ರೋಗಿಯ ಕೊನೆಯಾಸೆ ಪೂರೈಸಿದ ಆ್ಯಂಬುಲೆನ್ಸ್ ಸಿಬ್ಬಂದಿಗಳು

webtech_news18 , Advertorial
-ನ್ಯೂಸ್ 18 ಕನ್ನಡಸಾವಿನಂಚಿನಲ್ಲಿರುವ ಪ್ರತಿಯೊಬ್ಬರಲ್ಲೂ ಕೊನೆಯ ಆಸೆಯೊಂದು ಮೂಡಿರುತ್ತದೆ. ಆದರೆ ಅಂತಹ ಆಸೆಗಳನ್ನು ಈಡೇರಿಸಲಾಗದೇ ಇಹಲೋಕ ತ್ಯಜಿಸುವವರೆ ಹೆಚ್ಚು.  ಆಸ್ಟ್ರೇಲಿಯಾದ 72ರ ಹರೆಯದ ಕ್ಯಾನ್ಸರ್‌ ಪೀಡಿತ ರೋನ್‌ ಮೆಕಾರ್ಟ್ನಿರಿಗೆ ತಮ್ಮ ಕೊನೆಯ ಇಚ್ಛೆ ಪೂರೈಸಿ ಇಂದು ವಿಶ್ವದಾದ್ಯಂತ ಸುದ್ದಿಯಾಗಿದ್ದಾರೆ.


ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೋನ್​ ಮೆಕಾರ್ಟ್ನಿ ಅವರ ಆರೋಗ್ಯ ಕಳೆದ ಶನಿವಾರ ತೀರಾ ಹದಗೆಟ್ಟಿತ್ತು. ಈ ಹಿನ್ನಲೆಯಲ್ಲಿ ಅವರ ಪತ್ನಿ ಶೆರೋನ್ ಕ್ವೀನ್ಸ್​ಲ್ಯಾಂಡ್​ ಆಸ್ಫತ್ರೆಗೆ ಕರೆ ಮಾಡಿದ್ದರು. ಆ್ಯಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಇದು ತನ್ನ ಕೊನೆಯ ಪಯಣ ಎಂದಿರಿತಿದ್ದರು ರೋನ್ ಮೇಕಾರ್ಟ್ನಿ.ಪಯಣದೆಡೆಯಲ್ಲಿ ರೋನ್ ಏನನ್ನೋ ಹೇಳಲು ಇಚ್ಛಿಸಿದ್ದಾರೆ. ಈ ವೇಳೆ ಸಹಾಯಕ್ಕೆ ಬಂದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ರೋನ್​ರೊಂದಿಗೆ ಮಾತನಾಡಲು  ಪ್ರಯತ್ನಿಸಿದ್ದಾರೆ.  ತನ್ನ ಪತಿಯು ಕಳೆದೆರಡು ದಿನಗಳಿಂದ ಯಾವುದೇ ಆಹಾರಗಳನ್ನು ಸೇವಿಸಿರಲಿಲ್ಲ ಎಂದು ಶೆರೋನ್ ತಿಳಿಸಿದರು. ರೋಗಿಯ ಇಚ್ಛೆಯನ್ನು ಮನಗಂಡ ಅಂಬ್ಯುಲೆನ್ಸ್ ಸಿಬ್ಬಂದಿ ಏನನ್ನಾದರೂ ತಿನ್ನಬೇಕೆಂಬ ಆಸೆ ಇದೆಯೇ ಎಂದು ಕೇಳಿಕೊಂಡಿದ್ದಾರೆ. ಇದೇ ವೇಳೆ ತನ್ನ ಫೇವರಿಟ್ ಐಸ್​ ಕ್ರೀಂ ಕ್ಯಾರಮಲ್ ಸಂಡೆ ತಂದು ಕೊಡುವಂತೆ ಕೋರಿದ್ದಾರೆ.ಇದಕ್ಕೆ ಸ್ಪಂದಿಸಿದ ಆಸ್ಪತ್ರೆಯ ಸಿಬ್ಬಂದಿಗಳು ಆ್ಯಂಬುಲೆನ್ಸ್​​ಗೆ ಐಸ್​ಕ್ರೀಂನ್ನು ತಲುಪಿಸಿದ್ದಾರೆ. ತಮ್ಮ ನೆಚ್ಚಿನ ಐಸ್​ಕ್ರೀಂನ್ನು ತಿಂದು ರೋನ್ ಮೆಕಾರ್ಟ್ನಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಕೊನೆಯಾಸೆಯನ್ನು ಈಡೇರಿಸಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಒಬ್ಬ ರೋಗಿಯ ಕೊನೆಯ ಆಗ್ರಹವನ್ನು ನೆರವೇರಿಸಲು ಆಸ್ಪತ್ರೆ ಸಿಬ್ಬಂದಿ ತೋರಿದ ಮಾನವೀಯ ಗುಣಗಳನ್ನು ರೋನ್ ಅವರ ಮಗಳು ಫೇಸ್​ಬುಕ್​ನಲ್ಲಿ ಹಂಚಿಕೊಂಡು, ಕ್ವಿನ್ಸ್​ಲ್ಯಾಂಡ್​ ಆಸ್ಪತ್ರೆ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಪೋಸ್ಟ್ ಈಗ​ ವೈರಲ್ ಆಗಿದ್ದು ಆ್ಯಂಬುಲೆನ್ಸ್​ನಲ್ಲಿದ್ದ ವೈದ್ಯಕೀಯ ಸಿಬ್ಬಂದಿಗಳ ನಡೆಗೆ ಎಲ್ಲೆಡೆಯಿಂದ ಅಪಾರ ಮೆಚ್ಚುಗೆಗಳು ವ್ಯಕ್ತವಾಗಿದೆ.

Trending Now