PHOTOS: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಇಂದು ಮಾಧವ, ಮುಕುಂದ, ಮುರಳಿಲೋಲ, ಗೋವರ್ಧನ ಗಿರಿಧರ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವ ಪೊಡವಿಗೊಡೆಯ ಶ್ರೀ ಕೃಷ್ಣನ ಹುಟ್ಟು ಹಬ್ಬದ ಸಂಭ್ರಮ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ನಾಡಿನೆಲ್ಲೆಡೆ ಸಂಭ್ರಮದಿಂದ ಶ್ರೀಕೃಷ್ಣನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.

webtech_news18 , Advertorial
ಪೊಡುವಿಗೊಡೆಯ ಉಡುಪಿ ಶ್ರೀ ಕೃಷ್ಣನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕಡೆಗೋಲು ಕೃಷ್ಣನ ಆರಾಧನೆಗೆ ರಥಬೀದಿ ಸಿದ್ಧವಾಗಿ ಕುಳಿತಿದೆ.
ಅಷ್ಟ ಮಠಗಳ ರಥಬೀದಿಯಲ್ಲಿ ಕೃಷ್ಣನ ಹುಟ್ಟಿನ ಸಂಭ್ರಮಕ್ಕೆ ಕಂಗೊಳಿಸುತ್ತಿದೆ. ರಥಬೀದಿಯಲ್ಲಿ ಮರದ ಗುರ್ಜಿಗಳನ್ನು ಹಾಕಿ ಮೊಸರು ಕುಡಿಕೆಗೆ ಸಿದ್ಧತೆ ಮಾಡಲಾಗಿದೆ.

ಶ್ರೀ ಕೃಷ್ಣ ದೇವಳ ಬಗೆ ಬಗೆಯ ಹೂವಿನಗಳಿಂದ ಅಲಂಕಾರಗೊಂಡಿದೆ. ಸೆ. 2ಮತ್ತು 3ರಂದು ಎರಡು ದಿನ ಉಡುಪಿ ನಂದಗೋಕುಲವಾಗಿ ಕಂಗೊಳಿಸಲಿದೆ.
ಎರಡು ದಿನಗಳ ಕಾಲ ಕೃಷ್ಣ ದೇವರು ಮೃತಿಕೆಯ ಮೂರ್ತಿಯನ್ನು ಆರಾಧಿಸಲಾಗುತ್ತೆ. ಭಕ್ತರು ಬಗೆ ಬಗೆಯ ವೇಷ ತೊಟ್ಟು ಅಷ್ಟಮಿ ಹಬ್ಬವನ್ನು ಸಂಭ್ರಮಿಸಲಿದ್ದಾರೆ.
ಇಸ್ಕಾನ್​ ದೇವಾಲಯಲ್ಲಿ ಭಕ್ತರಿಗೆ ಹಂಚುವ ಲಾಡು ಮತ್ತು ಸಿಹಿ ತಿಂಡಿಗಳನ್ನು ಸಿದ್ದಪಡಿಸುತ್ತಿರುವ ಸಿಬ್ಬಂದಿ
ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ದೇವರ ನೈವೇದ್ಯಕ್ಕೆ ಸಜ್ಜಾಗಿರುವ 1000 ಲಾಡುಗಳು

Trending Now