ನಾವು ಧರಿಸುವ ಪಾದರಕ್ಷೆಗಳು ನಮ್ಮ ವ್ಯಕ್ತಿತ್ವ ಬಿಂಬಿಸುವುದೇ?

webtech_news18 , Advertorial
ಇಂಗ್ಲಿಷ್​ನಲ್ಲಿ  'ವೆನ್​ ಯು ವಾಕ್ ಪೀಪಲ್ ವಿಲ್ ಟಾಕ್ 'ಎಂಬ ಮಾತಿದೆ. ಅಂದರೆ ನೀವು ನಡೆದುಕೊಂಡು ಹೋಗುವಾಗ ಎಲ್ಲರು ನಿಮ್ಮ  ಬಗ್ಗೆ ಮಾತನಾಡುತ್ತಾರೆ ಎಂದರ್ಥ. ವ್ಯಕ್ತಿಯೊಬ್ಬರ ವ್ಯಕ್ತಿತ್ವವನ್ನು ಅವರು ಧರಿಸುವ ಪಾದರಕ್ಷೆಯಿಂದ ಅಳೆಯಲಾಗುತ್ತದೆ. ನಡೆದುಕೊಂಡು ಹೋಗುವಾಗಂತೂ ಹೆಚ್ಚಿನವರ ಗಮನ ನಿಮ್ಮ ಶೂ ಮೇಲಿರುವುದು ಇದೇ ಕಾರಣಕ್ಕೆ. ನೀವು ಯಾವುದೇ ರೀತಿಯ ಉಡುಗೆ ಧರಿಸಿ, ಕೆಟ್ಟ ಶೂ ಹಾಕಿದರೆ ನಿಮ್ಮ ಸಂಪೂರ್ಣ ಔಟ್​ಲುಕ್  ಕೆಟ್ಟದಾಗಿ ಕಾಣುವುದು ಕೂಡ ಇದೇ ಕಾರಣಕ್ಕೆ ಎಂದೇಳಬಹುದು. ಶೂ ಧರಿಸುವ ಮುನ್ನ ಸಾಮಾನ್ಯವಾಗಿ ಗಮನಿಸಬೇಕಾದ ಕೆಲ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.
ದಿನಪ್ರಂತಿ ಶೂ ಧರಿಸುವವರಾಗಿದ್ದರೆ ಶೂಸ್​ನಲ್ಲಿ ಆಯ್ಕೆಗಳಿರಲಿ. ಒಂದೇ ಶೂಸ್​ನ್ನು ದೀರ್ಘಕಾದಲವರೆಗೆ ಧರಿಸುವ ಅಭ್ಯಾಸ ಮಾಡಿಕೊಳ್ಳಬೇಡಿ. ಇದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗೆಯೇ ಶೂಸ್​ನಿಂದ ಪಾದಗಳು ಬಿಗಿಯಾಗುತ್ತಿದ್ದರೆ, ಸಾಧ್ಯವಾಗುವ ಸಮಯದಲ್ಲಿ ಚಪ್ಪಲಿಗಳನ್ನು ಧರಿಸುವುದು ಉತ್ತಮ.


ಕಾಲಕ್ಕೆ ಅನುಸಾರ ಶೂಗಳನ್ನು ಸ್ವಚ್ಛಗೊಳಿಸಿ. ನಿಮ್ಮ ಪಾದರಕ್ಷೆ ಹಾಳಾಗಿದ್ದರೆ ಅದನ್ನು ಬದಲಿಸಿ ಹೊಸದನ್ನು ಕೊಳ್ಳುವುದು ಉತ್ತಮ.
ವಿಭಿನ್ನ ವಸ್ತುಗಳಿಂದ ಪಾದರಕ್ಷೆಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಆಯಾಯ ಕಾಲಕ್ಕೆ ತಕ್ಕಂತೆ ಧರಿಸುವ ಶೂಗಳನ್ನು ಆಯ್ಕೆ ಮಾಡಿಕೊಳ್ಳಿ. ಉದಾ: ಮಳೆಗಾಲದಲ್ಲಿ ಚರ್ಮದ ಪಾದರಕ್ಷೆಯನ್ನು ಧರಿಸಿದರೆ ಬೇಗನೇ ಹಾಳಾಗುತ್ತದೆ.
ಮಳೆಗಾಲದಲ್ಲಿ ಒದ್ದೆಯಾಗಿರುವ ಶೂಗಳನ್ನು ಹಾಗೆಯೇ ತೆಗೆದಿಡಬೇಡಿ. ಪಾದರಕ್ಷೆಗಳು ನೆನೆದಿದ್ದರೆ ಅದನ್ನು ಸ್ವಚ್ಛಗೊಳಿಸಿ ಒಣಗಿಸಿಡಬೇಕು.
ಚರ್ಮದ ಪಾದರಕ್ಷೆಗಳು  ಕೊಳಕಾಗಿದ್ದರೆ, ಮೊದಲು ಅದರ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿ. ಬಳಿಕ ಲೆದರ್ ಕ್ಲೀನರ್ ಬಳಸಿ ಪಾದರಕ್ಷೆಯನ್ನು ಕ್ಲೀನ್ ಮಾಡಬೇಕಾಗಿದೆ. ಯಾವುದೇ ಕಾರಣಕ್ಕೂ ಲೆದರ್ ಶೂ ಸ್ವಚ್ಛಗೊಳಿಸಲು ನೀರನ್ನು ಬಳಸಬಾರದು.
ಶೂಗಳನ್ನು ಪಾಲಿಶ್ ಅಥವಾ ಕಸೂತಿ ಮಾಡುವ ಮೊದಲು ಯಾವಾಗಲು ಶೂ ಲೇಸ್​ ತೆಗೆಯುವುದನ್ನು ಮರೆಯಬೇಡಿ. ಲೇಸ್​​ಗಳನ್ನು ತೆಗೆಯುವುದರಿಂದ ಶೂಗಳನ್ನು ಸರಿಯಾಗಿ ಸ್ವಚ್ಛಗೊಳಿಸಬಹುದು.
ಹಳೆಯ ಪಾದರಕ್ಷೆಗಳನ್ನು ಬದಲಿಸುವುದು ಉತ್ತಮ. ಸವೆದು ಹೋಗಿರುವ ಪಾದರಕ್ಷೆಗಳಿಂದ ಪಾದಗಳಲ್ಲಿ ನೋವುಂಟಾಗಬಹುದು. ನಿರಂತರ ಇಂತಹ ನೋವುಗಳು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆಗಳನ್ನು ಪಡೆಯಿರಿ.
ದುಬಾರಿ ಶೂಗಳನ್ನು ಕೊಂಡುಕೊಂಡಿದ್ದರೆ ವೆದರ್ ಪ್ರೂಫ್ ಲಿಕ್ವಿಡ್​ನ್ನು ಸಿಂಪಡಿಸಿ. ಇದರಿಂದ ಮಳೆಯಿಂದ ಅಥವಾ ಚಳಿಯಲ್ಲಿ ಶೂ ಹಾಳಾಗುವ ಸಾಧ್ಯತೆ ಕಡಿಮೆ ಇರುತ್ತದೆ.

Trending Now