ನೀವು ನಗದಿದ್ದರೆ ಬೇರೆಯವರು ನಿಮ್ಮನ್ನ ಏನೆಂದು ಯೋಚಿಸುವರು ಗೊತ್ತೆ?

webtech_news18 , Advertorial
ನಗುವುದು ಸಹಜ ಧರ್ಮ. ನಗಿಸುವುದು ಪರಧರ್ಮ ಎಂಬ ಮಾತಿದೆ. ಆದರೆ ನಗದೇ ಇರುವುದು? ಹೌದು  ಸಂತೋಷವು ವ್ಯಕ್ತಪಡಿಸಲು ಮುಖದಲ್ಲಿ ನಗು ಬಹಳ ಮುಖ್ಯ. ಯಾರೊಂದಿಗೂ ನಗದಿದ್ದರೆ  ಅವರು ಮನುಷ್ಯರೇ ಎಂಬ ಅನುಮಾನ ಮೂಡುತ್ತದೆ ಎಂದು ಆಧ್ಯಾತ್ಮಿಕ ಗುರು ಓಶೋ ರಜನೀಶ್ ಒಂದು ಕಡೆ ಹೇಳಿರುವುದು ಇದೇ ಕಾರಣಕ್ಕಿರಬಹುದು. ಮುಖದಲ್ಲಿ ನಗುವು ಇರದಿದ್ದರೆ ಇತರರಿಗೆ ನಿಮ್ಮ ಮೇಲೆ ವಿಭಿನ್ನ ಅಭಿಪ್ರಾಯ ಮೂಡಬಹುದು. ಮುಖದಲ್ಲಿ ಒಂದು ಸಣ್ಣ ನಗು ಇಲ್ಲದಿದ್ದರೆ ಜನರು ಏನೆಲ್ಲಾ ಯೋಚಿಸಬಹದು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮುಖದಲ್ಲಿ ನಗುವಿಲ್ಲದಿದ್ದರೆ ಸಾಮಾನ್ಯವಾಗಿ ಜನರು ಏನೋ ಸಮಸ್ಯೆ ಇದೆ ಎಂದು ಭಾವಿಸುತ್ತಾರೆ. ಹಾಗೆಯೇ  ದುಃಖದ ಸಮಯದಲ್ಲಿ ಯಾರಲ್ಲೂ ನಗು ಅರಳುವುದಿಲ್ಲ. ಇಲ್ಲ ನಗಲು ಬಯಸುವುದಿಲ್ಲ ಎಂಬುದು ಕೂಡ ವಾಸ್ತವ.


ಮನೆಯಲ್ಲಿನ ಕೆಲ ಪರಿಸ್ಥಿತಿಗಳಿಂದ ಎಲ್ಲ ಸಂದರ್ಭದಲ್ಲಿ ನಗು ಮೂಡುವುದಿಲ್ಲ. ನಗುವಿಲ್ಲದಿದ್ದರೆ ಇಂತಹ ಸಮಯದಲ್ಲಿ ಮನೆಯಲ್ಲೂ ಏನೋ ಗಂಭೀರ ಸಮಸ್ಯೆಯಿದೆ ಎಂಬ ಭಾವನೆ ಜನರಲ್ಲಿರುತ್ತದೆ.
ಸದಾ ಹಸನ್ಮುಖಿ ಆಗಿರುವವರನ್ನು ಎಲ್ಲರೂ ಹೃದಯವಂತರು ಅಂದುಕೊಳ್ಳುತ್ತಾರೆ. ಅದೇ ರೀತಿ ನಗುವಿಲ್ಲದಿದ್ದರೆ ಯಾರೂ ಕೂಡ ಸ್ನೇಹ ಬಯಸುವುದಿಲ್ಲ.
ಕಡಿಮೆ ನಗುವವರು ಅಥವಾ ಹರ್ಷಚಿತ್ತದಿಂದ  ಕೂಡಿರದವರನ್ನು ಗಾಂಚಾಲಿ ಸ್ವಭಾದವರು ಎಂದೇ ಭಾವಿಸುತ್ತಾರೆ.
ಅದೇ ರೀತಿ ಮಂದಹಾಸ ಇಲ್ಲದವರನ್ನು ಸ್ವಾರ್ಥಿ ಎಂದೇ ಹೆಚ್ಚಿನವರು ಪರಿಗಣಿಸುತ್ತಾರೆ. ಇದು ಸಾಮಾನ್ಯವಾಗಿ ತಪ್ಪುಗ್ರಹಿಕೆಯಾಗಿರುತ್ತದೆ.
ನಿಮ್ಮ ಗೆಳೆಯರೊಂದಿಗೆ ನಗುವಿನಲ್ಲಿ ಕಾಲ ಕಳೆಯದಿದ್ದರೆ, ನೋವಿನ ಸಮಯದಲ್ಲಿ ಹೇಗೆ ತಾನೆ ಅವರು ನಿಮ್ಮೊಂದಿಗಿರುತ್ತಾರೆ? ಜನರಿಗೆ ನೀವು ಇಷ್ಟವಾಗ ಬೇಕಿದ್ದರೆ ಮುಗುಳು ನಗೆ ಇರಲೇಬೇಕು. ಏನೇ ಆದರೂ ನಗು ಎಂಬುದು ಆರೋಗ್ಯಕ್ಕೆ ಅತ್ಯಗತ್ಯ.

Trending Now