ನೀಲಿ ತಾರೆ ಸನ್ನಿ ಮೊದಲ ಸಲ ನೀಲಿ ಚಿತ್ರ ನೋಡಿ ಮಾಡಿದ್ದೇನು?

webtech_news18 , Advertorial
ಸನ್ನಿ ಲಿಯೋನ್​ ಅವರ ಜೀವನಾಧಾರಿತ ವೆಬ್​ ಸೀರೀಸ್​ 'ಕರಣ್​ಜಿತ್​'ನಿಂದಾಗಿ ಅವರ ಜೀವನದ ಪ್ರತಿಯೊಂದು ರಹಸ್ಯವೂ ತೆರೆ ಮೇಲೆ ಬರುತ್ತಿದೆ. ಇದರಿಂದಾಗಿ ಅವರ ಜೀವನದ ಪ್ರತಿಯೊಂದು ವಿಷಯವೂ ಬಹಿರಂಗವಾಗುತ್ತಿದೆ. ಸ್ಟಾರ್​ ಸನ್ನಿ ಎಲ್ಲರಿಗೂ ಗೊತ್ತು. ಆದರೆ ಕರಣ್​ಜಿತ್​ ಮಾತ್ರ ಯಾರಿಗೂ ಗೊತ್ತಿಲ್ಲ
ಈ ವೆಬ್​ ಸೀರೀಸ್​ನಲ್ಲಿ ಪ್ರಸಾರವಾಗಿರುವ ಸಂಚಿಕೆಯಲ್ಲಿನ ಒಂದು ವಿಷಯ ಬಹಳ ಸುದ್ದಿಯಲ್ಲಿದೆ. ಅದು ಸಹ ನೀಲಿ ತಾರೆ ಸನ್ನಿ ಮೊದಲು ನೀಲಿ ಚಿತ್ರ ನೋಡಿದ ವಿಷಯ. ಅದು ಕರಣ್​ಜಿತ್ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿತ್ತು ಎಂದು ಅದರಲ್ಲಿ ತೋರಿಸಲಾಗಿದೆ.


ವೆಬ್​ ಸರಣಿಯ ಪ್ರಕಾರ ಸನ್ನಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನೀಲಿ ಚಿತ್ರ ನೋಡಿದ್ದು ತನ್ನ ಸಹೋದರ ಹಾಗೂ ಸ್ನೇಹಿತನೊಂದಿಗೆ. ಅದು ಸಹ ಗೊತ್ತಿಲ್ಲದಂತೆ ಮಾಡಿದ ಒಂದು ಸಣ್ಣತಪ್ಪು. ಇದಾದ ನಂತರ ಅವರು ಪಶ್ಚಾತಾಪದಿಂದ ಒದ್ದಾಡಿದ್ದು ಅಷ್ಟಿಷ್ಟಲ್ಲ. ಅದಕ್ಕಾಗಿ ಅದರಿಂದ ಹೊರ ಬರಲು ಮಾಡಿದ ಪ್ರಯತ್ನವನ್ನು ನೋಡಿದರೆ, ಚಿಕ್ಕ ವಯಸ್ಸಿನಲ್ಲಿ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಎಂದು ತಿಳಿಯುತ್ತದೆ.
ನೀಲಿ ಚಿತ್ರ ನೋಡಿದ ತಪ್ಪಿನ ಅರಿವಾಗುತ್ತಿದ್ದಂತೆಯೇ ಸನ್ನಿ ಗುರು ನಾನಕ್​ ದೇವ್​ ಅವರ ಫೋಟೋ ಎದುರು ಕ್ಷಮೆಯಾಚಿಸಿದ್ದರಂತೆ. ಅವರ ಜೀವನದ ಈ ಅನುಭವ ಯಾರಿಗೂ ಗೊತ್ತಿರಲಿಲ್ಲ.
ಝಿ-5ನಲ್ಲಿ ಪ್ರಸಾರವಾಗುತ್ತಿರುವ ವೆಬ್​ ಸರಣಿಯಲ್ಲಿ ಸನ್ನಿ ಅವರ ಬಾಲ್ಯದಿಂದ ಹಿಡಿದು ನಟಿಯಾಗುವವರೆಗಿನ ಪಯಣವನ್ನು ತೋರಿಸಲಾಗುವುದು. ಈ ಸರಣಿಯಲ್ಲಿ ಪ್ರಸಾರವಾಗಲಿರುವ ಮತ್ತಷ್ಟು ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ತರಲಿದ್ದೇವೆ.

Trending Now