#Nutritiousfoods: ನಿದ್ರೆಯ ಸಮಸ್ಯೆ ಇದ್ದರೆ ಈ ಆಹಾರಗಳನ್ನು ಸೇವಿಸಿ

webtech_news18 , Advertorial
ಮನುಷ್ಯನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಆಹಾರದಲ್ಲಿರುವ ಮೆಗ್ನೀಷಿಯಂ ಪಾತ್ರ ಪ್ರಮುಖವಾಗಿರುತ್ತದೆ. ಇದು ಡಿಎನ್​ಎಯನ್ನು ಸಂಶ್ಲೇಷಿಸುವ ಮೂಲಕ ಇನ್ಸುಲಿನ್ ಮತ್ತು ಚಯಾಪಚಯವನ್ನು (ಮೆಟಬಾಲಿಸಮ್) ನಿಯಂತ್ರಯಿಸುತ್ತದೆ. ದೇಹದಲ್ಲಿ ಮೆಗ್ನೀಷಿಯಂ ಅಂಶ ಕಡಿಮೆಯಾದರೆ ಮಧುಮೇಹ, ಹೃದ್ರೋಗ ಮತ್ತು ಮೆದುಳಿಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಮೆಗ್ನೀಷಿಯಂ ಸಮೃದ್ದವಾಗಿರುವ ಆಹಾರಗಳು ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ನಿದ್ರಾಹೀನತೆಯ ಸಮಸ್ಯೆಯನ್ನು ದೂರ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ.

ಬಟರ್​​ಫ್ರೂಟ್​(ಅವಕಾಡೊ), ಬಾದಾಮಿ ಮತ್ತು ಅಂಜೂರವನ್ನು ತಿನ್ನುವುದರಿಂದ ದೇಹದಲ್ಲಿ ಮೆಗ್ನೀಷಿಯಂ ಅಂಶವನ್ನು ಹೆಚ್ಚಿಸಿಕೊಳ್ಳಬಹುದು.
ಚಾಕೊಲೇಟ್, ಹುರುಳಿ ಕಾಳುಗಳು, ಪಾಲಕ್ ಮತ್ತು ಸ್ವಿಸ್ ಚಾರ್ಡ್​ ಸೊಪ್ಪುಗಳಲ್ಲೂ ಮೆಗ್ನೀಷಿಯಂ ಅಂಶವು ಹೇರಳ ಪ್ರಮಾಣದಲ್ಲಿರುತ್ತದೆ.
ಮೆಗ್ನೀಷಿಯಂ ಕೊರತೆ ಇರುವವರು ಕುಂಬಳಕಾಯಿ, ಅಪ್ರಿಕಾಟ್, ಮೊಸರು, ಕೆಫ್ಫಿರ್ ನಿಂಬೆ, ಬಾಳೆಹಣ್ಣಗಳನ್ನು ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಪರಿಹಾರ ಕಾಣಬಹುದು.

Trending Now