ಮಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಬಂಗಲೆ, 12 ಸ್ಟಾಫ್​ ನೇಮಿಸಿದ ಭಾರತೀಯ ಕೋಟ್ಯಾಧಿಪತಿ

webtech_news18
ನ್ಯೂಸ್​ 18 ಕನ್ನಡಬ್ರಿಟನ್​ನಲ್ಲಿ ವಾಸವಿರುವ ಭಾರತೀಯ ಮೂಲದ ಕೋಟ್ಯಾಧಿಪತಿಯೊಬ್ಬರ ಮಗಳನ್ನು ವಿಶ್ವದ 'ಶ್ರೀಮಂತ' ವಿದ್ಯಾರ್ಥಿನಿ ಎನ್ನಲಾಗುತ್ತಿದೆ. ಇನ್ನು ಸ್ಕಾಟ್​ಲ್ಯಾಂಡ್​ನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸುತ್ತಿರುವ ಈಕೆಯ ಸಹಾಯಕ್ಕೆಂದು ಕುಟುಂಬವು 12 ಪ್ರತ್ಯೇಕ ಸ್ಟಾಫ್​ಗಳನ್ನು ನೇಮಿಸಿದೆ. 'ದ ಸನ್​' ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ವಯ ಭಾರತೀಯ ಮೂಲಕ ಕೋಟ್ಯಾಧಿಪತಿಯ ಮಗಳು ಸ್ಕಾಟ್​ಲ್ಯಾಂಡ್​ನ ಪೂರ್ವ ಭಾಗದಲ್ಲಿರುವ ಯುನಿವರ್ಸಿಟಿ ಆಫ್​ ಸೇಂಟ್​ ಆ್ಯಂಡ್ರೂಸ್​ನ ಮೊದಲ ವರ್ಷದ ವಿದ್ಯಾರ್ಥಿನಿ ನ್ನಲಾಗಿದೆ.


ಆಕೆಯ ಸಹಾಯಕ್ಕಾಗಿ ಓರ್ವ ಹೌಸ್​ ಮ್ಯಾನೇಜರ್​, ಮೂವರು ಸಹಾಯಕರು, ಓರ್ವ ಮಾಲಿ, ಓರ್ವ ಮನೆ ಸಹಾಯಯಕಿ ಹಾಗೂ ಓರ್ವ ಅಡುಗೆ ತಯಾರಕರಿದ್ದಾರೆ. ಇವರನ್ನು ಹೊರತುಪಡಿಸಿ ಮೂವರು ಅನ್ಯ ಸಹಾಯಕರು, ಓರ್ವ ವೈಯುಕ್ತಿಕ ಅಡುಗೆ ತಯಾರಕ ಹಾಗೂ ಡ್ರೈವರ್​ ಕೂಡಾ ಇದ್ದಾರೆ. ಇವರೆಲ್ಲರನ್ನೂ ಮಗಳಿಗೆಂದೇ ನಿರ್ಮಿಸಿರುವ ಐಷಾರಾಮಿ ಬಂಗಲೆಯಲ್ಲಿ ನೇಮಿಸಲಾಗಿದೆ. ಸ್ಕಾಟ್​ಲ್ಯಾಂಡ್​ನ ವಿಶ್ವವಿದ್ಯಾನಿಲಯದಲ್ಲಿ 4 ವರ್ಷ ವ್ಯಾಸಂಗ ನಡೆಸುವ ತಮ್ಮ ಮಗಳು ಸಮಯದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಸಾಮಾನ್ಯ ಹಾಸ್ಟೆಲ್​ನಲ್ಲಿರಬಾರದೆಂದು ಇವರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.ಕೆಲ ತಿಂಗಳ ಹಿಂದೆ ಇದಕ್ಕೆಂದೇ ಜಾಹೀರಾತೊಂಣದನ್ನು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ಮನೆಯಲ್ಲಿ ಕೆಲಸ ಮಾಡುವ ಲವಲವಿಕೆಯಿಂದ ಕೂಡಿದ ಮನೆ ಕೆಲಸವನ್ನು ನೋಡಿಕೊಂಡು, ಎಲ್ಲರಿಗೂ ಕೆಲಸವನ್ನು ತಿಳಿಸಿಕೊಡುವ ಮನೆ ಸಹಾಯಕಿ ಬೇಕು ಎಂದು ತಿಳಿಸಲಾಗಿತ್ತು. ಭಾರತದ 'ಸಿಲ್ವರ್​ ಸ್ವರ್ಣ್​ ಏಜೆನ್ಸಿ'ಯಲ್ಲಿ ಈ ಜಾಹೀರಾತು ಪ್ರಕಟವಾಗಿತ್ತು. ಅಲ್ಲದೇ ಸಿಬ್ಬಂದಿಗೆ ವಾರ್ಷಿಕ ವೇತನ 28 ಲಕ್ಷ ನೀಡುವುದಾಗಿಯೂ ತಿಳಿಸಿದ್ದರು.

Trending Now