ಸ್ವಾತಂತ್ರ್ಯೋತ್ಸವ: ಭಾರತ-ಪಾಕಿಸ್ತಾನದ ವಿಭಜನೆ ಸಮಯದ ಕೆಲವು ಅಪರೂಪದ ಚಿತ್ರಗಳು

webtech_news18 , Advertorial
1947 ಆಗಸ್ಟ್​ 15 ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನ. ಅಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಆದರೆ ಆಗಸ್ಟ್​ 14ರಂದು ರಾತ್ರಿ ಭಾರತದಲ್ಲಿ ಏನೇನು ಘಟನೆಗಳು ಘಟಿಸಿದ್ದವು ಎಂದು ನಿಮಗೆ ಗೊತ್ತೇ? ಅಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತಾದರೂ ಅದರಲ್ಲಿ ತುಂಬಿಕೊಂಡಿದ್ದು ನೋವು. ಹೌದು ದೇಶ ವಿಭಜನೆಯ ನೋವು, ಮತ್ತೊಂದೆಡೆ ದಂಗೆ, ಹಿಂದೆ, ರಕ್ತಪಾತ. ಇವುಗಳ ನಡುವೆ ನಡೆದಿತ್ತು ಸ್ವಾತಂತ್ರ್ಯದ ಸಂಭ್ರಮಾಚರಣೆ. 
ಜನರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ದೂರವಾಗಿ ತಮ್ಮ ಜನ್ಮ ಭೂಮಿಯನ್ನು ಬಿಟ್ಟು ಹೋಗುತ್ತಿದ್ದರು.


ವಿಭಜನೆಯ ರಾತ್ರಿ ಲಕ್ಷಾಂತರ ಜನರು ಮನೆ ಕಳೆದುಕೊಂಡು ಬೀದಿಗೆ ಬಿದ್ದರು. ದೇಶ ತುಂಡು ತುಂಡಾಗಿ ಹೋಗಿತ್ತು. ಒಂದು ಕಡೆ ಭಾರತವಿದ್ದರೆ, ಮತ್ತೊಂದು ಕಡೆ ಪಾಕಿಸ್ತಾನವಿತ್ತು.
ಈ ವೇಳೆ ಧಾರ್ಮಿಕ ಭಾವನೆಯನ್ನು ಪ್ರಚೋದಿಸುವ ಕೆಲಸಗಳು ನಡೆದು ಎಲ್ಲೆಡೆ ದಂಗೆಯಾಗಿ ಸುಮಾರು 10 ಲಕ್ಷ ಜನರು ಬಲಿಯಾಗಿದ್ದರು.
ಎಲ್ಲಿ ನೋಡಿದರೂ ಹಿಂಸೆ, ರಕ್ತಪಾತ. ತಮ್ಮವರೇ, ತಮ್ಮವರನ್ನು ದ್ವೇಷಿಸುತ್ತಿದ್ದರು.
ಈ ವಿಭಜನೆಯಿಂದಾಗಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಿತ್ತು
ಈ ಸಮಯದಲ್ಲಿ ಯಾರಿಗೆ ಪಾಕಿಸ್ತಾನ ಸುರಕ್ಷಿತವೆನಿಸಿತ್ತೋ ಅವರು ಆ ಕಡೆಗೆ ಹೋದರೆ, ಯಾರಿಗೆ ಭಾರತ ಸುರಕ್ಷಿತವೆನಿಸಿತ್ತೋ ಅವರು ಪಾಕಿಸ್ತಾನದ ಕಡೆಯಿಂದ ಇತ್ತ ಪ್ರಯಾಣ ಬೆಳೆಸಿದ್ದರು.
ಆಗ ಅಂದಾಜು ಒಂದು ಕೋಟಿ ಜನರು ಪಾಕಿಸ್ತಾನ ಹಾಗೂ ಭಾರತದಿಂದ ಅದಲುಬದಲಾಗಿದ್ದರು. ಇದು ಆಗಿನ ಕಾಲಕ್ಕೆ ಇತಿಹಾಸ ಸೃಷ್ಟಿಸಿತ್ತು.


    

Trending Now