪ್ರವೇಶದ ಬಗ್ಗೆ ಈಗ ಬಾಯಿಬಿಟ್ಟಿದ್ದಾರೆ. ಹೌದು ಮಗಳು ಶಮಿಕಾ ಇಷ್ಟಪಟ್ಟರೆ ಅವಳನ್ನು ರಾಜಕೀಯಕ್ಕೆ ತರುವುದಾಗಿ ರಾಧಿಕಾ ಹೇಳಿದ್ದಾರೆ. ಸದ್ಯ ಮಗಳಿಗೆ ನೃತ್ಯದಲ್ಲಿ ಆಸಕ್ತಿ ಇದೆ. ಆದರೆ ಮುಂದೆ ಬೆಳೆದ ನಂತರ ಅವಳು ಸಿನಿಮಾ ರಂಗಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದರೆ, ನಾನೇ ಅವಳಿಗಾಗಿ ಸಿನಿಮಾವನ್ನು ನಿರ್ಮಿಸುತ್ತೇನೆ. ಒಂದು ವೇಳೆ ಅವಳು ರಾಜಕೀಯದಲ್ಲಿ ಆಸಕ್ತಿ ತೋರಿದರೆ ನಾನು ಅದಕ್ಕೂ ಸಿದ್ಧ ಎಂದಿದ್ದಾರೆ. ಆದರೆ ಶಮಿಕಾ ಇನ್ನೂ ಬಾಲ್ಯದಲ್ಲಿರುವ ಮೊಳಕೆ. ಬೆಳೆದ ನಂತರ ಅವಳ ನಿರ್ಧಾರವೇ ಪ್ರಮುಖವಾಗಲಿದೆ.

webtech_news18 , Advertorial

Your browser doesn't support HTML5 video.

Trending Now