PHOTOS: ಏಷ್ಯನ್ ಗೇಮ್ಸ್ 2018ರಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕ್ರೀಡಾಪಟುಗಳು

webtech_news18 , Advertorial
ಪುರುಷರ 1500 ಮೀ. ಓಟದಲ್ಲಿ ಭಾರತದ ಜಿನ್ಸನ್ ಜಾನ್ಸನ್ ಅವರು 3:44:72 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು
ಮಹಿಳೆಯರ ರಿಲೇಯಲ್ಲಿ ಭಾರತದ ವನಿತೆಯರು 3:28:72 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿದ್ದಾರೆ


ಪುರುಷರ ತ್ರಿಪಲ್ ಜಂಪ್​​ನಲ್ಲಿ ಅರ್ಪಿಂದರ್ ಸಿಂಗ್ ಅವರು 48 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾರೆ
ಕಠಿಣ ಕ್ರೀಡೆಗಳಲ್ಲಿ ಒಂದಾದ ಮಹಿಳೆಯರ ಹೆಪ್ಟಾತ್ಲಾನ್​​​ನಲ್ಲಿ ಸ್ವಪ್ನ ಬರ್ಮನ್ ಅವರು ಸ್ವರ್ಣ ಗೆದ್ದು ಇತಿಹಾಸ ಸೃಷ್ಟಿಸಿದರು
ಪುರುಷರ 800 ಮೀ. ಓಟದಲ್ಲಿ ಮಂಜಿತ್ ಸಿಂಗ್ 1:46:15 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿದ್ದಾರೆ
ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ 88.03 ದೂರ ಭರ್ಜಿ ಎಸೆದು ಚಿನ್ನ ಪದಕಕ್ಕೆ ಮುತ್ತಿಕ್ಕಿದರು
ಪುರುಷರ ಶಾಟ್ ಪುಟ್ ನಲ್ಲಿ ಭಾರತದ ತಾಜಿಂದರ್ ಪಾಲ್ ಸಿಂಗ್ 20.75 ಮೀ. ದೂರಕ್ಕೆ ಶಾಟ್ ಪುಟ್ ಎಸೆದು ದಾಖಲೆ ಬರೆದಿದ್ದಾರೆ
ಪುರುಷರ ಟೆನ್ನಿಸ್​ನ ಡಬಲ್ಸ್ ಫೈನಲ್ ನಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಹಾಗೂ ಶರಣ್ ಜೋಡಿ ಜಯ ಸಾಧಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ
10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 16 ವರ್ಷದ ಸೌರಭ್ ಚೌದರಿ 240.17 ಪಾಯಿಂಟ್ ಗಿಟ್ಟಿಸಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ
ಫ್ರೀಸ್ಟೈಲ್ ಕುಸ್ತಿ 50 ಕಿಮೀ ವಿಭಾಗದ ಫೈನಲ್​​ನಲ್ಲಿ ವಿನೇಶ್ ಪೋಗಾಟ್ ಚಿನ್ನಕ್ಕೆ ಕೊರಳೊಡ್ಡಿದರು
ಭಾರತದ ಕುಸ್ತಿಪಟು ಬಜರಂಗ್ ಪೊನಿಯಾ ಅವರು 65ಕೆಜಿ ವಿಭಾಗದ ಕುಸ್ತಿಯಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ್ದಾರೆ
ಮಹಿಳೆಯರ 25 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಹಿ ಸರ್ನೋಬಾತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ
ರೋಯಿಂಗ್ ತಂಡ 6:17:13 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದೆ

Trending Now