#PHOTOS ವಿನೇಶ್​​ ಫೋಗಾಟ್​​​​​; ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಚಿನ್ನ ಜಯಿಸಿದ್ದಾರೆ. ಮಹಿಳೆಯರ ಫ್ರೀಸ್ಟೈಲ್ ಕುಸ್ತಿ 50 ಕಿಲೋ ವಿಭಾಗದ ಫೈನಲ್​ನಲ್ಲಿ ಜಪಾನ್​ನ ಯೂಕಿ ಈರೀ ಅವರನ್ನು 6-2 ಅಂಕಗಳಿಂದ ಮಣಿಸಿದರು. 23 ವರ್ಷದ ವಿನೇಶ್ ಇಡೀ ಕ್ರೀಡಾಕೂಟದಲ್ಲಿ ಸರಿಸಾಟಿ ಇಲ್ಲದಂತೆ ಎದುರಾಳಿಗಳನ್ನ ಕೆಡವಿದ್ದು ವಿಶೇಷ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ, ಇತಿಹಾಸ ಮತ್ತು ಮೈಲಿಗಲ್ಲು ವಿನೇಶ್ ಫೋಗಾಟ್ ಅವರಿಗೆ ಸಿಕ್ಕಂತಾಗಿದೆ. ಕೂಟದ ಎರಡನೇ ದಿನದಂದು ಭಾರತಕ್ಕೆ ಒಟ್ಟಾರೆ 2ನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

webtech_news18 , Advertorial


Trending Now