Photos: ದೀಪಿಕಾ-ರಣವೀರ್ ಸಿಂಗ್​​ ವಿವಾಹಕ್ಕೆ ಕಂಟಕ: ಮದುವೆಗೆ ಮುನ್ನ ನಡೆಯಲಿದೆ ವಿಶೇಷ ಪೂಜೆ..! 

webtech_news18 , Advertorial
ದೀಪಿಕಾ-ರಣವೀರ್​ ಸಿಂಗ್​ ವಿವಾಹ ನಡೆಯಲಿರುವುದು ತಿಳಿದಿರುವ ವಿಷಯವೇ. ಇಟಲಿಯ ಲೇಕ್​ ಕೊಮೊ ನಗರದಲ್ಲಿ ನಡೆಯಲಿರುವ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಲಿದೆ. ಅದರಲ್ಲೂ ಎಲ್ಲ ರೀತಿಯ ಶಾಸ್ತ್ರಗಳನ್ನು ಚಾಚು ತಪ್ಪದೆ ಈ ವಿವಾಹದಲ್ಲಿ ಪಾಲಿಸಲಾಗುವುದಂತೆ.
ವಿವಾಹ ಇಟಲಿಯಲ್ಲಿ ನಡೆಯುವುದಾದರೂ ವಿವಾಹದ ಸಂಪ್ರದಾಯಗಳು ಭಾರತದಿಂದಲೇ ನಡೆಯಲಿದೆಯಂತೆ. ಪ್ರಮುಖವಾಗಿ ವಿಶೇಷ ಪೂಜೆಯೊಂದು ಇಲ್ಲೇ ನಡೆಯಲಿದ್ದು, ಅದನ್ನು ದೀಪಿಕಾ ಅವರ ಅಮ್ಮ ಮುಂದೆ ನಿಂತು ಮಾಡಿಸಲಿದ್ದಾರಂತೆ.


ವಿವಾಹಕ್ಕೆ ಮುನ್ನ ನಡೆಯಬೇಕಿರುವ ವಿಶೇಷ ಶಾಸ್ತ್ರ ನಂದಿ ಪೂಜೆ. ವಿವಾಹಕ್ಕೆ 10 ದಿನ ಇರುವಾಗಲೇ ಬೆಂಗಳೂರಿನಲ್ಲಿ ಈ ಶಾಸ್ತ್ರ ನಡೆಯಲಿದೆ ಎಂದು ಸಿನಿಮಾ ನಿಯತಕಾಲಿಕೆಯೊಂದು ವರದಿ ಮಾಡಿದೆ.
ಈ ಪೂಜೆಗೆಂದೇ ದೀಪಿಕಾ ಅವರ ಅಮ್ಮ ಉಜ್ಜಲಾ ಪಡುಕೋಣೆ ಅವರು ಈಗಾಗಲೇ ಬೆಂಗಳೂರಿನಲ್ಲಿರುವ ನಂದಿ ದೇವಾಲಯದಲ್ಲಿ ಈ ಶಾಸ್ತ್ರಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಅಲ್ಲದೆ ದೇವಾಲಯದರೊಂದಿಗೆ ಮಾತುಕತೆ ಸಹ ಮುಗಿದಿದೆ. ಈ ಶಾಸ್ತ್ರದಲ್ಲಿ ಭಾಗವಹಿಸಲು ರಣವೀರ್​ ಅವರ ಕುಟುಂಬಕ್ಕೂ ಸಹ ಆಹ್ವಾನಿಸಲಾಗಿದೆಯಂತೆ.
ವಿವಾಹದ ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಸಹ ಆಯೋಜಿಸಲಾಗುವುದು ಎನ್ನಲಾಗುತ್ತಿದೆ.

Trending Now