ಈ ಪ್ರಖ್ಯಾತ ಕಂಪೆನಿಯಲ್ಲಿ ಬಾಸ್​ಗಿಂತ ನೌಕರರೇ ಹೆಚ್ಚು ಆದಾಯ ಗಳಿಸುತ್ತಾರೆ!

webtech_news18
ಬಾಸ್​ಗಿಂತ ಹೆಚ್ಚು ಆದಾಯ ಗಳಿಸುವ ನೌಕರರ ಕುರಿತಾಗಿ ನೀವು ಯಾವತ್ತಾದರೂ ಕೇಳಿದ್ದೀರಾ? ನಾವು ಹೇಳ ಹೊರಟಿರುವ ಕಂಪೆನಿ ಟೆಕ್ನಾಲಜಿಯಲ್ಲಿ ಸೆಕ್ಟರ್​ನಲ್ಲಿ ಬಹಳಷ್ಟು ಹೆಸರುವಾಸಿಯಾಗಿರುವ ಕಂಪೆನಿ. ಹಾಗಾದ್ರೆ ಆ ಕಂಪೆನಿ ಯಾವುದು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಈ ಕಂಪೆನಿಯ ಹೆಸರಯ ಆ್ಯಪಲ್. ಹೌದು ಐಫೋನ್, ಐ ಪಾಡ್​ ನಿರ್ಮಿಸುವ ಅದೇ ಆ್ಯಪಲ್ ಕಂಪೆನಿ. ಆ್ಯಪಲ್​ನ ಸಿಇಒ ಟಿಮ್​ ಕುಕ್ ವೇತನ ಸುಮಾರು 84 ಕೋಟಿ. ಇದು ಅವರ 2017ರ ಆದಾಯವಾಗಿದೆ. ಆದರೆ ಆ್ಯಪಲ್​ನ ಕೆಲ ನೌಕರರಿಗೆ ಅವರಿಗಿಂತಲೂ ದುಪ್ಪಟ್ಟು ವೇತನ ಸಿಗುತ್ತಿದೆ. ಹಾಗಾದ್ರೆ ಯಾವೆಲ್ಲಾ ನೌಕರರಿಗೆ ಕಂಪೆನಿಯ ಸಿಯೊಗಿಂತ ಹೆಚ್ಚು ವೇತನ ಸಿಗುತ್ತದೆ ತಿಳಿದುಕೊಳ್ಳಲು ಮುಂದಿನ ಸ್ಲ್ಐಡ್ ಕ್ಲಿಕ್ ಮಾಡಿ


ಆ್ಯಪಲ್ ಕಂಪೆನಿಯ ಸಿಇಒ ಪಡೆಯುವ ಆದಾಯಕ್ಕಿಂತ ಹೆಚ್ಚು, ಕಂಪೆನಿಯ ರೀಟೆಲ್ ಹಾಗೂ ಆನ್​ಲೈನ್​ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಉಪಾಧ್ಯಕ್ಷೆ ಏಂಜಲಾ ಆರೆಂಡ್ಸ್ ಗಳಿಸುತ್ತಾರೆ. ಏಂಜಲಾ ಆರೆಂಡ್ಸ್ ಈ ಕಂಪೆನಿಯಲ್ಲಿ ಉತ್ತಮ ವೇತನ ಪಡೆಯುವ ನೌಕರರಾಗಿದ್ದಾರೆ. 2017ರಲ್ಲಿ ಇವರ ವೇತನ 2.42 ಕೋಟಿ ಡಾಲರ್ ಅಂದರೆ ಸುಮಾರು 158 ಕೋಟಿ ರೂಪಾಯಿ ಆಗಿತ್ತು.
ಅಂದರೆ ಏಂಜಲಾರವರ ವೇತನ ಟಿಮ್​ ಕುಕ್​ಗಿಂತ ದುಪ್ಪಟ್ಟು ವೇತನವಾಗಿದೆ. ಹೀಗಿದ್ದರೂ ಟಿಮ್​ ಕುಕ್​ ವೇತನದಲ್ಲಿ 2011ರಲ್ಲಿ ಪಡೆದ ಶೇರ್ ಅವಾರ್ಡ್​ ಸೇರಿಸಿಲ್ಲ. ಇನ್ನು ಏಂಜಲಾ ಆ್ಯಪಲ್​ ಕಂಪೆನಿಯ ಫಿಜಿಕಲ್​ ಸ್ಟೋರ್ಸ್​, ಆನ್​ಲೈನ್​ ಸ್ಟೋರ್ಸ್ ಹಾಗೂ ಸಂಪರ್ಕ ಕೇಂದ್ರದ ತಂತ್ರಗಾರಿಕೆ, ರಿಯಲ್​ ಎಸ್ಟೇಟ್, ಅಭಿವೃದ್ಧಿ ಹಾಗೂ ಕಾರ್ಯಾಚರಣೆಗಳನ್ನು ನಿಭಾಯಿಸುತ್ತಾರೆ.
ಏಂಜಲಾ 2014ರಿಂದಲೇ ಕುಕ್​ಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಇವರು 2014ರಲ್ಲಿ ಆ್ಯಪಲ್ ಕಂಪೆನಿ ಸೇರಿದ್ದರು. ಅದಕ್ಕೂ ಮೊದಲು ಅವರು ಫ್ಯಾಷನ್ ಬ್ರಾಂಡ್ ಕಂಪೆನಿಯಾಗಿರುವ ಬರ್ಬೆರಿಯಲ್ಲಿ ನಿರ್ದೇಶಕಿ ಹಾಗೂ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುಂದಿನ ಸ್ಲೈಡ್​ನಲ್ಲಿ ಕುಕ್​ಗಿಂತ ಹೆಚ್ಚು ವೇತನ ಪಡೆಯುವ ಇನ್ನಿತರ ನೌಕರರು ಯಾರೆಂದು ತಿಳಿಯಿರಿ.
ಏಂಜಲಾರನ್ನು ಹೊರತುಪಡಿಸಿ ಕಂಪೆನಿಯ ಹಣಕಾಸು ಮುಖ್ಯಸ್ಥ ಲೂಕ ಮಾಯಸ್ಟ್ರಿ, ಹಾರ್ಡ್​ವೇರ್ ಪ್ರೆಸಿಡೆಂಟ್ ಜಾನಿ ಸ್ಟ್ರಾವ್ಜಿ, ಡೆನ್ ರಿಕಿಯೋ ಹಾಗೂ ಜನರಲ್ ಕೌನ್ಸಿಲರ್ ಬ್ರೂಸ್​ ಸೆವೆಲ್​ ಕಂಪೆನಿಯ ಚೀಫ್​ಗಿಂತಲೂ ಹೆಚ್ಚು ವೇತನ ಪಡೆಯುತ್ತಾರೆ. ಲೂಕಾರವರ ವೇತನ ಸುಮಾರು 156 ಕೋಟಿಯಾಗಿದ್ದರೆ, ಜಾನಿ ಸ್ಟ್ರಾವ್ಜಿ ಹಾಗೂ ಡೆನ್ ರಿಕಿಯೋ 156.7 ಕೋಟಿ ವೇತನ ಪಡೆಯುತ್ತಿದ್ದಾರೆ.

Trending Now