ವಿಶ್ವ ವಿಸ್ಮಯ: ಮಾನವನ ಮೂಳೆಗಳಿಂದ ನಿರ್ಮಿಸಿದ ಚರ್ಚ್!

webtech_news18 , Advertorial
ಮಂದಿರ-ಮಸೀದಿಗಳು ಪವಿತ್ರ ಸ್ಥಳಗಳೆಂದು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ದೇವಸ್ಥಾನ, ಮಸೀದಿ, ಚರ್ಚ್​ ಮತ್ತು ಆರಾಧನಾ ಕಟ್ಟಡಗಳನ್ನು ವಿಭಿನ್ನ ಶೈಲಿ, ವಿನ್ಯಾಸದಿಂದ ನಿರ್ಮಿಸಿರುತ್ತಾರೆ. ಆದರೆ ಮಾನವನ ಅಸ್ಥಿ ಪಂಜರಗಳಿಂದಲೇ ನಿರ್ಮಿಸಿದ ಚರ್ಚ್​ನ ಬಗ್ಗೆ ನಿಮಗೆ ಗೊತ್ತಿದೆಯೇ?
ಹೌದು, ಇಂತಹ ಹಲವಾರು ಚರ್ಚ್​ಗಳು ವಿಶ್ವದಾದ್ಯಂತ ಇದೆ. ಇವುಗಳನ್ನು ಮಾನವನ ಮೂಳೆಗಳನ್ನು ಮತ್ತು ತಲೆ ಬುರುಡೆಗಳನ್ನು ಬಳಸಿ ನಿರ್ಮಿಸಲಾಗಿದೆ. ಇಲ್ಲಿ ಮಾನವನ ಅವಶೇಷಗಳಿಂದಲೇ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ.


ಈ ಚರ್ಚ್​ನ ಭಾಗದಲ್ಲಿ ಶವವನ್ನು ಹೂಳಲಾಗುತ್ತದೆ. ಕೆಲ ವರ್ಷಗಳ ಬಳಿಕ ಸಮಾಧಿಯನ್ನು ಅಗೆದು ಮೂಳೆಗಳನ್ನು ಚರ್ಚ್​ನಲ್ಲಿ ಸಂರಕ್ಷಿಸಲಾಗುತ್ತದೆಯಂತೆ.
ಜೆಕ್ ರಿಪಬ್ಲಿಕ್​ ದೇಶದಲ್ಲಿಇಂತಹದೊಂದು ಚರ್ಚ್ ಇದ್ದು, ಇಲ್ಲಿ ಸುಮಾರು 40 ಸಾವಿರ ಜನರ ಮೂಳೆಗಳನ್ನು ಇರಿಸಲಾಗಿದೆ. ಇಲ್ಲಿರುವ ಮೂಳೆಗಳನ್ನು ಕಲಾತ್ಮಕವಾಗಿ ಅಲಂಕಾರಕ್ಕೆ ಬಳಸಲಾಗಿದೆ.
13ನೇ ಶತಮಾನದಲ್ಲಿ ನಡೆದ ಘಟನೆಯಿಂದ ಇಂತಹದೊಂದು ಚರ್ಚ್ ನಿರ್ಮಿಸಲು ಮುನ್ನುಡಿಯಾಯಿತು.ಈ ಊರಿನ ಸಂತ ಸೇಂಟ್​ ಹೆನ್ರಿ ಅವರನ್ನು ಕಿಶ್ಚಿಯನ್ನರ ಪವಿತ್ರ ಭೂಮಿ ಪ್ಯಾಲೆಸ್ತೀನ್​ಗೆ ಕಳುಹಿಸಲಾಗಿತ್ತು. 1278 ರಲ್ಲಿ ಪ್ಯಾಲೆಸ್ತೀನ್​ನಿಂದ ಮರಳಿದ ಹೆನ್ರಿ ಅಲ್ಲಿನ ಮಣ್ಣನ್ನು ಒಂದು ಪಿಂಗಾಣಿಯಲ್ಲಿ ತಂದಿದ್ದರು.
ಆ  ಪವಿತ್ರ ಮಣ್ಣನ್ನು ಇಡಲಾದ ಸ್ಥಳವನ್ನು ಜನರು ಪವಿತ್ರ ಸ್ಮಶಾನ ಎಂದು ಪರಿಗಣಿಸಿ, ಅಲ್ಲಿ ಸಮಾಧಿ ಮಾಡುವುದು ಪುಣ್ಯ ಎಂದು ನಂಬಿದ್ದರು. 14 ಮತ್ತು 15ನೇ ಶತಮಾನದಲ್ಲಿ ಪ್ಲೇಗ್ ಮತ್ತು ಯುದ್ಧಗಳ ಕಾರಣದಿಂದ ಜೆಕ್ ರಿಪಬ್ಲಿಕ್​ನಲ್ಲಿ ಅನೇಕರು ಮೃತಪಟ್ಟಿದ್ದರು. ಆದರೆ ಎಲ್ಲರನ್ನು ಹೂಳಲು ಪವಿತ್ರ ಸ್ಮಶಾನದಲ್ಲಿ ಸ್ಥಳವಿರಲಿಲ್ಲ.
ಇದಕ್ಕೆ ಉಪಾಯ ಮಾಡಿದ ಜನರು ಹೂಳಿದ ಶವಗಳ ಅಸ್ಥಿಗಳನ್ನು ಹೊರ ತೆಗೆಯಲು ಪ್ರಾರಂಭಿಸಿದರು. ನಂತರ ಈ ಮೂಳೆಗಳನ್ನು ಸಂತ ಮತ್ತು ಪಾದ್ರಿಗಳಿಗೆ ನೀಡಲಾಯಿತು. 1870 ರಲ್ಲಿ ಸಂಗ್ರಹಿಸಿಡಲಾಗಿದ್ದ 40 ಸಾವಿರ ಜನರ ಮೂಳೆಗಳಿಂದಲೇ ಚರ್ಚ್​ವೊಂದನ್ನು ನಿರ್ಮಿಸಲಾಯಿತು.
ಒಳಹೊಕ್ಕರೆ ಭಯಭೀತಿ ಹುಟ್ಟಿಸುವ ಜೆಕ್ ರಿಪಬ್ಲಿಕ್​ನ ಈ ಚರ್ಚ್​ ಇಂದು ವಿಶ್ವ ಪ್ರಸಿದ್ಧಿ ಪಡೆದಿದೆ. ಮೂಳೆಗಳ ಚರ್ಚ್ ಎಂದೇ ಖ್ಯಾತಿ ಪಡೆದಿರುವ ಈ ಇಗರ್ಜಿಯನ್ನು ವೀಕ್ಷಿಸಲು ಲಕ್ಷಾಂತರ ಪ್ರವಾಸಿಗಳು ಭೇಟಿ ಕೊಡುತ್ತಾರೆ.

Trending Now