ಮಂಗಳ ಗ್ರಹದಲ್ಲಿ 'ಕ್ಯೂರಿಯಾಸಿಟಿ ರೋವರ್' ಕ್ಲಿಕ್ಕಿಸಿದ ಸೆಲ್ಫಿ ಫೋಟೋಗಳು

webtech_news18 , Advertorial
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದೆ. ಕೆಂಪು ಗ್ರಹದ ಮೇಲೆ ಕ್ಲಿಕ್ಕಿಸಲಾಗಿರುವ ಈ ಫೋಟೋಗಳಲ್ಲಿ ಕಂದು ಬಣ್ಣದ ಪ್ರದೇಶಗಳು ಕಾಣಿಸಿದೆ. ಕಳೆದ ಕೆಲವು ವಾರಗಳಿಂದ ಧೂಳಿನ ಚಂಡಮಾರುತ ಮಂಗಳ ಗ್ರಹದಲ್ಲಿ ಕಂಡು ಬಂದಿರುವುದಾಗಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನಾಸಾ ಮಂಗಳದ ಇತ್ತೀಚಿನ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಮಾಸ್ಟ್ ಕ್ಯಾಮೆರಾ ಮೂಲಕ ಈ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಈ ಗ್ರಹದಲ್ಲಿ ಕಲ್ಲು ಬಂಡೆಗಳ ಪ್ರದೇಶಗಳಿರುವುದು ಈ ಫೋಟೋದಲ್ಲಿ ಗೋಚರಿಸಿದೆ.


2011ರ ನವೆಂಬರ್​ನಲ್ಲಿ ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ  ಸಂಸ್ಥೆ ಕ್ಯೂರಿಯಾಸಿಟಿ ರೋವರ್​ಎಂಬ ಉಪಗ್ರಹ ಕಳುಹಿಸಿದ್ದರು. ಆದರೆ ಕಳೆದ ಕೆಲವು ತಿಂಗಳಿಂದ ಮಂಗಳ ಗ್ರಹದಲ್ಲಿ ಉಂಟಾದ ಚಂಡ ಮಾರುತದಿಂದ ಉಪಗ್ರಹದಲ್ಲಿ ಕೆಲ ದೋಷಗಳು ಕಾಣಿಸಿತ್ತು.
ಕೆಂಪು ಗ್ರಹದಲ್ಲಿ ಸ್ವಾತಂತ್ರ ಯಾನದಲ್ಲಿರುವ ಈ ಉಪಗ್ರಹ ಆಗಸ್ಟ್ 9 ರಂದು ಹೊಸ ಮಾದರಿಯ ಕಲ್ಲನ್ನು ಸಂಗ್ರಹಿಸಿದೆ. ಅಲ್ಲದೆ ಗ್ರಹದ ಮೇಲ್ಮೈ ಅಧ್ಯಯನದಲ್ಲಿ ಈ ರೋವರ್​ ನಿರತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ಗ್ರಹದ ಮೇಲ್ಮೈ ಮೇಲಿನ ಕಲ್ಲುಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವ ಪ್ರಯತ್ನಗಳು ವಿಫಲವಾಗಿತ್ತು.
ಇದರ ನಂತರ ರೋವರ್​ನಲ್ಲಿ ಹೊಸ ರೀತಿಯ ಡ್ರಿಲ್​ನ್ನು ಅಳವಡಿಸಿದ  ಮಂಗಳ ಗ್ರಹಕ್ಕೆ ಕಳುಹಿಸಲಾಗಿತ್ತು.
ಇದೇ ಸೆಪ್ಟಂಬರ್​ನಲ್ಲಿ ಎರಡು ರೀತಿಯ ಬಂಡೆಗಳ ಮಾದರಿಯನ್ನು ಕ್ಯೂರಿಯಾಸಿಟಿ ರೋವರ್ ಸಂಗ್ರಹಿಸಿದೆ. ಹಾಗೆಯೇ ಕೆಂಪು ಗ್ರಹದ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಸಲ್ಫೇಟ್ ಖನಿಜಗಳಿರುವ ಪ್ರದೇಶವನ್ನು ಪತ್ತೆ ಹಚ್ಚಿದ್ದಾರೆ.

Trending Now