PREVNEXT
News18 Kannada | March 12, 2023, 17:56 IST | Bangalore [Bangalore], India

Vehicle Population: ಬೆಂಗಳೂರಲ್ಲಿ ಎಷ್ಟು ಕಾರ್​, ಬೈಕ್​ಗಳಿವೆ? ಲೆಕ್ಕ ತಿಳಿದ್ರೆ ಶಾಕ್ ಆಗ್ತೀರಿ!

ಬೆಂಗಳೂರಿನಲ್ಲಿ ಎಷ್ಟು ವಾಹನಗಳಿವೆ ಎಂಬ ಕುರಿತು ಕರ್ನಾಟಕ ಸಾರಿಗೆ ಇಲಾಖೆ ಅಂಕಿ ಅಂಶ ಬಿಡುಗಡೆಗೊಳಿಸಿದೆ.

    1/ 8

    ಬೆಂಗಳೂರು ಹಿಂದೆಂದಿಗಿಂತಲೂ ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ. ಟ್ರಾಫಿಕ್ ಸಮಸ್ಯೆ ಬೆಂಬಿಡದೇ ರಾಜ್ಯ ರಾಜಧಾನಿಯನ್ನು ಕಾಡುತ್ತಿದೆ. ಇಷ್ಟೊಂದು ಟ್ರಾಫಿಕ್ ಇರುವ ಬೆಂಗಳೂರಿನಲ್ಲಿ ಎಷ್ಟು ವಾಹನಗಳಿರಬಹುದು ಎಂಬ ಪ್ರಶ್ನೆ ಕಾಡದೇ ಇರದು. (ಸಾಂದರ್ಭಿಕ ಚಿತ್ರ)

    2/ 8

    ಬೆಂಗಳೂರಿನಲ್ಲಿ ಎಷ್ಟು ವಾಹನಗಳಿವೆ ಎಂಬ ಕುರಿತು ಕರ್ನಾಟಕ ಸಾರಿಗೆ ಇಲಾಖೆ ಅಂಕಿ ಅಂಶ ಬಿಡುಗಡೆಗೊಳಿಸಿದೆ.  (ಸಾಂದರ್ಭಿಕ ಚಿತ್ರ)

    3/ 8

    ಬೆಂಗಳೂರು ನಗರದಲ್ಲಿ 2013-2014ರ ವೇಳೆಗೆ 13.0 ಲಕ್ಷ ಕಾರುಗಳಿದ್ದವು. 37.8 ಲಕ್ಷ ದ್ವಿಚಕ್ರ ವಾಹನಗಳಿದ್ದವು. ಆ ವೇಳೆ ಬೆಂಗಳೂರಿನಲ್ಲಿ ಇದ್ದ ಒಟ್ಟು ವಾಹನಗಳ ಸಂಖ್ಯೆ 58.9 ಲಕ್ಷವಾಗಿತ್ತು.  (ಸಾಂದರ್ಭಿಕ ಚಿತ್ರ)

    4/ 8

    2014-15ರಲ್ಲಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ 41.7 ಲಕ್ಷಕ್ಕೇರಿತು. ಜೊತೆಗೆ ಕಾರುಗಳ ಸಂಖ್ಯೆ 14.2 ಲಕ್ಷಕ್ಕೇರಿ ಒಟ್ಟು ವಾಹನಗಳ ಸಂಖ್ಯೆ 64. 4 ಲಕ್ಷಕ್ಕೆ ಏರಿಕೆಯಾಯಿತು.  (ಸಾಂದರ್ಭಿಕ ಚಿತ್ರ)

    5/ 8

    2015-16ರಲ್ಲೂ ವಾಹನಗಳ ಸಂಖ್ಯೆಯಲ್ಲಿ ವೇಗವಾಗಿಯೇ ಏರಿಕೆಯಾಯಿತು. ಆ ವರ್ಷ 45.8 ಲಕ್ಷ ದ್ವಿಚಕ್ರವಾಹನ, 15.2 ಲಕ್ಷ ಕಾರುಗಳು ಬೆಂಗಳೂರಲ್ಲಿ ಇದ್ದವು ಎಂದು ಸಾರಿಗೆ ಇಲಾಖೆಯ ಅಂಕಿ ಅಂಶಗಳಲ್ಲಿ ಬಹಿರಂಗಗೊಂಡಿದೆ.  (ಸಾಂದರ್ಭಿಕ ಚಿತ್ರ)

    6/ 8

    ಇನ್ನು ಮುಂದಿನ ವರ್ಷವೂ ಬೆಂಗಳೂರಿನ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಮುಂದುವರೆಯಿತು. ಈ ವರ್ಷ ಬೆಂಗಳೂರಿನಲ್ಲಿ ದ್ವಿಚಕ್ರವಾಹನಗಳ ಸಂಖ್ಯೆ ಅರ್ಧ ಕೋಟಿಗೇರಿತು. ಅಂದರೆ  50. 1 ಲಕ್ಷ ದ್ವಿಚಕ್ರವಾಹನಗಳಿದ್ದರೆ, 16.4 ಲಕ್ಷ ಕಾರುಗಳಿದ್ದವು.  (ಸಾಂದರ್ಭಿಕ ಚಿತ್ರ)

    7/ 8

    ಇನ್ನು ಇತ್ತೀಚಿನ ಮಾಹಿತಿ ನೋಡುವುದಾದರೆ 2022-23ರ ಫೆಬ್ರವರಿ ತಿಂಗಳವರೆಗೆ ಬೆಂಗಳೂರಿನಲ್ಲಿ 73.06 ಲಕ್ಷ ದ್ವಿಚಕ್ರವಾಹನಗಳಿವೆ. ಜೊತೆಗೆ 22.2 ಲಕ್ಷ ಕಾರುಗಳಿವೆ. ಅಂದರೆ ಬೆಂಗಳೂರಿನಲ್ಲಿ ಕಾರ್, ಬೈಕ್​ಗಳನ್ನು ಸೇರಿಸಿ 1.08 ಕೋಟಿ ವಾಹನಗಳಿವೆ ಎಂದು ಸಾರಿಗೆ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.  (ಸಾಂದರ್ಭಿಕ ಚಿತ್ರ)

    8/ 8

    ಒಟ್ಟಾರೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಟ್ರಾಫಿಕ್​ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಜೊತೆಗೆ ಹವಾಮಾನ ವೈಪರೀತ್ಯಕ್ಕೂ ಕಾರಣವಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    First published:March 12, 2023, 17:56 IST