ಮೂರನೇ ಮಗುವಿನ ಸೀಮಂತದಲ್ಲಿ ಹೆಜ್ಜೆ ಹಾಕಿದ್ದ ಟಾಲಿವುಡ್​ನ 'ರಂಭೆ' ರಂಭಾ..!

ಬಹುಭಾಷಾ ನಟಿ ರಂಭಾ ಯಶಸ್ಸಿನ ಉತ್ತುಗಂದಲ್ಲಿರುವಾಗಲೇ ಇದ್ದಕ್ಕಿದ್ದಂತೆಯೇ ಸಿನಿ ರಂಗದಿಂದ ಮಾಯವಾಗಿದ್ದರು. ಸಾಕಷ್ಟು ಜನರಿಗೆ ಅವರು ಎಲ್ಲಿ, ಏನು ಮಾಡುತ್ತಿದ್ದಾರೆಂದು ಗೊತ್ತೇ ಇರಲಿಲ್ಲ. ಜತೆಗೆ ಒಮ್ಮೆ ಅವರಿಗೆ ವಿವಾಹವಾಗಿರುವ ವಿಷಯ ಹೊರಬಿದ್ದಿತ್ತು. ಇಂದಿರನ್​ ಎಂಬುವರನ್ನು ವಿವಾಹವಾಗಿ ಮುದ್ದಾದ ಎರಡು ಮಕ್ಕಳಿರುವ ರಂಭಾ ಈಗ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದು, ನಿನ್ನೆಯಷ್ಟೆ (ಆ.13) ಸೀಮಂತ ಮಾಡಿಸಿಕೊಂಡಿದ್ದಾರೆ. ಮೂರನೇ ಮಗುವಿನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿರುವ ರಂಭಾ ತಮ್ಮ ಸೀಮಂತದಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದು, ಆ ಫೋಟೋಗಳು ಈಗ ವೈರಲ್​ ಆಗಿವೆ. 

webtech_news18 , Advertorial

Trending Now