ಕೂಲಿಂಗ್ ಗ್ಲಾಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಲ್ಕೂಲ್..!
ಒಂದೆಡೆ ರಾಜ್ಯದಲ್ಲಿ ಇತ್ತ ರಾಜಕೀಯ ಬಿಸಿ ತಾರಕಕ್ಕೇರಿದ್ದರೆ, ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಸಖತ್ ಕೂಲ್ ಕೂಲ್ ಆಗಿಯೇ ಫೋಟೋ ಸೆಷನ್ ಮಾಡಿಕೊಂಡಿದ್ದಾರೆ. ಮಾಸ್ಕೋಗೆ ಭೇಟಿ ನೀಡಿರುವ ಅವರು, ಕೂಲಿಂಗ್ ಗ್ಲಾಸ್ ಹಾಕೊಂಡು ಸುಂದರ ತಾಣಗಳನ್ನ ವೀಕ್ಷಿಸುತ್ತಿದ್ದಾರೆ.
ಸೆಂಟ್ ಪೀಟರ್ ಬರ್ಗ್ ಸೇರಿದಂತೆ ಹಲವು ತಾಣಗಳನ್ನ ಸಿದ್ದರಾಮಯ್ಯ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಜೊತೆ ಅನಿವಾಸಿ ಕನ್ನಡಿಗರು ಸೆಲ್ಫಿ ತೆಗೆದುಕೊಳ್ಳೋಕೆ ಮುಗಿಬಿದ್ದಿದ್ದಾರೆ. ಕೂಲಿಂಗ್ ಗ್ಲಾಸ್ನಲ್ಲಿ ಮಿಂಚುತ್ತಿರುವ ಸಿದ್ದರಾಮಯ್ಯ ಕನ್ನಡಿಗರ ಸೆಲ್ಪಿಗೆ ಫೋಸ್ ಕೊಟ್ಟು ಸಕ್ಕತ್ಎಂಜಾಯ್ ಮಾಡ್ತಾ ಇದ್ದಾರೆ. ಕೂಲ್ ಕೂಲ್ ಆಗಿಯೇ ರಮಣೀಯ ತಾಣಗಳಿಗೆ ರೌಂಡ್ ಹಾಕುತ್ತಿರುವ ಸಿದ್ದರಾಮಯ್ಯ, ಸೆ.3 ರಂದು ವಿದೇಶ ಪ್ರವಾಸಕ್ಕೆ ಇಲ್ಲಿಂದ ಹೊರಟಿದ್ದರು