ಮೈಸೂರು ಅರಮನೆ ಮೇಲೆ ಕಾಣಿಸಿದ್ದು ಹಾರುವ ತಟ್ಟೆನಾ?

ಮೈಸೂರು ಅರಮನೆ ಮೇಲೆ ಹಾರುವ ತಟ್ಟೆ ಹೋಲುವ ಚಿತ್ರ ಮೊಬೈಲ್​ನಲ್ಲಿ ಸೆರೆಯಾಗಿದೆ. ಮೂಡಿಗೆರೆಯ ಪೂಜಿತ್​ ಕ್ಲಿಕ್ಕಿಸಿಕೊಂಡ ಫೋಟೋದಲ್ಲಿ ಹಾರುವ ತಟ್ಟೆಯ ರೀತಿಯ ಚಿತ್ರ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದಲ್ಲಿ ಕರಾಟೆ ವೃತ್ತಿ ಮಾಡುತ್ತಿರುವ ಪೂಜಿತ್, ಆಗಸ್ಟ್​ 28 ರಂದು ಗೆಳೆಯರೊಂದಿಗೆ ಪ್ರವಾಸಕ್ಕಾಗಿ ಮೈಸೂರಿಗೆ ಬಂದಿದ್ದ. ಅರಮನೆ ಮುಂದೆ ನಾನಾ ರೀತಿಯಲ್ಲಿ ಕ್ಲಿಕಿಸಿಕೊಂಡ ಪೋಟೊದಲ್ಲಿ ಎರಡು ಕಡೆ ಹಾರುವ ತಟ್ಟೆ ಯ ರೀತಿಯ ಚಿತ್ರ ಸೆರೆಯಾಗಿದೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈಸೂರು ಅರಮನೆ ಮೇಲೆ ಕಾಣಿಸಿದ್ದು ಹಾರುವ ತಟ್ಟೆನಾ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

webtech_news18 , Advertorial
 

Trending Now