5 ವರ್ಷಗಳಲ್ಲಿ ಬದಲಾದವು ಪ್ರಧಾನಿ ಮೋದಿಯ ಪೇಟಗಳು!: ವಿಶೇಷತೆ ಏನು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ಸಮಾರಂಭದಂದು ಪೇಟ ಧರಿಸುವ ತಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷವೂ ಪ್ರಧಾನಿ ಮೋದಿ ತಮ್ಮ ಪೇಟ ಬದಲಾಯಿಸಿದ್ದಾರೆ. ಈ ಮೂಲಕ  5 ಬಾರಿಯೂ ಅವರು ವಿಭಿನ್ನವಾಗಿ ಕಂಡು ಬಂದಿದ್ದಾರೆ. ಇವರು ಈ ಐದು ವರ್ಷಗಳಲ್ಲಿ ಧರಿಸಿದ ಪೇಟ ಹಾಗೂ ಭಾಷಣದ ಕುರಿತಾದ ಒಂದು ಕಿರುನೋಟ.

Precilla Olivia Dias
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ಸಮಾರಂಭದಂದು ಪೇಟ ಧರಿಸುವ ತಮ್ಮ ಪರಂಪರೆಯನ್ನು ಮುಂದುವರೆಸಿ ದೆಹಲಿಯ ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷವೂ ಪ್ರಧಾನಿ ಮೋದಿ ತಮ್ಮ ಪೇಟ ಬದಲಾಯಿಸಿದ್ದಾರೆ. ಈ ಮೂಲಕ  5 ಬಾರಿಯೂ ಅವರು ವಿಭಿನ್ನವಾಗಿ ಕಂಡು ಬಂದಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ಮೊದಲ ಬಾರಿ ತ್ರಿವರ್ಣ ಧ್ವಜ ಹಾರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಜಕಿತ್ತಳೆ ಹಾಗೂ ಹಸಿರು ಬಣ್ಣದ ಜೋಧ್​ಪುರಿ ಪೇಟ ಧರಿಸಿದ್ದರು. ಎನ್​ಡಿಎ ಪಕ್ಷಕ್ಕೆ ಸಿಕ್ಕ ಪೂರ್ಣ ಬಹುಮತದಿಂದ ಪ್ರಧಾನಿಯಾಗಿದ್ದ ಮೋದಿ, ತಮ್ಮ ಮೊದಲ ಭಾಷಣವನ್ನು ಬಹಳ ಉತ್ಸಾಹದಿಂದ ಮಾಡಿದ್ದರು. ಈ ವೇಳೆ "ನಾನಿಲ್ಲಿ ಪ್ರಧಾನ ಮಂತ್ರಿಯಾಗಿ ಬಂದಿಲ್ಲ, ಬದಲಾಗಿ ಪ್ರಧಾನ ಸೇವಕನಾಗಿ ಬಂದಿದ್ದೇನೆ. ನಾನು ದೇಶದ ಪ್ರಧಾನ ಮಂತ್ರಿಯಲ್ಲ. ಪ್ರಧಾನ ಸೇವಕ" ಎಂದಿದ್ದರು.


ಇದಾದ ಬಳಿಕ 2015ರಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ಪಟ್ಟಿಯುಳ್ಳ ಪೇಟ ಧರಿಸಿದ್ದರು. ಈ ವರ್ಷದಲ್ಲಿ ಧ್ವಜಾರೋಹಣ ನಡೆಸಿ ಭಾಷಣ ಮಾಡಿದ್ದ ಪ್ರಧಾನ ಮಂತ್ರಿ ಮೋದಿ ರೈತರ ಅಭಿವೃದ್ಧಿಗಾಗಿ ಪ್ರತ್ಯೇಕ ರೈತ ಕಲ್ಯಾಣ ಇಲಾಖೆ ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆಯನ್ನೂ ಇದೇ ಸಂದರ್ಭದಲ್ಲಿ ಜಾರಿಗೊಳಿಸಿದ್ದರು.
2016ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೆಂಪು- ಗುಲಾಬಿ ಹಾಗೂ ಹಳದಿ ಬಣ್ಣದ ರಾಜಸ್ಥಾನಿ ಪೆಟ ಧರಿಸಿ ಕಂಗೊಳಿಸಿದ್ದರು. ಅಂದು ಅವರು ವಿದೇಶಾಂಗ ನೀತಿ ಹಾಗೂ ಪಾಕಿಸ್ತಾನವನ್ನು ಕೇಂದ್ರೀಕರಿಸಿ ಭಾಷಣ ಮಾಡಿದ್ದರು. ಪೇಶಾವರದಲ್ಲಿ ನಡೆದ ದಾಳಿನ್ನು ಉಲ್ಲೇಖಿಸಿದ್ದ ಮೋದಿ "ಪೆಶಾವರದ ಶಾಲೆಯಲ್ಲಿ ಮುಗ್ಧ ಮಕ್ಕಳನ್ನು ಹತ್ಯೆಗೈದಾಗ, ಭಾರತದ ಪ್ರತಿಯೊಂದು ಶಾಲೆಯೂ ಕಂಬನಿ ಮಿಡಿದಿತ್ತು. ಪ್ರತಿಯೊಬ್ಬ ಸಂಸದರ ಕಣ್ಣಂಚಿನಲ್ಲಿ ನೀರಿಯತ್ತು. ಇದು ನ್ಮಲ್ಲಿರುವ ಮಾನವೀಯತೆಯ ಸಾಕ್ಷಿ ಎಂಬಂತಿತ್ತು. ಆದರೆ ಮತ್ತೊಂದೆಡೆ ಪಾಕಿಸ್ತಾನವು ಭಯೋತ್ಪಾದನೆಯನ್ನು ಮಾಡುತ್ತಿದೆ. ಅದು ಯಾವತ್ತೂ ಆಯಾಸಗೊಂಡಿಲ್ಲ" ಎಂದಿದ್ದರು.
2017 ರಲ್ಲಿ ಪ್ರಧಾನ ಮಂತ್ರಿ ಮೋದಿ ಹಳದಿ ಹಾಗೂ ಕೆಂಪು ಬಣ್ಣದ ಪೇಟ ಧರಿಸಿ ನಾಲ್ಕನೇ ಬಾರಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ, ಭಾಷಣ ಮಾಡಿದ್ದರು.
ಈ ವರ್ಷವೂ(2018) ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಪೇಟ ಧರಿಸುವ ತಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ. ಕೆಂಪು ಅಂಚುಗಳುಳ್ಳ ಕೇಸರಿ ಬಣ್ಣದ ಪೇಟ ಧರಿಸಿದ್ದ ಮೋದಿ ಐದನೇ ಬಾರಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಬಾರಿ ತಮ್ಮ ಭಾಷಣದಲ್ಲಿ ನವಭಾರತ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು 'ನವಭಾರತ ಬಡವರ ಹಾಗೂ ರೈತರ ಭಾರತವಾಗಲಿದೆ. ಈ ಮೂಲಕ 2022ರ ವೇಳೆಗೆ ರೈತರ ಆದಾಯ ದ್ವಿಗುಣವಾಗಲಿದೆ" ಎಂದು ಹೇಳಿದ್ದಾರೆ.
ಇಂದು ದೆಹಲಿಯ ಕೆಂಪುಕೋಟೆಯ ಮೇಲಿನಿಂದ ದೇಶವನ್ನುದ್ದೇಶಿಸಿ ಬರೋಬ್ಬರಿ 82 ನಿಮಿಷಗಳ ಭಾಷಣ ಮಾಡಿದ್ದಾರೆ. ಇದು ಆಗಸ್ಟ್​ 15ರಂದು ಅವರು ಮಾಡಿದ ಮೂರನೇ ಅತಿದೊಡ್ಡ ಭಾಷಣವಾಗಿದೆ. 2017ರ ಸ್ವಾತಂತ್ರ್ಯ ದಿನದಂದು ಅವರು 54 ನಿಮಿಷಗಳ ಭಾಷಣ ಮಾಡಿದ್ದರು. ಇದು ಅವರು ಮಾಡಿದ್ದ ಅತಿ ಚಿಕ್ಕ ಭಾಷಣವಾಗಿತ್ತು.
ಮೋದಿ ಪ್ರಧಾನಮಂತ್ರಿಯಾದ ಬಳಿಕ 2014ರಲ್ಲಿ ಮೊದಲ ಬಾರಿ ಕೆಂಪುಕೋಟೆ ಮೇಲಿನಿಂದ ದೇಶವನ್ನುದ್ದೇಶಿಸಿ 65 ನಿಮಿಷಗಳ ಭಾಷಣ ಮಾಡಿದ್ದರು. ಇದಾದ ಬಳಿಕ 2015 ರಲ್ಲಿ 86 ನಿಮಿಷಗಳ ಭಾಷಣ ಮಾಡಿದ್ದರು. ಇದು ಅವರ ಎರಡನೇ ಅತಿದೊಡ್ಡ ಭಾಷಣವಾಗಿತ್ತು. 2016ರಲ್ಲಿ ಅವರು ಒಂದೂವರೆ ಗಂಟೆಗೂ ಅಧಿಕ ಸಮಯ ಭಾಷಣ ಮಾಡಿದ್ದರು. ಅಂದರೆ 94 ನಿಮಿಷ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಈ ಮೂಲಕ ಸ್ವಾತಂತ್ರ್ಯ ದಿನದ ಅತಿ ಉದ್ದದ ಭಾಷಣ ಮಾಡಿದ್ದರು.

Trending Now