#PHOTOS: ದೇಶಾದ್ಯಂತ ಪವಿತ್ರ ರಕ್ಷಾ ಬಂಧನ ಸಂಭ್ರಮ

ಅಣ್ಣ-ತಂಗಿಯರ ಬಾಂಧವ್ಯ ಸಾರುವ ಪವಿತ್ರ ಹಬ್ಬ ರಕ್ಷಾ ಬಂಧನ. ಇಂದು ದೇಶಾದ್ಯಂತ ರಾಖಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ತಂಗಿಯರು ತಮ್ಮ ಅಣ್ಣಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಿದ್ದಾರೆ. ಅಣ್ಣಂದಿರು ಆಶೀರ್ವದಿಸಿ ಶುಭ ಹಾರೈಸುತ್ತಿದ್ದಾರೆ. ಇಂತಹ ಪವಿತ್ರ ಹಬ್ಬದ ಆಚರಣೆಯ ಕೆಲವು ದೃಶ್ಯಗಳು ಇಲ್ಲಿವೆ.

webtech_news18 , Advertorial
ಬಿಕಾನೆರ್​ನಲ್ಲಿ ಮಹಿಳೆಯರು ಬಿಎಸ್​ಎಫ್​ ಸಿಬ್ಬಂದಿಗೆ ರಾಖಿ ಕಟ್ಟುತ್ತಿರುವ ದೃಶ್ಯ.
ಜಮ್ಮುವಿನಲ್ಲಿ ಅನಾಥಾಶ್ರಮದ ಮಕ್ಕಳು ರಕ್ಷಾ ಬಂಧನ ಆಚರಿಸುತ್ತಿರುವುದು


ಅಲಹಾಬಾದ್​ನ ಕುರುಡರ ಶಾಲೆಯೊಂದರಲ್ಲಿ ಹುಡುಗಿಯರು ಹುಡುಗರಿಗೆ ರಾಖಿ ಕಟ್ಟುವಾಗ ಅವರ ಮೊಗದಲ್ಲಿ ಮೂಡಿಬಂದ ಮಂದಹಾಸ
ರಕ್ಷಾ ಬಂಧನದ ಪ್ರಯುಕ್ತ ಕರಾದ್​ನಲ್ಲಿ ಶಾಲಾ ಮಕ್ಕಳು ರಾಖಿಯ ಆಕಾರದಲ್ಲಿ ಮಾನ ಸರಪಳಿ ರಚಿಸಿರುವ ದೃಶ್ಯ
ರಾಖಿ ಹಬ್ಬದ ಪ್ರಯುಕ್ತ ಅಲಹಾಬಾದ್​ನ ನೈನಿ ಸೆಂಟ್ರಲ್​ ಜೈಲಿನ ಮುಂದೆ ಸಹೋದರಿಯರು ತಮ್ಮ ಅಣ್ಣಂದಿರಿಗೆ ರಾಖಿ ಕಟ್ಟಲು ಸಾಲಾಗಿ ನಿಂತಿರುವ ದೃಶ್ಯ.
ಅಹಮದಾಬಾದ್​ನಲ್ಲಿ ಶಾಲಾ ಮಕ್ಕಳು ಪೊಲೀಸ್​ ಅಧಿಕಾರಿಯ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನವನ್ನು ಆಚರಿಸುತ್ತಿರುವ ದೃಶ್ಯ
ಅಟ್ಟಾರಿಯ ಭಾರತ ಪಾಕಿಸ್ತಾನ ಗಡಿಭಾಗದಲ್ಲಿರುವ ಬಿಎಸ್​ಎಫ್ ಯೋಧರಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ವಿದ್ಯಾರ್ಥಿನಿಯರು ರಾಖಿ ಕಟ್ಟುತ್ತಿರುವ ದೃಶ್ಯ.
ರಕ್ಷಾ ಬಂಧನದ ಪ್ರಯುಕ್ತ ಅಲಹಾಬಾದ್​ನಲ್ಲಿ ತಂಗಿಯು ತನ್ನ ಅಣ್ಣನಿಗೆ ಪವಿತ್ರ ರಾಖಿ ಕಟ್ಟುತ್ತಿರುವುದು. ತಾಯಿಯು ಸಹ ಜೊತೆಯಲ್ಲಿದ್ದಾರೆ.
ರಕ್ಷಾ ಬಂಧನದ ಪ್ರಯುಕ್ತ ಕೊಲ್ಕತ್ತಾದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಟ್ಯಾಕ್ಸಿ ಡ್ರೈವರ್​ಗೆ ರಾಖಿ ಕಟ್ಟುತ್ತಿರುವ ಅಪರೂಪದ ದೃಶ್ಯ.
ಕರಾದ್​ನಲ್ಲಿ ಶಾಲಾ ಮಕ್ಕಳು ರಾಖಿ ಕಟ್ಟುತ್ತಿರುವ ದೃಶ್ಯ.
ಜಮ್ಮುವಿನ ವೃದ್ದಾಶ್ರಮವೊಂದರಲ್ಲಿ ವಯೋವೃದ್ಧರಿಗೆ ಅಜ್ಜಿಯರು ರಾಖಿ ಕಟ್ಟುತ್ತಿರುವ ಸಂದರ್ಭ
ರಕ್ಷಾ ಬಂಧನದ ಪ್ರಯುಕ್ತ ಕೊಲ್ಕತ್ತಾದಲ್ಲಿ ಮುಸ್ಲಿಂ ಮಹಿಳೆಯರು ರಿಕ್ಷಾವಾಲಾನಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಿರುವ ದೃಶ್ಯ.
ಅಲಹಾಬಾದಿನಲ್ಲಿ ತಂಗಿಯೊಬ್ಬಳು ತನ್ನ ಅಣ್ಣನಿಗೆ ರಾಖಿ ಕಟ್ಟುತ್ತಿರುವ ದೃಶ್ಯ

Trending Now