ಫೋರ್ಬ್ಸ್​ನ ಟಾಪ್​ 10 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮಿಂಚಿದ ಬಾಲಿವುಡ್​ನ ಅಕ್ಷಯ್​- ಸಲ್ಮಾನ್​

webtech_news18 , Advertorial
ಫೋರ್ಬ್ಸ್ ನಿಯತಕಾಲಿಕೆ ಈ ಬಾರಿ​ ಅತಿ ಹೆಚ್ಚು ಸಂಭಾವನೆ ಪಡೆಯುವ ನೂರು ಮಂದಿ ಸೆಲೆಬ್ರಿಟಿಗಳ ಪಟ್ಟಿ ಪ್ರಕಟಿಸಿದೆ. ಅದರಲ್ಲಿ ಟಾಪ್​ 10 ಸ್ಥಾನದಲ್ಲಿ ಈ ಬಾರಿ ಬಾಲಿವುಡ್​ನ ಅಕ್ಷಯ್ ಕುಮಾರ್​ ಹಾಗೂ ಸಲ್ಮಾನ್​ ಸಹ ಸ್ಥಾನ ಪಡೆದುಕೊಂಡಿರುವುದು ವಿಶೇಷ.
ಹಾಲಿವುಡ್​ನ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಜಾರ್ಜ್​ ಕ್ಲೂನಿ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ (239ಮಿಲಿಯನ್​ ಡಾಲರ್​ – Rs. 1,676.76 ಕೋಟಿ), ಹಕ್ಯುಲಸ್​ ಸಿನಿಮಾ ಖ್ಯಾತಿಯ ಡ್ವೇನ್​ ಜಾನ್​ಸನ್​ (124 ಮಿಲಿಯನ್ ಡಾಲರ್​​ – Rs. 869.95 ಕೋಟಿ) ಎರಡನೇ ಸ್ಥಾನದಲ್ಲಿದ್ದಾರೆ.


ರಾಬರ್ಟ್​ ಡೌನಿ ಜೂನಿಯರ್​ ಮೂರನೇ ಸ್ಥಾನದಲ್ಲಿದ್ದರೆ (81 ಮಿಲಿಯನ್​ – Rs. 568.28 ಕೋಟಿ), ಕ್ರಿಸ್​ ಹ್ಯಾಮ್ಸ್​ವರ್ತ್(64.5 ಮಿಲಿಯನ್​ ಡಾಲರ್​ – Rs. 452.52 ಕೋಟಿ) ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐದನೇ ಸ್ಥಾನದಲ್ಲಿರುವ ಜಾಕಿಚಾನ್​ (45.5 ಮಿಲಿಯನ್​ – Rs. 319.22 ಕೋಟಿ) ನಂತರದ ಸ್ಥಾನವನ್ನು ಹಾಲಿವುಡ್​ ನಟ ವಿಲ್​ ಸ್ಮಿತ್ (42 ಮಿಲಿಯನ್​ – Rs. 294.66 ಕೋಟಿ)​ ಪಡೆದುಕೊಂಡಿದ್ದಾರೆ.
ಅಕ್ಷಯ್​ ಕುಮಾರ್​ ಅವರ ಪ್ರಸಕ್ತ ವಾರ್ಷಿಕ ಆದಾಯ 283.5 ಕೋಟಿ. ಇದರಿಂದಾಗಿ ಈ ಬಾರಿ ಏಳನೇ ಸ್ಥಾನದಲ್ಲಿದ್ದಾರೆ. ಆದರೆ ಕಳೆದ ವರ್ಷ 227 ಕೋಟಿ ಆದಾಯದಿಂದಾಗಿ ಅಕ್ಕಿ 10ನೇ ಸ್ಥಾನದಲ್ಲಿದ್ದರು. ಆ್ಯಡಂ ಸ್ಯಾಂಡ್ಲರ್​ ಈ ಸಲ (39.5 ಮಿಲಿಯನ್​ – Rs. 277.12ಕೋಟಿ) ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.
ಈ ವರ್ಷದ ಸಲ್ಮಾನ್ ಆದಾಯ 269.5 ಕೋಟಿ ಹಾಗೂ ಕಳೆದ ವರ್ಷದ ಆದಾಯ 237 ಕೋಟಿ. ಆದರೆ ಕಳೆದ ವರ್ಷದಂತೆ ಈ ಬಾರಿಯೂ ಸಲ್ಲು 9ನೇ ಸ್ಥಾನದಲ್ಲಿಯೇ ಇದ್ದಾರೆ. ಇನ್ನೂ ಕ್ಯಾಪ್ಟನ್​ ಅಮೆರಿಕ ಖ್ಯಾತಿಯ ಕ್ರಿಸ್​ ಇವಾನ್ಸ್​ (34 ಮಿಲಿಯನ್​ – Rs. 238.54 ಕೋಟಿ) ಹತ್ತನೇ ಸ್ಥಾನದಲ್ಲಿದ್ದಾರೆ.

Trending Now